ವಿವಿಧ ಪದವೀಧರರಿಗೆ ಕೇಂದ್ರದ ಅಧೀನ ಇಲಾಖೆಯಲ್ಲಿ ಭರಪೂರ ಉದ್ಯೋಗ

udyoga-central
Published on

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ದೆಹಲಿಯಲ್ಲಿರುವ ಸ್ವಾಯತ್ತ ವೈಜ್ಞಾನಿಕ ಸೊಸೈಟಿಯಾಗಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್​ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್​ಫರ್ಮೇಷನ್​ ಟೆಕ್ನಾಲಜಿ (ಎನ್‍ಐಇಎಲ್‍ಐಟಿ)ಯಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಬಿ 49 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಎನ್‍ಐಇಎಲ್‍ಐಟಿಯಲ್ಲಿ ಖಾಲಿ ಇರುವ 49 ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 30 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 4, ಎಸ್‍ಸಿಗೆ 2, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 13 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಸೈಂಟಿಸ್ಟ್ ಬ ಹುದ್ದೆಗೆ ಮಾಸಿಕ ವೇತನ ನಿಯಮಾನುಸಾರ 56,100 ರೂ. ಹಾಗೂ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ 35,400 ರೂ. ವೇತನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ದೇಶಾದ್ಯಂತ ಯಾವ ಸ್ಥಳದಲ್ಲಾದರೂ ಕೆಲಸ ಮಾಡಲು ಸಿದ್ಧರಿರಬೇಕು. ಅಭ್ಯರ್ಥಿಗಳು 2 ಹುದ್ದೆಗೂ ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರತ್ಯೇಕ ಶುಲ್ಕ ಪಾವತಿಸಬೇಕು.

ಹುದ್ದೆ, ಸಂಖ್ಯೆ ವಿವರ

* ಸೈಂಟಿಸ್ಟ್ ಬಿ (ಗ್ರೂಪ್ ಎ) - 10

* ಸೈಂಟಿಫಿಕ್ ಅಸಿಸ್ಟೆಂಟ್ ಎ (ಗ್ರೂಪ್ ಬಿ) - 39

ಶೈಕ್ಷಣಿಕ ಅರ್ಹತೆ:

ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ಅಪ್ಲೈಡ್ ಎಲೆಕ್ಟ್ರಾನಿಕ್ಸ್/ ಫಿಜಿಕ್ಸ್‍ನಲ್ಲಿ ಎಂಎಸ್ಸಿ, ಎಂಸಿಎ, ಡಿಪಾರ್ಟ್‍ಮೆಂಟ್ ಆï ಎಲೆಕ್ಟ್ರಾನಿಕ್ಸ್ ಆ್ಯಂಡ್ ಅಕ್ರೆಡಿಟೇಷನ್ ಆï ಕಂಪ್ಯೂಟರ್ ಕೋರ್ಸ್, ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಕಂಪ್ಯೂಟರ್ ಸೈನ್ಸ್/ ಕಮ್ಯುನಿಕೇಷನ್/ ಕಂಪ್ಯೂಟರ್ ಆ್ಯಂಡ್ ನೆಟ್‍ವರ್ಕಿಂಗ್ ಸೆಕ್ಯುರಿಟಿ/ ಸಾï್ಟವೇರ್ ಸಿಸ್ಟಂ/ ಇನ್Àರ್ಮೇಷನ್ ಟೆಕ್ನಾಲಜಿ/ ಜಿಯೋಗ್ರಾಫಿಕಲ್ ಇನ್Àರ್ಮೇಷನ್ ಟೆಕ್ನಾಲಜಿ/ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್/ ಪವರ್ ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಮ್ಯಾನೇಜ್‍ಮೆಂಟ್/ ಡಿಸೈನ್/ ಇನ್ಫಮ್ಯಾಟಿಕ್ಸ್‍ನಲ್ಲಿ ಎಂಇ, ಎಂಟೆಕ್, ಬಿಇ, ಬಿಟೆಕ್, ಎಂಎಸ್ ಪದವಿ.

ವಯೋಮಿತಿ:

ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನುಗುಣವಾಗಿ ಗರಿಷ್ಠ 30 ವರ್ಷ. ಸರ್ಕಾರಿ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ:

ಸೈಂಟಿಸ್ಟ್ ಬಿ ಹುದ್ದೆಗೆ ಬಹು ಆಯ್ಕೆ ಮಾದರಿಯಲ್ಲಿ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಸೈಂಟಿಫಿಕ್ ಅಸಿಸ್ಟೆಂಟ್‍ಗೆ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಬೆಂಗಳೂರು ಸೇರಿ ಇತರ 12 ಸ್ಥಳಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ.

ಅರ್ಜಿ ಶುಲ್ಕ:

ಎಸ್‍ಸಿ, ಎಸ್‍ಟಿ, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 400 ರೂ., ಸಾಮಾನ್ಯವರ್ಗ ಹಾಗೂ ಇತರ ಅಭ್ಯರ್ಥಿಗಳಿಗೆ 800 ರೂ.

ಅರ್ಜಿ ಸಲ್ಲಿಸಲು ಕೊನೇ ದಿನ: 31.12.2020

ಅಧಿಸೂಚನೆಗೆ: https://bit.ly/2KEfTNM

ಮಾಹಿತಿಗೆ: http://nielit.gov.in

ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net