ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್​ನಲ್ಲಿ ಇಂಜಿನಿಯರಿಂಗ್​ ಪದವೀಧರರಿಗೆ ಭರ್ಜರಿ ಅವಕಾಶ

udyogavarte
Published on

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್​ (ಎನ್‍ಟಿಪಿಸಿ) ಲಿಮಿಟೆಡ್ ದೆಹಲಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು: 35

ಎನ್‍ಟಿಪಿಸಿಯಲ್ಲಿ ಸೇಫ್ಟಿ, ಐಟಿ, ಸೋಲಾರ್ ಪಿವಿ ವಿಭಾಗಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಹುದ್ದೆಗೂ ಕನಿಷ್ಠ 3 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ಹುದ್ದೆ ವಿವರ

* ಎಕ್ಸಿಕ್ಯೂಟೀವ್ (ಸೇಫ್ಟಿ) - 25

ಮೆಕ್ಯಾನಿಕಲ್/ ಪ್ರೊಡಕ್ಷನ್/ ಎಲೆಕ್ಟ್ರಿಕಲ್/ ಸಿವಿಲ್/ ಪವರ್ ಇಂಜಿನಿಯರಿಂಗ್/ ಇಂಡಸ್ಟ್ರಿಯಲ್ ಸೇಫ್ಟಿ/ ಫೈರ್ ಆ್ಯಂಡ್ ಸೇಫ್ಟಿಯಲ್ಲಿ ಪದವಿ ಪಡೆದಿದ್ದು, ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಇಂಡಸ್ಟ್ರಿಯಲ್ ಸೇಫ್ಟಿ/ ಯಲ್ಲಿ ಡಿಪೆÇ್ಲಮಾ ಮಾಡಿದ ಅಭ್ಯಥಿಗಳು ಅರ್ಜಿ ಸಲ್ಲಿಸಬಹುದು. ಗರಿಷ್ಠ 35 ವರ್ಷವಾಗಿದ್ದು, ವೃತ್ತಿ ಅನುಭವ ಇರುವವರು ಅರ್ಹರು.

* ಎಕ್ಸಿಕ್ಯೂಟೀವ್ (ಐಟಿ-ಡೇಟಾ ಸೆಂಟರ್/ ಡೇಟಾ ರಿಕವರಿ) - 8

ಕಂಪ್ಯೂಟರ್ ಸೈನ್ಸ್/ ಐಟಿ/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್‍ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಗರಿಷ್ಠ 35 ವರ್ಷ ವಯೋಮಿತಿ ನಿಗದಿಯಾಗಿದೆ.

* ಸೀನಿಯರ್ ಎಕ್ಸಿಕ್ಯೂಟೀವ್ (ಸೋಲಾರ್) - 1

ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಶೇ. 60 ಅಂಕ ಪಡೆದಿರಬೇಕು. ಗರಿಷ್ಠ ವಯೋಮಿತಿ 45 ನಿಗದಿಯಾಗಿದ್ದು, ವೃತ್ತಿ ಅನುಭವ ಅವಶ್ಯ.

* ಸ್ಪೆಷಲಿಸ್ಟ್ (ಸೋಲಾರ್) - 1

ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯಲ್ಲಿ ಶೇ.60 ಅಂಕ ಪಡೆದಿರಬೇಕು. ಎಂ.ಟೆಕ್, ಎಂಬಿಎ ಮಾಡಿದ ಅಭ್ಯರ್ಥಿಗಳಿಗೂ ಅವಕಾಶ ಇದೆ. ಗರಿಷ್ಠ ವಯೋಮಿತಿ 55 ವರ್ಷ.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 20 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 8, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 2, ಎಸ್ಸಿಗೆ 4, ಎಸ್ಟಿಗೆ 1 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

ವೇತನ: ಎಕ್ಸಿಕ್ಯೂಟೀವ್ ಹುದ್ದೆಗೆ ಮಾಸಿಕ 71,000 ರೂ. ನಿಗದಿಯಾಗಿದೆ. ಸೀನಿಯರ್ ಎಕ್ಸಿಕ್ಯೂಟೀವ್ ಹಾಗೂ ಸ್ಪೆಷಲಿಸ್ಟ್ ಹುದ್ದೆಗೆ ಅಭ್ಯರ್ಥಿಗಳ ವೃತ್ತಿ ಅನುಭವ ಆಧರಿಸಿ ವೇತನ ನಿಗದಿಪಡಿಸಲಾಗುವುದು.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 300 ರೂ. ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 15.4.2021

ಅಧಿಸೂಚನಗೆ: https://bit.ly/3dqlSjO

ಮಾಹಿತಿಗೆ: http://www.ntpccareers.net

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net