ಮುಂಬೈ ಮೆಟ್ರೋದಲ್ಲಿ ಇಂಜಿನಿಯರಿಂಗ್​​ ಪದವೀಧರರಿಗೆ ಆಹ್ವಾನ: 68 ಸಾವಿರ ರೂ.ವರೆಗೆ ಸಂಬಳ

udyogamitra-mumbai
Published on

ಮುಂಬೈ ಮೆಟ್ರೋ ರೈಲ್ ಕಾಪೋರೇಷನ್ ಲಿಮಿಟೆಡ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಹಾಗೂ ಡೆಪ್ಯುಟೇಷನ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಇತರ ಅರ್ಹತೆಗಳನ್ನು ಆಧರಿಸಿ ಶಾರ್ಟ್​ಲಿಸ್ಟ್ ಮಾಡಿ ವೈಯಕ್ತಿಯ ಸಂದರ್ಶನ ಮೂಲಕ ಅಂತಿಮ ಆಯ್ಕೆ ನಡೆಸಲಾಗುವುದು.

ಹುದ್ದೆ ವಿವರ

* ಡೆಪ್ಯುಟಿ ಇಂಜಿನಿಯರ್ (ಪಿಎಸ್​ಟಿ) - 2

* ಡೆಪ್ಯುಟಿ ಇಂಜಿನಿಯರ್ (ಇ ಆಂಡ್ ಎಂ) - 5

* ಜೂನಿಯರ್ ಇಂಜಿನಿಯರ್-ಐಐ (ಪಿಎಸ್​ಟಿ) - 2

* ಜೂನಿಯರ್ ಇಂಜಿನಿಯರ್-ಐಐ (ಇ ಆಂಡ್ ಎಂ) - 10

ಶೈಕ್ಷಣಿಕ ಅರ್ಹತೆ: 1.7.2021ಕ್ಕೆ ಅನ್ವಯವಾಗುವಂತೆ ಎಲೆಕ್ಟ್ರಿಕಲ್, ಮೆಕಾನಿಕಲ್ ಇಂಜಿನಿಯರಿಂಗ್​ನಲ್ಲಿ ಪದವಿ, ಡಿಪ್ಲೊಮಾ ಮಾಡಿರಬೇಕು. ಎಲ್ಲ ಹುದ್ದೆಗೂ ವೃತ್ತಿ ಅನುಭವ ಕೇಳಲಾಗಿದೆ.

ವಯೋಮಿತಿ: ಎಲ್ಲ ಹುದ್ದೆಗಳಿಗೂ ಗರಿಷ್ಠ 35 ವರ್ಷ ವಯೋಮಿತಿ ನಿಗದಿಯಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ವೇತನ: ಡೆಪ್ಯುಟಿ ಇಂಜಿನಿಯರ್​ಗೆ ಮಾಸಿಕ 50,000- 1,60,000 ರೂ., ಜೂ. ಇಂಜಿನಿಯರ್​ಗೆ ಮಾಸಿಕ 35,280- 67,920 ರೂ.ವರೆಗೆ ವೇತನ ನಿಗದಿಪಡಿಸಲಾಗಿದೆ.

ಸೇವಾ ಬಾಂಡ್: ಡೆಪ್ಯುಟಿ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು 1,50,000 ರೂ., ಜೂನಿಯರ್ ಇಂಜಿನಿಯರ್ ಹುದ್ದೆಗೆ 50,000 ರೂ. ಸೇವಾ ಬಾಂಡ್ ನೀಡಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 31.8.2021

ಅರ್ಜಿ ಸಲ್ಲಿಕೆ ವಿಳಾಸ:General Manager (HR), Mumbai Metro Rail Corporation Limited, MMRCL –Line 3 Transit Office, E Block, Bandra Kurla Complex, Bandra (East), Mumbai- 400051

ಅಧಿಸೂಚನೆಗೆ: https://bit.ly/3rDHIqW

ಮಾಹಿತಿಗೆ: http://www.mmrcl.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net