

ದೆಹಲಿ ಸ್ಟೇಟ್ ಇಂಡಸ್ಟ್ರಿಯಲ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‍ಮೆಂಟ್ ಕಾರ್ಪೊರೇಷನ್ (ಡಿಎಸ್‍ಐಐಡಿಸಿ) ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.
ಡಿಎಸ್‍ಐಐಡಿಸಿ ಪ್ರಧಾನ್ ಮಂತ್ರಿ ಫಾರ್‍ಮಲೈಸೇಷನ್ ಆಫ್ ಮೈಕ್ರೋ ಎಂಟರ್‍ಪ್ರೈಸಸ್‍ನ ರಾಜ್ಯ ನೋಡಲ್ ಏಜೆನ್ಸಿ ಆಗಿದೆ. ಪ್ರಸ್ತುತ ಇಂಡಿವಿಷುವಲ್ ಮತ್ತು ಫಮ್ರ್ಸ್ ವಿಭಾಗಗಳಲ್ಲಿ ದೆಹಲಿಯ 11 ಜಿಲ್ಲೆಗಳಿಗೆ ಅಭ್ಯರ್ಥಿಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆ ವಿವರ:
* ಇಂಡಿವಿಷುವಲ್- ಡಿಸ್ಟ್ರಿಕ್ಟ್ ರಿಸೋರ್ಸ್ ಪರ್ಸನ್ಸ್ (ಡಿಆರ್‍ಪಿಎಸ್)
* ಫಾಮ್ರ್ಸ್ - ಡಿಸ್ಟ್ರಿಕ್ ರಿಸೋರ್ಸ್ ಪರ್ಸ್‍ನ್ಸ್
ಅರ್ಹತೆ:
ಫುಡ್ ಟೆಕ್ನಾಲಜಿ/ ಆ್ಯಂಡ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ/ ಪದವಿ ಮಾಡಿದ್ದು, ವೃತ್ತಿ ಅನುಭವ ಅವಶ್ಯ. ಆಹಾರ ತಂತ್ರಜ್ಞಾನದಲ್ಲಿ ಪದವಿ ಪಡೆದವರು ಸಿಗದಿದ್ದಲ್ಲಿ ಆಹಾರ ಸಂಸ್ಕರಣಾ ಉದ್ಯಮ, ಬ್ಯಾಂಕಿಂಗ್, ಡಿಪಿಆರ್ ತಯಾರಿಕೆ ಮತ್ತು ತರಬೇತಿಯಲ್ಲಿ ಅನುಭವ ಹೊಂದಿದವರನ್ನು ನೇಮಕ ಮಾಡಿಕೊಳ್ಳಲಾಗುವುದು.
ಆಯ್ಕೆ ಪ್ರಕ್ರಿಯೆ: ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಅನ್‍ಲೈನ್ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯ ಮೌಲ್ಯಮಾಪನವನ್ನು ರಾಜ್ಯಮಟ್ಟದ ಟೆಕ್ನಿಕಲ್ ಇನ್‍ಸ್ಟಿಟ್ಯೂಷನ್ ಸಂಸ್ಥೆಯ ತಾಂತ್ರಿಕ ಅಧಿಕಾರಿಗಳು ಮಾಡುತ್ತಾರೆ.
ಅರ್ಜಿ ಸಲ್ಲಿಸಲು ಕೊನೇ ದಿನ: 15.4.2021
ಅಧಿಸೂಚನೆಗೆ: https://bit.ly/3m6SWkM
ಮಾಹಿತಿಗೆ: http://dsiidc.org
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: