

ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ಕೆಲ ಹುದ್ದೆಗಳನ್ನು ಮೀಸಲಿಡಲಾಗಿದೆ.
ಹುದ್ದೆಗಳ ವಿವರ
* ಅಸಿಸ್ಟೆಂಟ್ ಪ್ರೊಫೆಸರ್-33
ಅಟಾನಮಿ-2, ಸೈಕಾಲಜಿ-2, ಬಯೋಕೆಮಿಸ್ಟ್ರಿ-2, ಫಾರ್ಮಾಕಾಲಜಿ-2, ಪ್ಯಾಥಾಲಜಿ-1, ಮೈಕ್ರೋಬಯೋಲಜಿ-1, ಫಾರೆನ್ಸಿಕ್ ಮೆಡಿಸಿನ್-1, ಕಮ್ಯುನಿಟಿ ಮೆಡಿಸಿನ್-4, ಜನರಲ್ ಮೆಡಿಸಿನ್-3, ಪೀಡಿಯಾಟ್ರಿಕ್-1, ಲ್ಮನರಿ ಮೆಡಿಸಿನ್-1, ಡರ್ಮಟಾಲಜಿ-1, ಸೈಕಿಯಾಟ್ರಿ-1, ಜನರಲ್ ಸರ್ಜರಿ-3, ಆಥೋರ್ಪೆಡಿಕ್ಸ್-1, ಇಎನ್ಟಿ-1, ಆಪ್ತಲ್ಮಾಲಜಿ-1, ಒಬ್ಸ್ಟೆಟ್ರಿಕ್ಸ್ ಆ್ಯಂಡ್ ಗೈನಕಾಲಜಿ-2, ಅನಸ್ತೇಷಿಯಾ-2, ರೇಡಿಯೋ-ಡಯೋಗ್ನಾಸಿಸ್-1, ಡೆಂಟಿಸ್ಟ್ರಿ-1
*ಪ್ರೊಫೆಸರ್-6
ಬಯೋಕೆಮಿಸ್ಟ್ರಿ-1, ಫಾರ್ಮಾಕಾಲಜಿ-1, ಜನರಲ್ ಮೆಡಿಸಿನ್-1, ಒಬ್ಸ್ಟೆಟ್ರಿಕ್ಸ್ ಆ್ಯಂಡ್ ಗೈನಕಾಲಜಿ-1, ಅನಸ್ತೇಷಿಯಾಲಜಿ-1, ರೇಡಿಯೋ-ಡಯೋಗ್ನಾಸಿಸ್-1
* ಅಸೋಸಿಯೇಟ್ ಪ್ರೊಫೆಸರ್-22
ಅನಾಟಮಿ-1, ಸೈಕಾಲಜಿ-1, ಬಯೋಕೆಮಿಸ್ಟ್ರಿ-1, ಫಾರ್ಮಕಾಲಜಿ-1, ಪ್ಯಾಥಾಲಜಿ-3, ಮೈಕ್ರೋಬಯಾಲಜಿ-1, ಫಾರೆನ್ಸಿಕ್ ಮೆಡಿಸಿನ್-1, ಕಮ್ಯುನಿಟಿ ಮೆಡಿಸಿನ್-2, ಜನರಲ್ ಮೆಡಿಸಿನ್-2, ಪೀಡಿಯಾಟ್ರಿಕ್ಸ್-1, ಜನರಲ್ ಸರ್ಜರಿ-2, ಆಥೋರ್ಪೆಡಿಕ್ಸ್-1, ಒಬ್ಸ್ಟೆಟ್ರಿಕ್ಸ್ ಆ್ಯಂಡ್ ಗೈನಕಾಲಜಿ-1, ಅನಸ್ತೇಷಿಯಾಲಜಿ-2, ರೇಡಿಯೋ-ಡಯೋಗ್ನಾಸಿಸ್-1, ಡೆಂಟಿಸ್ಟ್ರಿ-1
ವಿದ್ಯಾರ್ಹತೆ
ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಕಡ್ಡಾಯವಾಗಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿರಬೇಕು. ಇಂಡಿಯನ್ ಮೆಡಿಕಲ್ ಅಥವಾ ಸ್ಟೇಟ್ ಮೆಡಿಕಲ್ನಲ್ಲಿ ನೋಂದಣಿಯಾಗಿರಬೇಕು. ಉಳಿದ ಹುದ್ದೆಗಳಿಗೆ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಸಂಬಂಧಪಟ್ಟ ವಿಷಯಗಳಲ್ಲಿ ಎಂಡಿ/ಎಂಎಸ್/ಡಿಎನ್ಬಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಕನಿಷ್ಠ 5ರಿಂದ 8 ವರ್ಷ ವೃತ್ತಿ ಅನುಭವ ಹೊಂದಿರಬೇಕು.
ವಯೋಮಿತಿ
ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ 45 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಒಬಿಸಿ ಅಭ್ಯರ್ಥಿಗಳಿಗೆ 45 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 50 ವರ್ಷ ವಯೋಸಡಿಲಿಕೆ ಇರಲಿದೆ. ಪ್ರೊಫೆಸರ್ಗೆ 50 ವರ್ಷ, ಅಸೋಸಿಯೇಟ್ ಪ್ರೊಫೆಸರ್ಗೆ 45 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಒಬಿಸಿ ಅಭ್ಯರ್ಥಿಗೆ 48, ಎಸ್ಸಿ, ಎಸ್ಟಿ ಅಭ್ಯರ್ಥಿಗೆ 50 ವರ್ಷ ನಿಗದಿಪಡಿಸಲಾಗಿದೆ.
ವೇತನ
ಪ್ರೊಫೆಸರ್ಗೆ 1,44,200ರಿಂದ 2,18,200 ರೂ., ಅಸೋಸಿಯೇಟ್ ಪ್ರೊಫೆಸರ್ಗೆ 1,31,400ರಿಂದ 2,17,100 ರೂ., ಅಸಿಸ್ಟೆಂಟ್ ಪ್ರೊಫೆಸರ್ಗೆ 79,800ರಿಂದ 2,11,500 ರೂ. ವರೆಗೆ ಮಾಸಿಕ ವೇತನ ಇರಲಿದೆ.
ಆಯ್ಕೆ ಪ್ರಕ್ರಿಯೆ
ಶೈಣಿಕ ಅಂಕ ಮತ್ತು ವೃತ್ತಿ ಅನುಭವ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಅಲ್ಲಿನ ಅಂಕಗಳ ಆಧಾರದ ಮೇಲೆ ಅರ್ಹರನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
ಗ್ರಾಮೀಣ, ಕನ್ನಡ ಮಾಧ್ಯಮ ಹೀಗೆ ಇತರ ಕೋಟಾದಡಿ ಅರ್ಜಿ ಸಲ್ಲಿಸುವವರು ದಾಖಲೆ ನಮೂದಿಸಬೇಕು. ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ 2,000 ರೂ. ಶುಲ್ಕದೊಂದಿಗೆ ತಿಳಿಸಿದ ವಿಳಾಸಕ್ಕೆ ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೇ ದಿನ: 26.8.2022
ಅರ್ಜಿ ಸಲ್ಲಿಸಬೇಕಾದ ವಿಳಾಸ: Director cum Dean Office, Shri Atal Bihari Vajapayee Medical College - Research Institute, Shivajinagar, Bengaluru – 560 001
ಅಧಿಸೂಚನೆಗೆ: https://bit.ly/3d5OJgK, https://bit.ly/3BWYJUd
ಮಾಹಿತಿಗೆ: http://sabvmcri.karnataka.gov.in