

ಜವಳಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್ಐಎಫ್ಟಿ) ಶ್ರೀನಗರ ಘಟಕದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 18
ಶ್ರೀನಗರದಲ್ಲಿರುವ ಎನ್ಐಎಫ್ಟಿ ಹುದ್ದೆಗಳು ಗ್ರೂಪ್ ಸಿ ಗುಂಪಿಗೆ ಸೇರಿದ್ದು, ಹುದ್ದೆಯ ಅವಧಿಯು ದೀರ್ಘಾವಧಿ ಅಂದರೆ 3 ವರ್ಷದ ಒಪ್ಪಂದಕ್ಕೆ ಒಳಪಟ್ಟಿವೆ. 18 ಹುದ್ದೆಗಳಲ್ಲಿ 16 ಸ್ಥಾನಗಳನ್ನು ಸಾಮಾನ್ಯವರ್ಗದ ಅಭ್ಯರ್ಥಿಗೆ ಮೀಸಲಿರಿಸಿದ್ದು, 1 ಸ್ಥಾನವನ್ನು ಎಸ್ಸಿ ಹಾಗೂ ಇತರ ಹಿಂದುಳಿದ ವರ್ಗಕ್ಕೆ ಕಾಯ್ದಿರಿಸಲಾಗಿದೆ.
ಹುದ್ದೆ ವಿವರ
* ಸ್ಟೆನೋ ಗ್ರೇಡ್ ಐಐಐ – 1
* ಅಸಿಸ್ಟೆಂಟ್ (ಫೈನಾನ್ಸ್ ಆ್ಯಂಡ್ ಅಕೌಂಟ್ಸ್) – 1
* ಅಸಿಸ್ಟೆಂಟ್ ವಾರ್ಡನ್ (ಮಹಿಳಾ) – 1
* ಮೆಷಿನ್ ಮೆಕ್ಯಾನಿಕ್ – 1
* ಲೈಬ್ರರಿ ಅಸಿಸ್ಟೆಂಟ್ – 1
* ಜೂನಿಯರ್ ಅಸಿಸ್ಟೆಂಟ್ – 2
* ಲ್ಯಾಬ್ ಅಸಿಸ್ಟೆಂಟ್ (ಫ್ಯಾಷನ್ ಡಿಸೈನ್ -1, ಫ್ಯಾಷನ್ ಕಮ್ಯುನಿಕೇಷನ್-1, ಇನ್ಫಾರ್ಮೇಷನ್ ಟೆಕ್ನಾಲಜಿ-1) – 3
* ಡೆಬರ್ – 1
* ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್)- 7
ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿ, ಐಟಿಐ, ಕಟ್ಟಿಂಗ್ ಆ್ಯಂಡ್ ಟೈಲರಿಂಗ್/ ಡ್ರೆಸ್ ಡಿಸೈನಿಂಗ್ ಡಿಪ್ಲೊಮಾ, ಕಾಮರ್ಸ್ ಪದವಿ, ಯಾವುದೇ ಪದವಿ, ನಿಮಿಷಕ್ಕೆ 80 ಪದ ಶಾರ್ಟ್ಹ್ಯಾಂಡ್ ಹಾಗೂ 40 ಪದ ಟೈಪಿಂಗ್ ತಿಳಿದಿರಬೇಕು. ಡ್ರೈವರ್ ಹುದ್ದೆಗೆ ಚಾಲನಾ ಪರವಾನಗಿ ಹೊಂದಿರಬೇಕು.
ವಯೋಮಿತಿ: ಗರಿಷ್ಠ 27 ವರ್ಷ ನಿಗದಿಪಡಿಸಲಾಗಿದ್ದು, ಎನ್ಐಎಫ್ಟಿ ಸಿಬ್ಬಂದಿಗೆ ಅವರ ಒಟ್ಟು ಸೇವಾವಧಿಯ ಲೆಕ್ಕದ ಪ್ರಕಾರ ಗರಿಷ್ಠ 5 ವರ್ಷ ವಯೋಸಡಿಲಿಕೆ ನೀಡಲಾಗುವುದು. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ನೀಡಲಾಗುವುದು.
ಅರ್ಜಿಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ, ಸಮಯ, ದಿನಾಂಕದ ಮಾಹಿತಿ ನೀಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 21.6.2021
ಅರ್ಜಿ ಸಲ್ಲಿಕೆಗೆ: https://nift.ac.in/srinagar/careers
ಅಧಿಸೂಚನೆಗೆ: https://bit.ly/3fSO9Rv
ಮಾಹಿತಿಗೆ: https://nift.ac.in