

ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ರೀಜನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ (ಆರ್ಸಿಬಿ) ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವಿಶ್ವಮಟ್ಟದ ಶಿಕ್ಷಣ, ತರಬೇತಿ, ಸಂಶೋಧನೆ ನಡೆಸಿ ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲವನ್ನು ರಚಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಪ್ರಸ್ತುತ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದರೆ ಅವರಿಗೆ 2ನೇ ದರ್ಜೆಯ ರೈಲ್ವೆ ಪ್ರಯಾಣ ಭತ್ಯೆ ನೀಡಲಾಗುವುದು.
ಒಟ್ಟು ಹುದ್ದೆಗಳು: 49
ಇಂಡಿಯನ್ ಬಯಾಲಾಜಿಕಲ್ ಡೇಟಾ ಸೆಂಟರ್ ಫೇಸ್1 ರಲ್ಲಿ ಸೀನಿಯರ್ ಸೈಂಟಿಸ್ಟ್ (ಬಯೋಇನ್ಫಾರ್ಮಾಟಿಕ್ಸ್/ ಐಟಿ) - 2,
ರಿಸರ್ಚ್ ಕನ್ಸಲ್ಟಂಟ್ - 2,
ಡೇಟಾಬೇಸ್ ಮ್ಯಾನೇಜರ್ - 4,
ಸೈಂಟಿಸ್ಟ್ - 2,
ಡೇಟಾ ಬೇಸ್ ಇಂಜಿನಿಯರ್/ ಸಾಫ್ಟ್‌ವೇರ್ ಡೆವಲಪರ್ - 10,
ಡೇಟಾ ಕ್ಯುರೇಟರ್ - 12,
ಸಿಸ್ಟಂ ಅಡ್ಮಿನಿಸ್ಟ್ರೆಟರ್ - 3,
ಸ್ಟೋರೇಜ್ ಅಡ್ಮಿನಿಸ್ಟ್ರೆಟರ್ - 2,
ನೆಟ್ವರ್ಕ್ ಅಡ್ಮಿನಿಸ್ಟ್ರೆಟರ್ - 2,
ಸೀನಿಯರ್ ಪ್ರೋಗ್ರಾಮರ್ - 2,
ಅಡ್ಮಿನಿಸ್ಟ್ರೆಟೀವ್ ಆಫೀಸರ್ - 1,
ಪ್ರೋಗ್ರಾಮರ್ - 3,
ಟೆಕ್ನಿಕಲ್ ಅಸಿಸ್ಟೆಂಟ್-ಎ - 1 ಹುದ್ದೆ ಇದೆ.
ಬಿಎಸ್ಸಿ ಬಯೋನೆಸ್ಟ್ ಬಯೋ-ಇನ್ಕ್ಯುಬೇಟರ್ (ಬಿಬಿಬಿ)ಯಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ - 1, ಡಿಬಿಟಿ-ಎಚ್ಆರ್ಡಿ ಪ್ರಾಜೆಕ್ಟ್ ಆ್ಯಂಡ್ ಮ್ಯಾನೇಜ್ಮೆಂಟ್ ಯೂನಿಟ್ (ಪಿಎಂಯು)ಯಲ್ಲಿ ಗ್ರಾಂಟ್ಸ್ ಅಡ್ವೈಸರ್ - 1, ಸೀನಿಯರ್ ಅಕೌಂಟ್ಸ್ ಅಸಿಸ್ಟೆಂಟ್ - 1 ಹುದ್ದೆ ಇದೆ.
ಬಿಕಾಂ/ಬಿಬಿಎ/ಸಿಎ/ಐಸಿಡಬ್ಲುಎ, ಲೈಫ್ ಸೈನ್ಸ್ನಲ್ಲಿ ಪದವಿ, ಸಿಎಸ್/ ಐಟಿ/ ಇ ಆ್ಯಂಡ್ ಸಿಯಲ್ಲಿ ಬಿ.ಟೆಕ್/ಎಂಎಸ್ಸಿ/ ಎಂಸಿಎ, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್ಡಿ ಮಾಡಿದ್ದು, ಕಂಪ್ಯೂಟರ್ ಜ್ಞಾನ ಜತೆ ವೃತ್ತಿ ಅನುಭವ ಇರುವ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30, 35 ರಿಂದ 50 ವರ್ಷ ವಯೋಮಿತಿಯಲ್ಲಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 40,000 ರೂ. ನಿಂದ 2,04,416 ರೂ. ವೇತನ ನಿಗದಿಪಡಿಸಲಾಗಿದೆ.
ಅಧಿಸೂಚನೆಗೆ: https://bit.ly/3bkPUW8
ಮಾಹಿತಿಗೆ: www.rcb.res.in