ಐಟಿಐ ಲಿಮಿಟೆಡ್​ನಲ್ಲಿ 40 ಹುದ್ದೆಗಳಿಗೆ ಆಹ್ವಾನ- ಹೈಸ್ಕೂಲ್​ ಪಾಸಾದವರಿಗೂ ಇವೆ ಅವಕಾಶ

udyoga-ITI
Published on

ಬೆಂಗಳೂರಿನಲ್ಲಿರುವ ಐಟಿಐ ಲಿಮಿಟೆಡ್​ನ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ಐಟಿಐ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಒಟ್ಟು ಹುದ್ದೆಗಳು: 40

ಐಟಿಐ ಲಿಮಿಟೆಡ್ 1948ರಲ್ಲಿ ದೂರಸಂಪರ್ಕ ಮತ್ತು ತಂತ್ರಜ್ಞಾನ ಇಲಾಖೆಯಡಿಯಲ್ಲಿ ಸ್ಥಾಪನೆಯಾದ ಸಾರ್ವಜನಿಕ ವಲಯ ಉದ್ಯಮವಾಗಿದೆ. ಬೆಂಗಳೂರು, ನೈನಿ, ರಾಯ್ಬರೇಲಿ, ಮಂಕಾಪುರ ಮತ್ತು ಪಾಲಕ್ಕಾಡ್​ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಪ್ರಸ್ತುತ ಬೆಂಗಳೂರಿನ ಘಟಕದಲ್ಲಿ ಕಾರ್ಯನಿರ್ವಹಿಸಲು ಡಿಪ್ಲೊಮಾ ಹಾಗೂ ವಿವಿಧ ವಿದ್ಯಾರ್ಹತೆಯ ಹೊಂದಿದವರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ವಿವರ

* ಸ್ಟಾಫ್ ನರ್ಸ್ - 28

* ಆಪರೇಷನ್ ಥಿಯೇಟರ್ ಅಸಿಸ್ಟೆಂಟ್ - 2

* ಎಕ್ಸ್-ರೇ ಟೆಕ್ನಿಷಿಯನ್ - 2

* ಇಸಿಜಿ ಟೆಕ್ನಿಷಿಯನ್ - 1

* ಲ್ಯಾಬ್ ಟೆಕ್ನಿಷಿಯನ್ - 2

* ಫಾರ್ಮಸಿಸ್ಟ್ - 1

* ಜೂನಿಯರ್ ಫಾರ್ಮಸಿಸ್ಟ್ - 1

* ರಿಸೆಪ್ಷನಿಸ್ಟ್ - 2

* ಹೆಲ್ಪರ್ - 1

ಶೈಕ್ಷಣಿಕ ಅರ್ಹತೆ: 7ನೇ ತರಗತಿ, ಎಸ್ಸೆಸ್ಸೆಲ್ಸಿ, ನರ್ಸಿಂಗ್ ಆ್ಯಂಡ್ ಮಿಡ್​ವೈಫರಿ, ಫಾರ್ಮಸಿ, ಲ್ಯಾಬ್ ಟೆಕ್ನಿಷಿಯನ್, ಇಸಿಜಿ ಟೆಕ್ನಿಷಿಯನ್, ಡಯಗ್ನೋಸ್ಟಿಕ್ ರೇಡಿಯೋಗ್ರಫಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ, 3 ವರ್ಷದ ಬಿ-ಫಾರ್ವ, ಯಾವುದೇ ಪದವಿ, ಬಿಎಸ್ಸಿ ನರ್ಸಿಂಗ್​ ಮಾಡಿರಬೇಕು.

ವಯೋಮಿತಿ: ರಿಸೆಪ್ಷನಿಸ್ಟ್ ಹಾಗೂ ಹೆಲ್ಪರ್ ಹುದ್ದೆಗೆ ಗರಿಷ್ಠ 28 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮದನ್ವಯ ವಯೋ ಸಡಿಲಿಕೆ ಇದೆ.

ವೇತನ: ಕೆಟಗರಿ ಎ ಹುದ್ದೆಗಳಿಗೆ ಮಾಸಿಕ 24,754, ಕೆಟಗರಿ ಡಿ ಹುದ್ದೆಗಳಿಗೆ ಮಾಸಿಕ 25,784 ರೂ., ಕೆಟಗರಿ ಇ ಹುದ್ದೆಗಳಿಗೆ ಮಾಸಿಕ 27,757 ರೂ. ವೇತನ ಜತೆ ಪಿಎಫ್, ವೈದ್ಯಕೀಯ, ಡಿಎ ಭತ್ಯೆ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅರ್ಹತಾ ಮಾನದಂಡ ಅನುಸಾರ ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಕಾಂಪಿಟೇಟೀವ್ ಆಪ್ಟಿಟ್ಯೂಡ್/ ಟೆಕ್ನಿಕಲ್ ಪರೀಕ್ಷೆ/ ಗುಂಪು ಚಟುವಟಿಕೆ ನೀಡಿ ಅಂತಿಮ ಆಯ್ಕೆ ಮಾಡಲಾಗುವುದು. ಅಪೂರ್ಣ ಮಾಹಿತಿಯ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಲಾಗಿದೆ.

ಸೂಚನೆ: ಅಭ್ಯರ್ಥಿಗಳು ಆನ್​ಲೈನ್ ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರತಿ ಪಡೆದು, 24.7.2021ರ ಒಳಗಾಗಿ ಅಗತ್ಯ ದಾಖಲೆಯೊಂದಿಗೆ Additional General Manager-HR (B/R&D), ITI Limite, Bangalore Plant, Doorvani Nagar, Bengalore-560016 ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 22.7.2021

ಅಧಿಸೂಚನೆಗೆ: https://bit.ly/3r60rLm

ಮಾಹಿತಿಗೆ: http://www.itiltd.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net