ಇಂಜಿನಿಯರಿಂಗ್​ ಪದವೀಧರರಾ? ತೈಲ ನಿಮಗದಲ್ಲಿ ನಿಮಗಿದೆ 313 ಹುದ್ದೆಗಳು- ಅರ್ಜಿ ಆಹ್ವಾನ

jobs1
Published on

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಆಯಿಲ್​ ಆ್ಯಂಡ್​ ನ್ಯಾಚುರಲ್​ ಗ್ಯಾಸ್​ ಕಾಪೋರ್ರೇಷನ್​ ಲಿಮಿಟೆಡ್​- ಒಎನ್​ಜಿಸಿ) ಡೆಹ್ರಾಡೂನ್​ ಕರ್ನಾಟಕದ ವಿವಿಧ ವಿಭಾಗಗಳಲ್ಲಿ ಇಂಜಿನಿಯರ್​ಗೂ ಜಿಯೋ ಸೈಂಟಿಸ್ಟ್​ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2020ರ ಗೇಟ್​ ಅಂಕಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಒಬ್ಬರಿಗೆ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಯ್ಕೆಯಾದವರನ್ನು ದೇಶದ ಯಾವುದೇ ಭಾಗಕ್ಕಾದರೂ ನೇಮಕ ಮಾಡಬಹುದು. ಇದಕ್ಕೆ ಸಿದ್ಧರಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ.

ಇಂಜಿನಿಯರಿಂಗ್​ ಹಾಗೂ ಜಿಯೋ ಸೈನ್ಸ್​ನಲ್ಲಿ ಎಕ್ಸಿಕ್ಯೂಟಿವ್​ ಹಂತದ ಹುದ್ದೆಗಳು ಇವಾಗಿವೆ

ಎಇಇ ಹುದ್ದೆಗಳು

* ಮೆಕಾನಿಕಲ್​ (ಸಿಮೆಂಟಿಂಗ್​) - 6

* ಪೆಟ್ರೋಲಿಯಂ (ಸಿಮೆಂಟಿಂಗ್​) - 1

* ಸಿವಿಲ್​ - 18

* ಮೆಕಾನಿಕಲ್​ (ಡ್ರಿಲ್ಲಿಂಗ್​) - 28

* ಎಲೆಕ್ಟ್ರಿಕಲ್​ - 39

* ಎಲೆಕ್ಟ್ರಾನಿಕ್ಸ್​ - 5

* ಇನ್​ಸ್ಟ್ರುಮೆಂಟೇಷನ್​ - 32

* ಮೆಕಾನಿಕಲ್​ - 31

* ಮೆಕಾನಿಕಲ್​ (ಪ್ರೊಡಕ್ಷನ್​) - 21

* ಕೆಮಿಕಲ್​ (ಪ್ರೊಡಕ್ಷನ್​) - 16

* ಪೆಟ್ರೋಲಿಯಂ (ಪ್ರೊಡಕ್ಷನ್​) - 12

* ರಿಸರ್ವಾಯರ್​ - 7

* ಇಂಡಸ್ಟ್ರಿಯಲ್​ ಇಂಜಿನಿಯರಿಂಗ್​ - 3

ಇತರ ಹುದ್ದೆಗಳು

* ಕೆಮಿಸ್ಟ್​ - 15

* ಜಿಯಾಲಜಿಸ್ಟ್​ - 19

* ಜಿಯೋಫಿಜಿಸ್ಟ್​ (ಸೇರ್ಸ್​) - 24

* ಜಿಯೋಫಿಜಿಸ್ಟ್​ (ವೆಲ್ಸ್​) - 12

* ಮೆಟಿರಿಯಲ್ಸ್​ ಮ್ಯಾನೇಜ್​ಮೆಂಟ್​ ಆಫೀಸರ್​ - 12

* ಪ್ರೋಗ್ರಾಮಿಂಗ್​ ಆಫೀಸರ್​ - 5

* ಟ್ರಾನ್ಸ್​ಪೋರ್ಟ್​ ಆಫೀಸರ್​ - 7

ವಿದ್ಯಾರ್ಹತೆ: ಹುದ್ದೆಗೆ ಸಂಬಂಧಿಸಿ ವಿಷಯಗಳಲ್ಲಿ ಪದವಿ, ಜಿಯೋಫಿಜಿಕ್ಸ್​, ಜಿಯಾಲಜಿ, ಕೆಮಿಸ್ಟ್ರಿ, ಮ್ಯಾಥಮೆಟಿಕ್ಸ್​, ಫಿಜಿಕ್ಸ್​, ಪೆಟ್ರೋಲಿಯಂ ಟೆಕ್ನಾಲಜಿ, ಪೆಟ್ರೋಲಿಯಂ ಜಿಯಾಲಜಿ, ಕಂಪ್ಯೂಟರ್​ ಅಪ್ಲಿಕೇಷನ್​, ಕಂಪ್ಯೂಟರ್​ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಗೇಟ್​-2020ರಲ್ಲಿ ಅರ್ಹತೆ ಪಡೆದಿರಬೇಕು.

ವಯೋಮಿತಿ:

ಡ್ರಿಲ್ಲಿಂಗ್​, ಸಿಮೆಂಟಿಂಗ್​ ವಿಭಾಗ ಹುದ್ದೆಗಳಿಗೆ ಗರಿಷ್ಠ 28 ವರ್ಷ, ಇತರ ಹುದ್ದೆಗಳಿಗೆ ಗರಿಷ್ಠ 30 ವರ್ಷ ವಯೋವಿತಿ ನಿಗದಿಯಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ:

ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಯಲ್ಲಿ ನೀಡಲಾದ ವಿಷಯಗಳಲ್ಲಿ 2020ರ ಗೇಟ್​ ಅರ್ಹತಾ ಅಂಕಗಳನ್ನು ಪ್ರಕಟಿಸಲಾಗುತ್ತದೆ. ಗೇಟ್​ ಅಂಕ ಹಾಗೂ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಅರ್ಜಿಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ

ಅರ್ಜಿ ಸಲ್ಲಿಸಲು ಕೊನೇ ದಿನ: 12.10.2021

ಅಧಿಸೂಚನೆಗೆ: https://bit.ly/3CUDwrf

ಮಾಹಿತಿಗೆ: www.ongcindia.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net