

ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ನ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಜಿಯಾಗ್ರ್ರಾಫಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ನ (ಸಿಎಸ್ಐಆರ್-ಎನ್ಜಿಆರ್ಐ) ಹೈದರಾಬಾದ್ ಟಕದಲ್ಲಿ ಅರ್ಥ್ ಸೈನ್ಸ್ ವಿಷಯದ ಸಂಶೋಧನೆಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಅವಶ್ಯಕತೆ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೈದರಾಬಾದ್ ಕಾರ್ಯಕ್ಷೇತ್ರವಾಗಿರಲಿದ್ದು, ಪ್ರಾಧಿಕಾರದ ಅವಶ್ಯಕತೆಗೆ ತಕ್ಕಂತೆ ಎನ್ಜಿಆರ್ಐನ ಯಾವುದೇ ವಿಭಾಗ ಅಥವಾ ದೇಶದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ನಿಯೋಜಿಸಬಹುದಾಗಿದೆ. ಟೆಕ್ನಿಕಲ್ ಅಸಿಸ್ಟೆಂಟ್ ಹಾಗೂ ಆಫೀಸರ್ ಹುದ್ದೆಗೆ ಟ್ರೇಡ್ ಪರೀಕ್ಷೆ, ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಸೀನಿಯರ್ ಟೆಕ್ನಿಕಲ್ ಅಫೀಸರ್ 1 ಮತ್ತು 2 ಕ್ಕೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಒಟ್ಟು ಹುದ್ದೆಗಳು: 38
ಟೆಕ್ನಿಕಲ್ ಅಸಿಸ್ಟೆಂಟ್ ಗ್ರೇಡ್ 3 - 21ಹುದ್ದೆ, ಟೆಕ್ನಿಕಲ್ ಆಫೀಸರ್ ಗ್ರೇಡ್ 3 - 6, ಸೀನಿಯರ್ ಟೆಕ್ನಿಕಲ್ ಆಫೀಸರ್-1 ಗ್ರೇಡ್ 3 - 7, ಸೀನಿಯರ್ ಟೆಕ್ನಿಕಲ್ ಆಫೀಸರ್-2 ಗ್ರೇಡ್ 3 - 4 ಹುದ್ದೆಗಳಿವೆ.
ಫಿಜಿಕ್ಸ್ ಆ್ಯಂಡ್ ಮ್ಯಾಥಮೆಟಿಕ್ಸ್, ಜಿಯಾಲಜಿ, ಕಂಪ್ಯೂಟರ್ ಸೈನ್ಸ್, ಹಾಟಿರ್ಕಲ್ಚರ್ನಲ್ಲಿ ಬಿಎಸ್ಸಿ, ಇನ್ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ ಡಿಪ್ಲೊಮಾ, ಜಿಯೋಗ್ರಫಿ/ ಜಿಯೋಫಿಜಿಕಲ್ ಟೆಕ್ನಾಲಜಿ/ ಮರೈನ್ ಜಿಯೋಫಿಜಿಕ್ಸ್/ ಅರ್ಥ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ, ಎಲೆಕ್ಟ್ರಾನಿಕ್ಸ್/ ಇನ್ಸ್ಟ್ರುಮೆಂಟೇಷನ್ನಲ್ಲಿ ಬಿಇ/ಬಿಟೆಕ್, ಜಿಯೋಗ್ರ್ರಾಫಿಕ್ಸ್/ ಅಪ್ಲೆಡ್ ಜಿಯೋಫಿಜಿಕ್ಸ್/ ಜಿಯೋಗ್ರ್ರಾಫಿಕಲ್ ಟೆಕ್ನಾಲಜಿ, ಜಿಯಾಲಜಿ, ಫಿಜಿಕ್ಸ್/ ಹೈಡ್ರಾಲಜಿ, ಮ್ಯಾಥಮೆಟಿಕ್ಸ್/ ಸ್ಟ್ಯಾಟಿಸ್ಟಿಕ್ಸ್/ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದು, ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 28, 30, 35, 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ಎಲ್ಲ ಭತ್ಯೆ ಸೇರಿ 54,126 ರೂ. ನಿಂದ 99,669 ರೂ. ವೇತನ ಇದೆ.
ಆಧಿಸೂಚನೆಗೆ: https://bit.ly/3nhQkBc
ಮಾಹಿತಿಗೆ: www.ngri.org.in