ಕರೊನಾ ವಾರಿಯರ್​ ಆಗಲು ರೆಡಿನಾ? 1061 ಹುದ್ದೆಗಳ ನೇರ ಸಂದರ್ಶನ: 2.50 ಲಕ್ಷ ರೂ ವರೆಗೆ ಸಂಬಳ

udyoga- corona
Published on

ಬಳ್ಳಾರಿ ಜಿಲ್ಲಾಡಳಿತದಿಂದ ಕೋವಿಡ್​ 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್​ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕೋವಿಡ್​ ಕೇರ್​ ಆಸ್ಪತ್ರೆಗಳನ್ನು ತೆರೆಯಲಾಗುತ್ತಿದ್ದು, ಸದರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಅರ್ಹ ಅಭ್ಯಥಿರ್ಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 1061

ಜಿಲ್ಲಾ ಸದರಿ ಆಸ್ಪತ್ರೆಗಳಲ್ಲಿ

ಹುದ್ದೆ -- ಸಂಖ್ಯೆ -- ವೇತನ

* ಫಿಜಿಷಿಯನ್​ -- 21 -- 2,50,000

* ಅನಸ್ತೇಷಿಯಸ್ಟ್​ -- 16 -- 2,50,000

* ಒಬಿಜಿ -- 1 2,50,000

* ಸ್ಪೆಷಲಿಸ್ಟ್​ (ಮೆಡಿಸನ್​/ ಅನಸ್ತೇಷಿಯಾ/ ರೆಸ್ಪಿರೇಟರಿ ಮೆಡಿಸನ್​/ ಇಎನ್​ಟಿ) -- 20 -- 2,50,000

* ಫಿಜಿಕ್ಸ್​ ಥೆರಫಿಸ್ಟ್​ -- 6 -- 30,000

* ಸ್ಟಾಫ್​ ನರ್ಸ್​ -- 146 -- 25,000

* ಲ್ಯಾಬ್​ ಟೆಕ್ನಿಷಿಯನ್ಸ್​ -- 30 -- 20,000

* ಫಾರ್ಮಸಿಸ್ಟ್​ -- 12 -- 20,000

* ಎಕ್ಸ್​ರೇ ಟೆಕ್ನಿಷಿಯನ್ಸ್​ -- 13 -- 20,000

* ಗ್ರೂಪ್​ ಡಿ -- 141 -- 15,000

* ಡ್ರೈವರ್​ -- 4 -- 15,000

ಜಿಂದಾಲ್​ ಸಂಜೀವಿನಿ 1000 ಹಾಸಿಗೆಗಳ ಆಸ್ಪತ್ರೆಯಲ್ಲಿ

* ಫಿಜಿಷಿಯನ್​/ಅನಸ್ತೇಷಿಯಾಲಾಜಿಸ್ಟ್​/ ಇನ್​ಟೆನ್ಸಿವಿಸಿಟ್ಸ್​ (ಸ್ಪೆಷಲಿಸ್ಟ್​) -- 31 -- 2,50,000

* ಡಾಕ್ಟರ್ಸ್​ -- 75 -- 50,000 --

* ನರ್ಸ್​ -- 155 -- 20,000+5,000 ಇನ್​ಸೆಂಟೀವ್ಸ್​

* ನಸಿರ್ಂಗ್​ ಸೂಪರ್​ವೈಸರ್​ -- 19 -- 25,000

* ರೇಡಿಯಾಲಜಿ ಟೆಕ್ನಿಷಿಯನ್​ -- 12 -- 25,000

* ಫಿಜಿಯೋಥೆರಪಿಸ್ಟ್​ -- 12 -- 25,000+5000 ಇನ್​ಸೆಂಟೀವ್ಸ್​

* ಲ್ಯಾಬ್​ ಟೆಕ್ನಿಷಿಯನ್​ -- 12 -- 22,000

* ಗ್ರೂಪ್​ ಡಿ -- 300 -- 15,000+3,000 ಇನ್​ಸೆಂಟೀವ್ಸ್​

* ಫಾರ್ಮಸಿಸ್ಟ್​ -- 6 -- 22,000

* ಸ್ಟೋರ್​ ಕೀಪರ್ಸ್​ -- 4 -- 20,000

* ಸೈಕಾಲಜಿಕಲ್​ ಕೌನ್ಸಿಲರ್​ -- 6 -- 25,000

* ಬಯೋಮೆಡಿಕಲ್​ ಇಂಜಿನಿಯರ್ಸ್​ -- 5 -- 22,000

* ಡಯೆಟೀಷಿಯನ್​ -- 5 -- 20,000

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಮಾಡಿರುವ ಅಭ್ಯಥಿರ್ಗಳು ಸಂದರ್ಶನಕ್ಕೆ ಹಾಜರಾಗಬಹುದು.

ಎಲ್ಲೆಲ್ಲಿ ಉದ್ಯೋಗಾವಕಾಶ?

ಬಳ್ಳಾರಿ, ಹಡಗಲಿ, ಹೊಸಪೇಟೆ, ಎಚ್​ಪಿ ಹಳ್ಳಿ, ಕೂಡ್ಲಿಗಿ, ಸಿರಗುಪ್ಪ, ಸಂಡೂರು, ಎಚ್​ಬಿ ಹಳ್ಳಿ, ಕೊಟ್ಟೂರು, ಕುರುಗೋಡು, ಕಂಪ್ಲಿ ತಾಲೂಕುಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಅಭ್ಯಥಿರ್ಗಳು ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಗುತ್ತಿಗೆ ಅವಧಿಯು 3 ತಿಂಗಳದ್ದಾಗಿದ್ದು, ಇನ್ನೂ 3 ತಿಂಗಳು ವಿಸ್ತರಿಸಬಹುದಾಗಿದೆ. ಆಯ್ಕೆಯಾಗುವ ಅಭ್ಯಥಿರ್ಗಳು ಬಳ್ಳಾರಿ ಜಿಲ್ಲೆಯ ಯಾವುದೇ ತಾಲೂಕಿನಲ್ಲಾದರೂ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.

ಊಟ, ವಸತಿ ವ್ಯವಸ್ಥೆ: ಜಿಂದಾಲ್​ ಸಂಜೀವಿನಿ 1000 ಹಾಸಿಗೆಗಳ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಊಟ ಮತ್ತು ವಸತಿ ಉಚಿತವಾಗಿ ಕಲ್ಪಿಸಲಾಗುವುದು. ಜಿಲ್ಲಾ ಆಸ್ಪತ್ರೆ, ವಿಮ್ಸ್​ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಶುಶ್ರೂಷಕರಿಗೆ ಹಾಗೂ ಪ್ಯಾರಾಮೆಡಿಕಲ್​ ಸಿಬ್ಬಂದಿಗೆ ಅವಶ್ಯಕತೆ ಇದ್ದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಪರಿಗಣಿಸಲಾಗುವುದು.

ಸಂದರ್ಶನ ನಡೆಯುವ ದಿನಾಂಕ: 4.5.2021ರಿಂದ ಆರಂಭವಾಗಿದ್ದು, 11.5.2021ರ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ.

ಸಂದರ್ಶನ ನಡೆಯುವ ಸ್ಥಳ: ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರ ಕಚೇರಿಯಲ್ಲಿ ನಡೆಸಲಾಗುವುದು.

ಅಧಿಸೂಚನೆಗೆ: https://bit.ly/3nOyeHb

ಮಾಹಿತಿಗೆ: (080) 392277100

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net