

ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಅಧೀನದಲ್ಲಿ ಕಾರ್ಯನಿರ್ವಹಿಸುವ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದಲ್ಲಿ (ಸಿಎಫ್ಟಿಆರ್ಐ) ವಿವಿಧ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 12
ಸಿಎಫ್ಟಿಆರ್ಐನ ವಿವಿಧ ವಿಭಾಗಳಲ್ಲಿ ಜೂನಿಯರ್ ಸೆಕ್ರೇಟರಿಯೇಟ್ ಅಸಿಸ್ಟೆಂಟ್ ಹಾಗೂ ಜೂನಿಯರ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳ ದಾಖಲೆಗಳು ಇಂಗ್ಲಿಷ್ ಅಥವಾ ಹಿಂದಿ ಹೊರತಾಗಿ ಬೇರೆ ಭಾಷೆಯಲ್ಲಿದ್ದರೆ ಅದನ್ನು ಹಿಂದಿ ಅಥವಾ ಇಂಗ್ಲಿಷ್ಗೆ ತರ್ಜುಮೆ ಮಾಡಿಸಿ ಗೆಜೆಟೆಡ್ ಅಧಿಕಾರಿಯ ಸಹಿ ಪಡೆದು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಟೈಪಿಂಗ್ ಪರೀಕ್ಷೆ/ ಲಿಖಿತ ಪರೀಕ್ಷೆ/ ಶಾರ್ಟ್ಹ್ಯಾಂಡ್ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಮೈಸೂರು ಟಕಕ್ಕೆ ಅಥವಾ ಇದರ ಇತರ ಟಕಗಳಿರುವ ಲಖನೌ, ಹೈದರಾಬಾದ್, ಮುಂಬೈ ಅಥವಾ ದೇಶದಲ್ಲಿರುವ ಇತರ ಪ್ರಯೋಗಾಲಯಗಳಿಗೆ ನೇಮಕ ಮಾಡಬಹುದು.
ಹುದ್ದೆ ವಿವರ
* ಜೂನಿಯರ್ ಸೆಕ್ರೇಟರಿಯೇಟ್ ಅಸಿಸ್ಟೆಂಟ್ (ಜನರಲ್ ಅಡ್ಮಿನಿಸ್ಟ್ರೆಷನ್ -3, ಫೈನಾನ್ಸ್ ಆ್ಯಂಡ್ ಅಕೌಂಟ್ಸ್-3, ಸ್ಟೋರ್ ಆ್ಯಂಡ್ ಪರ್ಚೇಸ್-3) - 9
* ಜೂನಿಯರ್ ಸ್ಟೆನೋಗ್ರಾರ್ - 3 (ಬ್ಯಾಕ್ಲಾಗ್ ಹುದ್ದೆಗಳು)
ವಿದ್ಯಾರ್ಹತೆ: ದ್ವಿತೀಯ ಪಿಯುಸಿ/ ತತ್ಸಮಾನ ಶಿಕ್ಷಣ ಪಡೆದಿದ್ದು, ಕಂಪ್ಯೂಟರ್ ಜ್ಞಾನದ ಜತೆ ಪ್ರತಿ ನಿಮಿಷಕ್ಕೆ 35 ಪದ ಇಂಗ್ಲಿಷ್ ಹಾಗೂ 30 ಪದ ಹಿಂದಿ ಟೈಪ್ ಮಾಡಲು ತಿಳಿದಿರಬೇಕು.
ವಯೋಮಿತಿ: ಜೂ. ಸೆಕ್ರೆಟರಿಯೇಟ್ ಅಸಿಸ್ಟೆಂಟ್ಗೆ ಗರಿಷ್ಠ 28 ವರ್ಷ, ಸ್ಟೆನೋಗ್ರಾಫರ್ಗೆ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ: ಜೂ. ಸೆಕ್ರೆಟರಿಯೇಟ್ ಅಸಿಸ್ಟೆಂಟ್ಗೆ 19,900- 63,200 ರೂ. ವೇತನಶ್ರೇಣಿ ಅನ್ವಯವಾಗಲಿದೆ. ಜೂ.ಸ್ಟೆನೋಗ್ರಾಫರ್ಗೆ 25,500-81,100 ರೂ. ವೇತನ ಶ್ರೇಣಿ ನಿಗದಿಯಾಗಿದೆ.
ಅರ್ಜಿಶುಲ್ಕ:ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ, ಸಿಎಸ್ಐಆರ್ನ ಸಿಬ್ಬಂದಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಬೇಕು.
ಸೂಚನೆ: 23.8.2021ರ ಒಳಗಾಗಿ ಆನ್ಲೈನ್ನಲ್ಲಿ ಸಲ್ಲಿಸಲಾದ ಅರ್ಜಿಯ ಪ್ರತಿಯನ್ನು ಅಗತ್ಯ ದಾಖಲೆಯೊಂದಿಗೆ Recruitment Cell (E-I section),, CSIR-Central Food Technological Research Institute, Cheluvamba Mansion, Mysore- 570020 ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 30.7.2021
ಅಧಿಸೂಚನೆಗೆ: https://bit.ly/3qDgP5W
ಮಾಹಿತಿಗೆ: http://cftri.res.in