ಬಳ್ಳಾರಿಯ ವಿಮ್ಸ್‌ನಲ್ಲಿ ಶುಶ್ರೂಷಾಧಿಕಾರಿಗಳ ನೇಮಕ- 188 ಹುದ್ದೆಗಳಿಗೆ ಆಹ್ವಾನ

udyoga0VIMS
Published on

ಬಳ್ಳಾರಿಯಲ್ಲಿರುವ ವಿಜಯನಗರ ವೈದ್ಯಕಿಯ ವಿಜ್ಞಾನ ಸಂಸ್ಥೆಯಲ್ಲಿ (ವಿಮ್ಸ್​) ಕೋವಿಡ್​- 19 ಚಿಕಿತ್ಸೆಗಾಗಿ ಶುಶ್ರೂಷಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗುವಂತೆ ಕೋರಲಾಗಿದೆ.

ಒಟ್ಟು ಹುದ್ದೆಗಳು: 118

ಬಳ್ಳಾರಿಯ ವಿಮ್ಸ್​ನಲ್ಲಿ

ಶುಶ್ರೂಷಾಧಿಕಾರಿ ಹುದ್ದೆ

ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ವಿಮ್ಸ್​ ಸಂಸ್ಥೆಗೆ ಹುದ್ದೆಗಳು ಸೃಜನೆಯಾಗುವವರೆಗೆ ಡಿಎಂಎ್​ ಯೋಜನೆಯ ನಿಧಿಯಿಂದ ವಿಮ್ಸ್​ ಸಂಸ್ಥೆ ಅಧೀನದಲ್ಲಿರುವ ಕೋವಿಡ್​&19 ಕೇಂದ್ರಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ 118 ಶುಶ್ರೂಷಕ ಸಿಬ್ಬಂದಿಯನ್ನು ಸಂಚಿತ ವೇತನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ 11 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ವಿದ್ಯಾರ್ಹತೆ: ಜಿಎನ್​ಎಂ ಶುಶ್ರೂಷಕ ತರಬೇತಿ, ಬಿಎಸ್​ಸಿ ನರ್ಸಿಂಗ್ ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಆದ್ಯತೆ ಮೇಲೆ ಪರಿಗಣಿಸಲಾಗುವುದು.

ವಯೋಮಿತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಐಸಿಯು ಮತ್ತು ಕ್ರಿಟಿಕಲ್​ ಕೇರ್​ ವಿಭಾಗದಲ್ಲಿ ಹಾಗೂ 500 ಹಾಸಿಗೆಗಳ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ ಆಧಾರದ ಮೇಲೆ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗುವುದು.

ವೇತನ: ಮಾಸಿಕ ಸಂಚಿತ ವೇತನ 20,000 ರೂ. ಹಾಗೂ ರಿಸ್ಕ್​ ಅಲಾಯನ್ಸ್​ ಎಂದು 5,000 ರೂ. ನೀಡಲಾಗುವುದು.

ವೆಬ್​ಸೈಟ್​ನಲ್ಲಿದೆ ಅಜಿರ್: ಸಂದರ್ಶನಕ್ಕೆ ಹಾಜರಾಗಲು ಆಸಕ್ತರಾಗಿರುವ ಅಭ್ಯರ್ಥಿಗಳು ವಿಮ್ಸ್​ ಅಂತರ್ಜಾಲ www.vimsbellary.org.in

ದಲ್ಲಿರುವ ಅರ್ಜಿನ್ನು ಡೌನ್​ಲೋಡ್​ ಮಾಡಿಕೊಂಡು ಭತಿರ್ಮಾಡಿ ಸಂದರ್ಶನ ದಿನದಂದು ತರತಕ್ಕದ್ದು.

ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ವೆಬ್​ಸೈಟ್​ನಲ್ಲಿರುವ ಅರ್ಜಿ ಪ್ರತಿ ಪಡೆದು ಭತಿರ್ಮಾಡಿ, ಶೈಕ್ಷಣಿಕ ದಾಖಲೆ, ಅಗತ್ಯ ದಾಖಲೆಗಳ ಮೂಲ ಪ್ರತಿ ಹಾಗೂ ವೃತ್ತಿ ಅನುಭವದ ಪ್ರಮಾಣಪತ್ರದ ಜೆರಾಕ್ಸ್​ ಪ್ರತಿ ತರಲು ಸೂಚಿಸಲಾಗಿದೆ. ಈ ಹುದ್ದೆಗಳು ಯಾವುದೇ ಕಾಯಂ ನೇಮಕಾತಿಗೆ ಒಳಪಡುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸಂದರ್ಶನ ನಡೆಯುವ ದಿನಾಂಕ: 28.5.2021

ಸಂದರ್ಶನ ನಡೆಯುವ ಸ್ಥಳ: ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಬಳ್ಳಾರಿ

ಅಧಿಸೂಚನೆಗೆ: https://bit.ly/3oKqJSi

ಮಾಹಿತಿಗೆ: www.vimsbellary.org.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net