

ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ, ಡಿಇಐಸಿ ಕಾರ್ಯಕ್ರಮ, ಎನ್ಪಿಪಿಸಿಡಿ ಕಾರ್ಯಕ್ರಮ, ಎನ್ಯುಎಫ್ಎಚ್ಎಂ ಕಾರ್ಯಕ್ರಮದಡಿ ಕೆಳಕಂಡ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ.
ಒಟ್ಟು ಹುದ್ದೆಗಳು: 45
ಹುದ್ದೆ ವಿವರ
* ಶುಶ್ರೂಷಕರು - 11
* ನೇತ್ರ ಸಹಾಯಕರು - 3
* ಆಡಿಯೋಮೆಟ್ರಿಕ್ ಅಸಿಸ್ಟೆಂಟ್ - 1
* ಆರ್ಕೆಎಸ್ಕೆ ಆಪ್ತ ಸಮಾಲೋಚಕರು - 2
* ಹಿರಿಯ ಮಹಿಳಾ ಆರೋಗ್ಯ ಸಹಾಯಕಿ - 1
* ಕಿರಿಯ ಮಹಿಳಾ ಆರೋಗ್ಯ ಸಹಾಯಕಿ - 11
* ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು - 3
* ಫಾರ್ಮಸಿಸ್ಟ್ - 1
* ಮಲ್ಟಿ ಪರ್ಪಸ್ ವರ್ಕರ್ - 1
* ಪ್ರಸೂತಿ ತಜ್ಞರು - 3
* ಮಕ್ಕಳ ತಜ್ಞರು - 3
* ಅರಿವಳಿಕೆ ತಜ್ಞರು - 3
* ಆಯುಷ್ ವೈದ್ಯರು - 1
* ಎಂಬಿಬಿಎಸ್/ ಬಿಎಎಂಎಸ್ ವೈದ್ಯರು - 1
ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಫಾರ್ಮಸಿ ಕೌನ್ಸಿಲ್ ಆಫ್ ಕರ್ನಾಟಕದಿಂದ ಮಾನ್ಯತೆ ಪಡೆದಿರುವ ಕಾಲೇಜಿನಲ್ಲಿ ಬಿ ಫಾರ್ಮ ಅಥವಾ ಡಿ ಫಾರ್ಮ ಪದವಿ, ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯ ಅಧ್ಯಯನ ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿ ನಡೆಸುವ 2 ವರ್ಷಗಳ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ, ಕಿರಿಯ ಆರೋಗ್ಯ ಸಹಾಯಕಿ ತರಬೇತಿ, ಶುಶ್ರೂಷಕರ ತರಬೇತಿ ಪಡೆದಿದ್ದು, ಕರ್ನಾಟಕ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಾಯಿತರಾಗಿರಬೇಕು. ಎಂಎಸ್ಡಬ್ಲ್ಯು/ ಎಂಎ ಸೈಕಾಲಜಿ, ಹಿಯರಿಂಗ್ ಭಾಷೆಯಲ್ಲಿ ಡಿಪ್ಲೊಮಾ, ಆಪ್ಟೋಮೆಟ್ರಿ ಡಿಪ್ಲೊಮಾ/ ನೇತ್ರ ಸಹಾಯಕರ ತರಬೇತಿ, ಆಪ್ಟೊಮೆಟ್ರಿ ಪದವಿ/ ಸ್ನಾತಕೋತ್ತರ ಪದವಿ, ಬಿಎಸ್ಸಿ ನರ್ಸಿಂಗ್, ಎಂಬಿಬಿಎಸ್/ ಬಿಎಎಂಎಸ್/ ಬಿಎನ್ವೈಎಸ್ ಪದವಿ, ಡಿಜಿಒ/ ಡಿಎನ್ಬಿ/ ಡಿಸಿಎಚ್/ ಎಂಡಿ ಪದವಿ ಪಡೆದಿರಬೇಕು. ಕೆಲ ಹುದ್ದೆಗೆ ಕಂಪ್ಯೂಟರ್ ಜ್ಞಾನ ಕೇಳಲಾಗಿದೆ.
ಎಲ್ಲಿಲ್ಲೆ ಉದ್ಯೋಗ?: ತರೀಕೆರೆಯ ಬುಕ್ಕಾಂಬುದಿ ಪ್ರಾಥಮಿಕ ಆರೋಗ್ಯ ಕೇಂದ್ರ, ಲಕ್ಷ್ಯ ಕಾರ್ಯಕ್ರಮ, ಜಿಲ್ಲಾ ಆಸ್ಪತ್ರೆಯ ರಕ್ತ ಶೇಖರಣಾ ಘಟಕ, ಯಗಟಿ ಮತ್ತು ಕಳಸದ ಸಮುದಾಯ ಆರೋಗ್ಯ ಕೇಂದ್ರ, 24*7 ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಚಿಕ್ಕಮಗಳೂರು ನಗರ ಆರೋಗ್ಯ ಕೇಂದ್ರ, ಕೊಪ್ಪ, ಶೃಂಗೇರಿ, ನರಸಾಪುರ, ಮೂಡಿಗೆರೆ, ನಗರ ಆರೋಗ್ಯ ಕೇಂದ್ರ, ಸುಂಕಶಾಲೆ ಪ್ರಾಥಮಿಕ ಆರೋಗ್ಯಕೇಂದ್ರ, ಕಡೂರು ಮತ್ತು ಕೊಪ್ಪದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ನೇಮಕ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 13.8.2021
ಅಧಿಸೂಚನೆಗೆ: https://bit.ly/2WOCZXQ
ಮಾಹಿತಿಗೆ: http://chikkamagaluru.nic.in