ವಿಜ್ಞಾನ ವಿಷಯದಲ್ಲಿ ಪಿಯುಸಿಯಾದವರಿಗೆ ಸೈನಿಕ ಶಾಲೆಯಲ್ಲಿ ಹುದ್ದೆ: 81 ಸಾವಿರ ರೂ.ವರೆಗೆ ಸಂಬಳ

sainik school
Published on

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೈನಿಕ್ ಸ್ಕೂಲ್ ಸೊಸೈಟಿಯ ಒಂದು ಭಾಗವಾಗಿರುವ ಮಣಿಪುರದ ಇಂಪಾಲ್​ನಲ್ಲಿರುವ ಸೈನಿಕ್ ಶಾಲೆಯಲ್ಲಿರುವ ಲ್ಯಾಬ್ ಅಸಿಸ್ಟೆಂಟ್ ಹಾಗೂ ಜನರಲ್ ಎಂಪ್ಲಾಯ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಅರ್ಜಿ ಸಲ್ಲಿಸಬಹುದು. ಒಟ್ಟು 16 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಎಸ್ಸಿಗೆ 3 ಸ್ಥಾನ, ಎಸ್ಟಿಗೆ 1, ಇತರ ಹಿಂದುಳಿದ ವರ್ಗಕ್ಕೆ 6, ಸಾಮಾನ್ಯವರ್ಗದ ಆಭ್ಯರ್ಥಿಗೆ 6 ಸ್ಥಾನ ಮೀಸಲಿರಿಸಲಾಗಿದೆ. ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ/ ಸ್ಕಿಲ್ ಪರೀಕ್ಷೆ ಮತ್ತು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಒಟ್ಟು ಹುದ್ದೆಗಳು: 16

ಹುದ್ದೆ ವಿವರ

* ಲ್ಯಾಬ್ ಅಸಿಸ್ಟೆಂಟ್ (ಬಯೋಲಜಿ) - 1

ವಿಜ್ಞಾನದಲ್ಲಿ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಇದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದವರಿಗೆ ಹಾಗೂ ವೃತ್ತಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಮಾಸಿಕ 25,500-81,100 ರೂ. ವೇತನ ಜತೆ ವಸತಿ ಸೌಲಭ್ಯ, ಎನ್​ಪಿಎಸ್, ಎಲ್​ಟಿಸಿ, ಗ್ರಾಚುಟಿ, ವೈದ್ಯಕೀಯ ಭತ್ಯೆ, ಪ್ರಯಾಣ ಭತ್ಯೆ, ಸೈನಿಕ್ ಸ್ಕೂಲ್ ಸೊಸೈಟಿಯ ನಿಯಮದನುಸಾರ ಇಬ್ಬರು ಮಕ್ಕಳಿಗೆ ಅನುದಾನಿತ ಶಾಲಾ ಶಿಕ್ಷಣದ ವ್ಯವಸ್ಥೆ ನೀಡಲಾಗುವುದು.

* ಜನರಲ್ ಎಂಪ್ಲಾಯಿ (ರೆಗ್ಯುಲರ್) - 2

* ಜನರಲ್ ಎಂಪ್ಲಾಯಿ (ಕಾಂಟ್ರಾಕ್ಚುವಲ್) - 13

ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶಿಕ್ಷಣ ಅಥವಾ ಹೆಚ್ಚಿನ ಶಿಕ್ಷಣ ಪಡೆದಿರಬೇಕು. ಮಲ್ಟಿ ಸ್ಕಿಲ್ಡ್ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಜನರಲ್ ಎಂಪ್ಲಾಯಿ ರೆಗ್ಯಲರ್​ಗೆ ಮಾಸಿಕ 18,000-56,900 ರೂ. ವೇತನ ಇದೆ. ಕಾಂಟ್ರಾಕ್ಚುವಲ್ ಅಭ್ಯರ್ಥಿಗಳಿಗೆ ಮಾಸಿಕ ನಿರ್ಧಿಷ್ಟ 9000 ರೂ. ವೇತನ ನೀಡಲಾಗುವುದು.

ವಯೋಮಿತಿ: 1.7.2021ಕ್ಕೆ ಅನ್ವಯವಾಗುವಂತೆ ಎಲ್ಲ ಹುದ್ದೆಗಳಿಗೂ ಕನಿಷ್ಠ 18 ವರ್ಷ, ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ: ಎಲ್ಲ ಅಭ್ಯರ್ಥಿಗಳು ಡಿಡಿ ಮುಖಾಂತರ 500 ರೂ. ಅನ್ನು ಅರ್ಜಿ ಶುಲ್ಕ ರೂಪದಲ್ಲಿ ಪಾವತಿಸಬೇಕು.

ಸೂಚನೆ: ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಅದರ ಒಂದು ಪ್ರತಿಯನ್ನು ಭಾವಚಿತ್ರದೊಂದಿಗೆ e Principal, Sainik School Imphal, P.O. Pangei Yangdong, Imphal East, Manipur, Pin – 795114 ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 29.8.2021 (ಎಂಪ್ಲಾಮೆಂಟ್ ನ್ಯೂಸ್​ನಲ್ಲಿ ಜಾಹೀರಾತು ಪ್ರಕಟವಾಗಿ 30 ದಿನದ ಒಳಗೆ)

ಅಧಿಸೂಚನೆಗೆ: https://bit.ly/3llbWxN|

ಮಾಹಿತಿಗೆ: ssimphal.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net