

ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್‌ಮೆಡಿಕಲ್ ಸೈನ್ಸ್ನ (ಎಐಐಎಂಎಸ್) ಅಂತಃಸ್ರಾವಶಾಸ್ತ್ರ ಮತ್ತು ಚಯಾಪಚಯ (ಎಂಡೊಕ್ರಿನಾಲಜಿ ಆ್ಯಂಡ್ ಮೆಟಬಾಲಿಸಂ) ವಿಭಾಗದಲ್ಲಿ ತಾತ್ಕಾಲಿಕ ಅವಧಿಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆ ಹೊರಡಿಸಲಾಗಿದೆ. ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
“Comparison of Seroprevalence of SARS-CoV2 among people with and without diabetes and/or hypertension among existing cardiovascular community cohort in National Capital Region (NC) of Delhi
ಎಂಬ ಯೋಜನೆಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು 8 ಹಾಗೂ 6 ತಿಂಗಳ ಅವಧಿ ಹೊಂದಿವೆ.
ಹುದ್ದೆ ವಿವರ
* ರಿಸರ್ಚ್ ಅಸೋಸಿಯೇಟ್ -1
ಎಸ್ಸಿ/ ಎಂವಿಎಸ್ಸಿ/ ಎಂ ಫಾರ್ಮಾ/ ಎಂಇ/ ಎಂ.ಟೆಕ್/ ಪಿಎಚ್ಡಿ/ ಎಂಡಿ/ ಎಂಎಸ್/ ಎಂಡಿಎಸ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 47,000 ಮೂಲ ವೇತನ ಹಾಗೂ ಶೇ.24 ಮನೆ ಬಾಡಿಗೆ ಭತ್ಯೆ ಸೇರಿ ಒಟ್ಟು 58,280 ರೂ. ವೇತನ ನಿಗದಿಪಡಿಸಲಾಗಿದೆ. ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
* ಫೀಲ್ಡ್ ಟೆಕ್ನಿಷಿಯನ್ -4 ಹಾಗೂ ಫೀಲ್ಡ್ ವರ್ಕರ್ -4
ವಿಜ್ಞಾನ ವಿಷಯದಲ್ಲಿ ದ್ವೀತಿಯ ಪಿಯುಸಿ ಮಾಡಿದ್ದು, ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ/ ಪಿಎಂಡಬ್ಲು/ ರೇಡಿಯಾಲಜಿ/ ರೇಡಿಯೋಗ್ರಫಿ/ ತತ್ಸಮಾನ ವಿಷಯದಲ್ಲಿ 2 ವರ್ಷದ ಡಿಪ್ಲೊಮಾ ಮಾಡಿರಬೇಕು. ಅಥವಾ ಡಿಎಂಎಲ್ಟಿ ಜತೆ ಒಂದು ವರ್ಷದ ವೃತ್ತಿ ಅನುಭವ ಅಥವಾ 2 ವರ್ಷದ ಫೀಲ್ಡ್/ ಲ್ಯಾಬೊರೇಟರಿ ವೃತ್ತಿ ಅನುಭವ ಅಥವಾ ಬಿಎಸ್ಸಿ ಪದವಿಯನ್ನು 3 ವರ್ಷದ ವೃತ್ತಿ ಅನುಭವ ಎಂದು ಪರಿಗಣಿಸಲಾಗುವುದು. ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮಾಸಿಕ 18,000 ರೂ. ವೇತನ ಇದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 15.6.2021
ಅರ್ಜಿ ಸಲ್ಲಿಕೆ ವಿಳಾಸ: Mr. Sanjay Kumar, Private Secretary to HOD, Department of Endocrinology and Metabolism Convergence Block, 7 th Floor, Room No.7002, All India Institute of Medical Sciences (AIIMS), Ansari Nagar, New Delhi-110029
ಅಧಿಸೂಚನೆಗೆ: https://bit.ly/2ThdYTG
ಮಾಹಿತಿಗೆ: www.aiims.edu