

ಕೈಗಾರಿಕಾ ಹಾಗೂ ವೈಜ್ಞಾನಿಕ ಸಂಶೋಧನಾ ಮಂಡಳಿಯ (ಸಿಎಸ್ಐಆರ್) ಅಧೀನದಲ್ಲಿ ಕಾರ್ಯನಿರ್ವಹಿಸುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂನ ಡೆಹ್ರಾಡೂನ್ ಟಕದಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ಸ್-1 ಮತ್ತು ಪ್ರಾಜೆಕ್ಟ್ ಅಸೋಸಿಯೇಟ್-2 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಭ್ಯಥಿರ್ಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಒಟ್ಟುಹುದ್ದೆಗಳು: 21
ಹುದ್ದೆ ವಿವರ
* ಪ್ರಾಜೆಕ್ಟ್ ಅಸೋಸಿಯೇಟ್-1 (ಕೆಮಿಸ್ಟ್ರಿ-7, ಕೆಮಿಕಲ್ ಇಂಜಿನಿಯರಿಂಗ್-7, ಮೆಕ್ಯಾನಿಕಲ್ ಇಂಜಿನಿಯರಿಂಗ್-3, ಲೈ್ಸೈನ್ಸ್/ ಬಯೋಟೆಕ್ನಾಲಜಿ/ ಮೈಕ್ರೋಬಯಾಲಜಿ/ ಬಯೋಕೆಮಿಸ್ಟ್ರಿ-1) - 18
* ಪ್ರಾಜೆಕ್ಟ್ ಅಸೋಸಿಯೇಟ್ಸ್-2 (ಕೆಮಿಸ್ಟ್ರಿ-1, ಕೆಮಿಕಲ್/ ಪೆಟ್ರೋಲಿಯಂ ಇಂಜಿನಿಯರಿಂಗ್-2) - 3
ವಿದ್ಯಾರ್ಹತೆ: ಕೆಮಿಕಲ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಕೆಮಿಕಲ್/ ಪೆಟ್ರೋಲಿಯಂ ಇಂಜಿನಿಯರಿಂಗ್ನಲ್ಲಿ ಬಿಇ/ ಬಿ.ಟೆಕ್, ಕೆಮಿಸ್ಟ್ರಿ, ಲೈಫ್‌ಸೈನ್ಸ್/ ಬಯೋಟೆಕ್ನಾಲಜಿ/ ಮೈಕ್ರೋಬಯಾಲಜಿ/ ಬಯೋಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಮಾಡಿರಬೇಕು. ಪ್ರಾಜೆಕ್ಟ್ ಅಸೋಸಿಯೇಟ್-2 ಗೆ ವೃತ್ತಿ ಅನುಭವ ಕೇಳಲಾಗಿದೆ.
ಸ್ಟೆಪೆಂಡ್: ಪ್ರಾಜೆಕ್ಟ್ ಅಸೋಸಿಯೇಟ್ 1ಕ್ಕೆ ಮಾಸಿಕ 25,000ರೂ. (ಸಿಎಸ್ಐಆರ್ನ ಅರ್ಹತಾ ಪರೀಕ್ಷೆ, ಯುಜಿಸಿ ನೆಟ್, ಗೇಟ್ ಹಾಗೂ ಇತರ ರಾಷ್ಟ್ರೀಯ ಪರೀಕ್ಷೆ ಉತ್ತೀರ್ಣರಾದವರಿಗೆ 31,000 ರೂ.) ಹಾಗೂ ಮನೆ ಬಾಡಿಗೆ ಭತ್ಯೆ ನೀಡಲಾಗುವುದು. ಪ್ರಾಜೆಕ್ಟ್ ಅಸೋಸಿಯೇಟ್ 2 ಗೆ ಮಾಸಿಕ 28,000 ರೂ. (ಸಿಎಸ್ಐಆರ್ನ ಅರ್ಹತಾ ಪರೀಕ್ಷೆ, ಯುಜಿಸಿ ನೆಟ್, ಗೇಟ್ ಹಾಗೂ ಇತರ ರಾಷ್ಟ್ರೀಯ ಪರೀಕ್ಷೆ ಉತ್ತೀರ್ಣರಾದವರಿಗೆ 35,000 ರೂ.) ಹಾಗೂ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಶಾರ್ಟ್ಲಿಸ್ಟ್ ಮಾಡಲಾದ ಅಭ್ಯಥಿರ್ಗಳನ್ನು ಆನ್ಲೈನ್ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಿಎಸ್ಐಆರ್-ಐಐಪಿ ವೆಬ್ಸೈಟ್ನಲ್ಲಿ ಸಂದರ್ಶನದ ದಿನಾಂಕ, ಸಮಯ, ಅಭ್ಯಥಿರ್ಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 7.5.2021
ಅಧಿಸೂಚನೆಗೆ: https://bit.ly/3npIMwd
ಮಾಹಿತಿಗೆ: http://www.iip.res.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: