ವಿಜ್ಞಾನ ಪದವೀಧರಿಗೆ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್‍ನಲ್ಲಿವೆ ಅವಕಾಶ

job
Published on

ಕೌನ್ಸಿಲ್ ಆಫ್​ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್‍ನ (ಸಿಎಸ್‍ಐಆರ್) ಅಧೀನದಲ್ಲಿ ಕಾರ್ಯ ನಿರ್ವಹಿಸುವ ಅಡ್ವಾನ್ಸ್ಡ್ ಮೆಟಿರಿಯಲ್ಸ್ ಆ್ಯಂಡ್ ಪ್ರೊಸೆಸ್​ ರಿಸರ್ಚ್ ಇನ್‍ಸ್ಟಿಟ್ಯೂಟ್ (ಎಎಂಪಿಆರ್‍ಐ) ಭೋಪಾಲ್‍ನ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.ಒಟ್ಟು ಹುದ್ದೆಗಳು: 25

ಸಿಎಸ್‍ಐಆರ್-ಎಎಂಪಿಆರ್‍ಐನಲ್ಲಿ ಕೈಗೊಳ್ಳಲಾಗುತ್ತಿರುವ ಜಿಎಪಿ 0087, ಎಚ್‍ಸಿಪಿ 0030, ಟಿಎಲ್‍ಪಿ 0001, ಎಂಎಲ್‍ಪಿ 210 ಹಾಗೂ ಇತರ ವಿವಿಧ ಯೋಜನೆಗಳಿಗೆ ಪ್ರಾಜೆಕ್ಟ್ ಸ್ಟಾïಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ನಿಯಮದನ್ವಯ ಮೀಸಲಾತಿ ಅನ್ವಯಿಸುತ್ತದೆ.

ಹುದ್ದೆ, ಸಂಖ್ಯೆ ವಿವರ

* ಜೂನಿಯರ್ ರಿಸರ್ಚ್ ಫೆಲೋ - 2

* ಪಿಎ-ಐಐ - 9

* ಪ್ರಾಜೆಕ್ಟ್ ಅಸೋಸಿಯೇಟ್-ಐಐ - 3

* ಪ್ರಾಜೆಕ್ಟ್ ಸೈಂಟಿಸ್ಟ್-ಐ - 1

* ಪ್ರಾಜೆಕ್ಟ್ ಅಸೋಸಿಯೇಟ್-ಐ - 8

* ಪಿಎ ಐಐಐ - 1

* ಪಿಎ ಐ - 1

ಶೈಕ್ಷಣಿಕ ಅರ್ಹತೆ: ಕೆಮಿಸ್ಟ್ರಿ/ ಮೈಕ್ರೋಬಯಾಲಜಿ/ ಫಿಜಿಕ್ಸ್/ ಮೆಟಿರಿಯಲ್ ಸೈನ್ಸ್/ಮೆಕ್ಯಾನಿಕಲ್/ ಇನ್ಫಾರ್ಮೇಷನ್ ಟೆಕ್ನಾಲಜಿ, ನ್ಯಾನೋ ಟೆಕ್ನಾಲಜಿ/ ಬಯೋಟೆಕ್ನಾಲಜಿ/ ಮೆಟಲರ್ಜಿಕಲ್/ ಕೆಮಿಕಲ್ ಇಂಜಿನಿಯರಿಂಗ್‍ನಲ್ಲಿ ಬಿಇ,ಬಿ.ಟೆಕ್, ಎಂ.ಟೆಕ್, ಎಂಎಸ್ಸಿ, ಎಂಸಿಎ, ಪಿಎಚ್.ಡಿ ಅಧ್ಯಯನ ಮಾಡಿರಬೇಕು. ಪದವಿಗಳಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ವೃತ್ತಿ ಅನುಭವ ಅವಶ್ಯ.

ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 28 ವರ್ಷದಿಂದ 35 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 20,000 ರೂ.ನಿಂದ 56,000 ರೂ. ವೇತನ ಜತೆ ಮನೆ ಬಾಡಿಗೆ ಭತ್ಯೆ ನೀಡಲಾಗುವುದು. ನೆಟ್, ಗೇಟ್, ಸಿಎಸ್‍ಐಆರ್​ನ ಪ್ರವೇಶ ಪರೀಕ್ಷೆ ಉತ್ತೀರ್ಣರಾದವರಿಗೆ ಹೆಚ್ಚಿನ ವೇತನ ಇದೆ. ಅಧಿಕೃತ ಪ್ರವಾಸ ಕೈಗೊಂಡಾಗ ಭತ್ಯೆ ನೀಡಲಾಗುವುದು.

ಇತರ ಸೌಲಭ್ಯ: ಕನಿಷ್ಠ 2 ವರ್ಷದ ಅವಧಿಗೆ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಪಿಎಚ್.ಡಿಗೆ ದಾಖಲಾಗಲು ಅವಕಾಶ ನೀಡಲಾಗುವುದು. ಕೇಂದ್ರ ಸರ್ಕಾರದ ವೈದ್ಯಕೀಯ ನಿಯಮದಂತೆ ವೈದ್ಯಕೀಯ ಸೌಲಭ್ಯ ನೀಡಲಾಗುವುದು. ಪ್ರಾಜೆಕ್ಟ್ ಸ್ಟಾïಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗುವುದು. ವಸತಿ ವ್ಯವಸ್ಥೆ ಸಾಧ್ಯವಾಗದೇ ಇದ್ದಾಗ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾದರೆ ಆಯ್ಕೆ ಸಮಿತಿ ಶಾರ್ಟ್‍ಲಿಸ್ಟ್ ಸಿದ್ಧಪಡಿಸಲಾಗುವುದು. ಆಯ್ದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 11.1.2021

ಅಧಿಸೂಚನೆಗೆ: https://bit.ly/3pOiyU4

ಮಾಹಿತಿಗೆ: https://ampri.res.in

ಇನ್ನೂ ಅನೇಕ ಉದ್ಯೋಗಾವಕಾಶಗಳ ಕುರಿತು  ಇಲ್ಲಿ ಕ್ಲಿಕ್‌ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net