More

    10 ಪುಷ್‍ಅಪ್ಸ್, 20 ಬಸ್ಕಿ ಹೊಡೆಯಬಲ್ಲಿರಾ? ಭಾರತೀಯ ನೌಕಾಪಡೆಯಲ್ಲಿ ನಿಮಗಿವೆ 358 ಹುದ್ದೆಗಳು..

    ಭಾರತೀಯ ನೌಕಾಪಡೆಯ ಜನರಲ್ ಡ್ಯೂಟಿ ಮತ್ತು ಡೊಮೆಸ್ಟಿಕ್ ವಿಭಾಗದಲ್ಲಿ ಇರುವ ನಾವಿಕ ಹಾಗೂ ಯಾಂತ್ರಿಕ್ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳಿಂದ 358 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

    ನೌಕಾಪಡೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ 358 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 160 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 43, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 101, ಎಸ್ಸಿಗೆ 40, ಎಸ್ಟಿಗೆ 14 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ತಮ್ಮ ಆದ್ಯತೆಯ 5 ಪರೀಕ್ಷಾ ಕೇಂದ್ರಗಳನ್ನು ನಮೂದಿಸಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಹಾಗೂ 30 ಕಿ.ಮೀ ಒಳಗೆ ಪರೀಕ್ಷಾ ಕೇಂದ್ರ ನೀಡಲಾಗುವುದು.

    ಹುದ್ದೆಗಳ ವಿವರ
    * ನಾವಿಕ್ (ಜನರಲ್ ಡ್ಯೂಟಿ) – 260
    * ನಾವಿಕ್ (ಡೊಮೆಸ್ಟಿಕ್ ಬ್ರಾಂಚ್) – 50
    * ಯಾಂತ್ರಿಕ್ (ಮೆಕ್ಯಾನಿಕಲ್) – 31
    * ಯಾಂತ್ರಿಕ್ (ಎಲೆಕ್ಟ್ರಿಕಲ್) – 7
    * ಯಾಂತ್ರಿಕ್ (ಎಲೆಕ್ಟ್ರಾನಿಕ್ಸ್) – 10

    ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಪಿಯುಸಿ, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ಸ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ

    ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 22 ವರ್ಷ. ನಾವಿಕ್ ಜನರಲ್ ಡ್ಯೂಟಿಗೆ 1999 ಆಗಸ್ಟ್ 1 ರಿಂದ 2003ರ ಜುಲೈ 31 ರ ಒಳಗೆ ಜನಿಸಿರಬೇಕು, ನಾವಿಕ್ ಡೊಮೆಸ್ಟಿಕ್ ಬ್ರಾಂಚ್‍ಗೆ 1999 ಅಕ್ಟೋಬರ್ 1 ರಿಂದ 2003 ಸೆಪ್ಟೆಂಬರ್ 30ರ ಒಳಗೆ ಜನಿಸಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ 3 ರಿಂದ 5 ವರ್ಷ ವಯೋ ಸಡಿಲಿಕೆ ಇದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಹಾಗೂ 4 ಹಂತಗಳ ಪರೀಕ್ಷೆಯಲ್ಲಿನ ಪಾಲ್ಗೊಳ್ಳುವಿಕೆ ಆಧರಿಸಿ ಆಯ್ಕೆ ಮಾಡಲಾಗುವುದು. ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆ ಇರಲಿದ್ದು, ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೋಮಾ  ಪಠ್ಯಕ್ರಮದ ಪ್ರಶ್ನೆಗಳಿರುತ್ತವೆ. ಇದರಲ್ಲಿ ಆಯ್ಕೆಯಾದವರಿಗೆ 2ನೇ ಹಂತದ ಪರೀಕ್ಷೆಯಾಗಿ ದೈಹಿಕ ಸಾಮಥ್ರ್ಯ ಪರೀಕ್ಷೆ ನಡೆಸಲಾಗುವುದು.

    7 ನಿಮಿಷದಲ್ಲಿ 1.6 ಕಿ.ಮೀ. ಓಟ ಪೂರೈಸಬೇಕು. 10 ಪುಷ್‍ಅಪ್ಸ್, 20 ಬಸ್ಕಿ ಹೊಡೆಯಬೇಕು. ಇದರಲ್ಲಿ ಆಯ್ಕೆ ಆದವರು 3ನೇ ಹಂತದಲ್ಲಿ ದಾಖಲೆ ಪರಿಶೀಲನೆಗೆ ಹಾಜರಾಗಬೇಕು. ದಾಖಲೆ ಪರಿಶೀಲನೆ ನಂತರ ನಾಲ್ಕನೇ ಹಂತದಲ್ಲಿ ಆಯ್ಕೆ ಮಾಡಿ ನೇಮಕ ಮಾಡಲಾಗುವುದು. ಪರೀಕ್ಷೆಗಳು ಮಾರ್ಚ್‍ನಿಂದ ಅಕ್ಟೋಬರ್‍ವರೆಗೆ ನಡೆಯುವ ಸಂಭವವಿದೆ.

    ಪರೀಕ್ಷಾ ಶುಲ್ಕ: ಎಸ್ಸಿ, ಎಸ್ಟಿ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು ಆನ್‍ಲೈನ್ ಮೂಲಕ 250 ರೂ. ಪಾವತಿಸಬೇಕು.

    ದೈಹಿಕ ದೃಢತೆ: 157 ಸೆಂ.ಮೀ. ಎತ್ತರ, ಎದೆ-5 ಸೆಂ.ಮೀ., ತೂಕ – ಎತ್ತರ ಮತ್ತು ವಯಸ್ಸಿಗೆ ಅನುಗುಣ. ದೇಹದ ಯಾವುದೇ ಭಾಗದಲ್ಲಿ ಟ್ಯಾಟೂ (ಹಚ್ಚೆ) ಇರಬಾರದು.

    ವೇತನ: ನಾವಿಕ್‍ಗೆ ಮಾಸಿಕ 21,700 ರೂ. ಜತೆ ಡಿಎ ಭತ್ಯೆ ಜತೆ ನೇಮಕ ಮಾಡಲಾಗುವ ಸ್ಥಳ, ಕೆಲಸದ ಆಧಾರದಲ್ಲಿ ಇತರ ಭತ್ಯೆ ನೀಡಲಾಗುವುದು. ಯಾಂತ್ರಿಕ್ ಹುದ್ದೆಗೆ ಮಾಸಿಕ 29,200 ರೂ.ಜತೆ ಯಾಂತ್ರಿಕ್ ಪೇ ಎಂದು 6,200 ರೂ., ಡಿಎ ಹಾಗೂ ಇತರ ಭತ್ಯೆಗಳಿರುತ್ತವೆ. ವೈದ್ಯಕೀಯ ಸೌಲಭ್ಯ, ಉಚಿತ ರೇಷನ್‍ನಂತಹ ಇತರ ಸೌಲಭ್ಯಗಳಿವೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 19.1.2021
    ಅಧಿಸೂಚನೆಗೆ: https://bit.ly/3pTfDtA
    ಮಾಹಿತಿಗೆ: https://joinindiancoastguard.cdac.in

    ಇನ್ನೂ ಅನೇಕ ಉದ್ಯೋಗಾವಕಾಶಗಳ ಕುರಿತು  ಇಲ್ಲಿ ಕ್ಲಿಕ್‌ ಮಾಡಿ..

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಡಿಪ್ಲೋಮಾ, ಬಿಇ ಮಾಡಿದ ಫ್ರೆಷರ್ಸ್‌ಗೆ ಕೆಪಿಟಿಸಿಎಲ್‌ನಲ್ಲಿ ಖಾಲಿ ಇವೆ 200 ಹುದ್ದೆಗಳು

    ಪದವಿ ಮುಗಿಸಿದವರಿಗೆ ಗುಡ್​ ನ್ಯೂಸ್​: ಸ್ಟಾಫ್​ ಸೆಲೆಕ್ಷನ್​ ಕಮಿಷನ್​ನಿಂದ 6,506 ಹುದ್ದೆಗಳ ಭರ್ತಿ

    ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವಾಲಯದಲ್ಲಿ ಡಿಪ್ಲೋಮಾ, ಬಿಇ ಪದವೀಧರರಿಗೆ ಉದ್ಯೋಗ

    ಐಟಿಐ ಆಗಿದೆಯಾ? ಬೆಂಗಳೂರಿನಲ್ಲಿವೆ ಮ್ಯಾನೇಜರ್​ ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts