More

    ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವಾಲಯದಲ್ಲಿ ಡಿಪ್ಲೋಮಾ, ಬಿಇ ಪದವೀಧರರಿಗೆ ಉದ್ಯೋಗ

    ಹೈದರಾಬಾದ್‍ನಲ್ಲಿರುವ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್​ ಟೂಲ್ ಡಿಸೈನ್ (ಸಿಐಟಿಡಿ) ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವಾಲಯದ (ಎಂಎಸ್‍ಎಂಇ) ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಟೆಕ್ನೀಷಿಯನ್ ಹಾಗೂ ನಾನ್‍ಟೆಕ್ನೀಷಿಯನ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಒಟ್ಟೂ 29 ಹುದ್ದೆಗಳು ಇವೆ.

    ಟೂಲ್ ರೂಮ್ ವಿಭಾಗ, ಉತ್ಪಾದನೆ, ಉತ್ಪಾದನಾ ಘಟಕ, ಸಂಸ್ಥೆ, ಫರ್ಮ್ಸ್​ ಹಾಗೂ ಇತರ ಸಂಬಂಧಿತ ಉದ್ಯಮದಲ್ಲಿ ವೃತ್ತಿ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 11 ತಿಂಗಳ ಗುತ್ತಿಗೆ ಆಧಾರದಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಹುದ್ದೆ, ಸಂಖ್ಯೆ ವಿವರ
    * ಇಂಡಸ್ಟ್ರಿ 4.0 ಟ್ರೈನರ್ – 3
    * ಇಂಡಸ್ಟ್ರಿಯಲ್ ಆಟೋಮೇಷನ್ ಟ್ರೈನರ್ (ಇಎಸ್‍ಡಿಎಂ ವಿಂಗ್, ಮೆಕ್ಟ್ರೊನಿಕ್ಸ್) – 6
    * ಪ್ಲೇಸ್‍ಮೆಂಟ್ ಆಫೀಸರ್ – 1
    * ಮೈಂಟೇನೆನ್ಸ್ ಆಫೀಸರ್ (ಮೆಕ್ಯಾನಿಕಲ್) – 2
    * ಸಿಎನ್‍ಸಿ ಎಲೆಕ್ಟ್ರಿಕಲ್ ಮೆಷಿನ್ ಮೇಂಟೆನೆನ್ಸ್ ಇಂಜಿನಿಯರಿಂಗ್ – 2
    * ಮಾರ್ಕೇಟಿಂಗ್ ಮ್ಯಾನೇಜರ್/ ಇಂಜಿನಿಯರ್ – 3
    * ಮೆಕ್ಟ್ರೊನಿಕ್ಸ್/ ಆಟೋಮೇಷನ್ ಇಂಜಿನಿಯರ್ – 2
    * ಟೂಲ್ ಡಿಸೈನ್ ಇಂಜಿನಿಯರ್ – 2
    * ಪ್ರೊಡಕ್ಷನ್ ಪ್ಲಾನಿಂಗ್ ಆ್ಯಂಡ್ ಕಂಟ್ರೋಲ್ ಮ್ಯಾನೇಜರ್ – 1
    * ಟೂಲ್ ಇನ್‍ಸ್ಪೆಕ್ಷನ್ ಇಂಜಿನಿಯರ್ (ಕ್ವಾಲಿಟಿ-ಸಿಎಂಎಂ) – 2
    * ಟೂಲ್ ಮೇಕರ್ – 5

    ಶೈಕ್ಷಣಿಕ ಅರ್ಹತೆ: ಡಿಪ್ಲೋಮಾ, ಬಿಇ, ಬಿ.ಟೆಕ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್/ ಕಂಟ್ರೋಲ್ ಸಿಸ್ಟಮ್ಸ್/ ಇನ್​ಫೋರ್ಮೇಷನ್​ ಟೆಕ್ನಾಲಜಿ, ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ, ಎಂಬೆಡೆಡ್ ಸಿಸ್ಟಂ ಇಂಜಿನಿಯರಿಂಗ್, ಎಲೆಕ್ಟ್ರಿಕಲ್/ ಮೆಕ್ಟ್ರೊನಿಕ್ಸ್ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಸ್ನಾತಕೋತ್ತರ ಪದವಿ ಡಿಪ್ಲೋಮಾ.

    ಇತರ ಅರ್ಹತೆಗಳು: ಡೇಟಾ ಅನಾಲಿಸಿಸ್, ಕಾನ್‍ಫಿಗರೇಷನ್ ಮತ್ತು ಇಂಟರ್​ಪ್ರೊಸೆಸಿಂಗ್, ಮ್ಯಾಟ್‍ಲ್ಯಾಬ್ ಪ್ರೋಗ್ರಾಮಿಂಗ್, ಪ್ರೆಸೆಂಟೇಷನ್ ಕೌಶಲ, ಸಂವಹನ ಕೌಶಲ, ಡಿಜಿಟಲ್ ಕಂಟ್ರೋಲ್ ಸಿಸ್ಟಮ್, ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್, ಸಿ ಪ್ರೋಗ್ರಾಮಿಂಗ್ ಸೇರಿ ಹುದ್ದೆಗೆ ಅನುಗುಣವಾಗಿ ವಿವಿಧ ಕೌಶಲ ಹಾಗೂ ಜ್ಞಾನ ಹೊಂದಿರಬೇಕು.

    ಜವಾಬ್ದಾರಿಗಳು: ಅಭ್ಯರ್ಥಿಗಳು ತಮ್ಮ ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಬೋಧನೆ ಮಾಡಲು ಹಾಗೂ ಯೋಜನೆಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ನಿಭಾಯಿಸುವ ಕೌಶಲ ಹೊಂದಿರಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 2.1.2021
    ಅಧಿಸೂಚನೆಗೆ: https://bit.ly/38LkkyK/ https://bit.ly/2WMCUAM
    ಮಾಹಿತಿಗೆ: http://www.citdindia.org

    ಹೆಚ್ಚಿನ ಉದ್ಯೋಗದ ಮಾಹಿತಿಗೆ ಈ ಲಿಂಕ್​ ಕ್ಲಿಕ್ಕಿಸಿ

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ನಿರುದ್ಯೋಗಿಗಳಿಗೆ ಬಂಪರ್‌ ಅವಕಾಶ: ಅಂಚೆ ಇಲಾಖೆಯಲ್ಲಿದೆ 2443 ಹುದ್ದೆ- ಕರ್ನಾಟಕದಲ್ಲಿ ಕೆಲಸ

    ಕಾನೂನು, ಇಂಜಿನಿಯರಿಂಗ್‌ ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿವೆ ವಿವಿಧ ಹುದ್ದೆ

    ಪಿಯುಸಿ ಪಾಸ್​ ಆಗಿರುವಿರಾ? ಹಾಗಿದ್ದರೆ ಬೆಂಗಳೂರಿನಲ್ಲಿ ಐಸಿಎಂಆರ್​ನಲ್ಲಿವೆ ಉದ್ಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts