ಟ್ರಕ್‌- ಕಾರುಗಳ ನಡುವೆ ಭೀಕರ ಅಪಘಾತ: ವೈದ್ಯ ಸೇರಿ ಕುಟುಂಬದ ಐದು ಮಂದಿಯ ದುರ್ಮರಣ

accident1
Published on

ಪುಣೆ: ರಾಯಗಢ ಜಿಲ್ಲೆಯ ಖೊಪೋಲಿ ಸಮೀಪದ ಪುಣೆ-ಮುಂಬೈ ಎಕ್ಸ್ ಪ್ರಸ್ ವೇನಲ್ಲಿ ಇಂದು ಬೆಳಗ್ಗೆ ಕಂಟೈನರ್ ಟ್ರಕ್‌ ಹಾಗೂ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ವೈದ್ಯ ಸೇರಿ ಒಂದೇ ಕುಟುಂಬದ ಐದು ಮಂದಿ ಮೃತಪಟ್ಟಿರುವ ಘಟನೆ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ.

ಖಪೋಲಿ ಬಳಿ ಈ ಘಟನೆ ಸಂಭವಿಸಿದೆ. ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಎಂಎಂಸಿ) ವೈದ್ಯ ಸೇರಿ ಅವರ ಇಡೀ ಕುಟುಂಬ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವರಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

ರಾಯಗಢ ಜಿಲ್ಲಾ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ರಾತ್ರಿ 1ರ ಸುಮಾರಿಗೆ ಮುಂಬೈನತ್ತ ತೆರಳುತ್ತಿದ್ದ ಕಂಟೈನರ್ ಟ್ರಕ್ ಎರಡು ಕಾರುಗಳಿಗೆ ಡಿಕ್ಕಿಯಾಗಿದ್ದು ಈ ಘಟನೆ ಸಂಭವಿಸಿದೆ. ಎಲ್ಲಾ ವಾಹನಗಳೂ ಜಖಂ ಆಗಿವೆ.

ಮೃತಪಟ್ಟವರನ್ನು ಡಾ.ವೈಭವ್ ವಸಂತ್(40 ವರ್ಷ) ವೈಭವ್ ತಾಯಿ ಉಷಾವಸಂತ್(63), ಪತ್ನಿ ವೈಶಾಲಿ(38) ಹಾಗೂ ಪುತ್ರಿ ಶ್ರೇಯಾ(5) ಹಾಗೂ ಮುಂಬೈ ಗೋರೆಗಾಂವ್ ನಿವಾಸಿ ಮಂಜು ಪ್ರಕಾಶ್(58)ಎಂದು ಗುರುತಿಸಲಾಗಿದೆ. ಡಾ. ವೈಭವ್ ಅವರ ಪುತ್ರ ಅರ್ನವ್ ಗಂಭೀರ ಗಾಯಗೊಂಡಿದ್ದು, ಜೀವಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

ಖಲಾಪುರ್ ಟೋಲ್ ಪ್ಲಾಜಾ ಬಳಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಹಿಂಬದಿಯಿಂದ ಟ್ರಕ್ ಬಲವಾಗಿ ಡಿಕ್ಕಿ ಹೊಡಿದಿದೆ. ಟ್ರಕ್ ಚಾಲಕ ಅತಿ ವೇಗದಿಂದ ಚಾಲನೆ ಮಾಡಿದ್ದು ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net