ಈತನೇ ನೋಡಿ ಜಗತ್ತಿನ ಅತಿ ಎತ್ತರದ ಟೀನೇಜರ್...​

tallest
Published on

ಬೀಜಿಂಗ್: ಈ ಬಾಲಕನ ವಯಸ್ಸು 14. ಇದೀಗ ಈಗ ವಿಶ್ವದ ಅತೀ ಎತ್ತರದ ಟೀನೇಜರ್​ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ಚೀನಾದ ಸಿಚುವಾನ್ ಪ್ರಾಂತ್ಯದ ಲೇಷನ್​ ನಿವಾಸಿಯಾಗಿರುವ ಈತನ ಹೆಸರು ರೆನ್ ಕೀಯು. ಈತನ ಉದ್ದ 7 ಅಡಿ ಮೂರು ಇಂಚು. ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ರೆನ್​ 18 ವರ್ಷ ವಯಸ್ಸಿನವರಿಗಿಂತ ಕೆಳಗಿನ ಪುರುಷರ ವಿಭಾಗದಲ್ಲಿ ಅತಿ ಎತ್ತರದ ಟೀನೇಜರ್ ಎಂಬ ಗಿನ್ನೆಸ್ ದಾಖಲೆ ಮಾಡಿದ್ದಾನೆ.

ವಿಶ್ವದ ಅತಿ ಎತ್ತರದ ಪುರುಷ ಹದಿಹರೆಯದವರ ದಾಖಲೆಯನ್ನು ಈ ಹಿಂದೆ ಯುಎಸ್‍ನ ಕೆವಿನ್ ಬ್ರಾಡ್‍ಫಾರ್ಡ್ ಹೊಂದಿದ್ದರು. ಆದರೆ ಕೆವಿನ್ ಗಿಂತ 5 ಸೆಂ.ಮೀ ಎತ್ತರ ಇರುವ ಮೂಲಕವಾಗಿ ಅವರ ದಾಖಲೆಯನ್ನು ಕಿಯು ಮುರಿದಿದ್ದಾರೆ.

ಅವನ ಎತ್ತರ ನೋಡಿ ಅನೇಕ ಮಂದಿ ನಕ್ಕಿದ್ದರಂತೆ. ಮಾತ್ರವಲ್ಲದೇ ಶಾಲೆಗೆ ಸೇರುವ ಸಂದರ್ಭದಲ್ಲಿ ಈತ ದೊಡ್ಡವನಿರಬೇಕು ಎಂದುಕೊಂಡಿದ್ದರಂತೆ. ಈ ಬಗ್ಗೆ ತನಗಾದ ಅಸಮಾಧಾನವನ್ನು ಹೇಳಿಕೊಂಡಿರುವ ರೆನ್​, ನಾನು ಶಾಲೆಗೆ ಪ್ರವೇಶಿಸಿದಾಗಿನಿಂದ ನನ್ನ ವಯಸ್ಸಿನ ಸ್ನೇಹಿತರಿಗಿಂತ ನಾನು ಎತ್ತರವಾಗಿರುವುದನ್ನು ಗಮನಿಸಿದ್ದೇನೆ. ನನ್ನ ಎತ್ತರವನ್ನು ನೋಡಿ ಹಲವರು ನನ್ನನ್ನು ದೊಡ್ಡವನು ಎಂದು ತಿಳಿದುಕೊಂಡಿದ್ದರು. ಇದರಿಂದ ಬೇಸರದ ಜತೆಗೆ ಮುಜುಗರವೂ ಆಗುತ್ತಿತ್ತು.

ಆದರೆ ಇದೇ ಎತ್ತರದಿಂದ ಏನನ್ನಾದರೂ ಸಾಧನೆ ಮಾಡಬೇಕು ಎಂದು ಆಲೋಚಿಸಿದೆ. ಆಗ ವಿಶ್ವ ದಾಖಲೆಯನ್ನು ಪಡೆಯಬಹುದೇ ಎಂದು ಪ್ರಯತ್ನಿಸಿದೆ. ಈಗ ಗಿನ್ನೆಸ್ ದಾಖಲೆ ಪಡೆದಿದ್ದೇನೆ ಎಂದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net