

ನವದೆಹಲಿ: ರೈತರ ಪ್ರತಿಭಟನೆಯ ಹೆಸರಿನಲ್ಲಿ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಿ ಮೋದಿಯವರಿಗೆ ಕಳಂಕ ತರಲು ಹೇಗೆಲ್ಲಾ ಕಾರ್ಯಾಚರಣೆ ಮಾಡಬಹುದು ಎಂಬ ಅಂಶಗಳುಳ್ಳ ಟೂಲ್ಕಿಟ್ ಕೆಲ ತಿಂಗಳ ಹಿಂದೆ ಬಹಿರಂಗಗೊಂಡು ಭಾರಿ ವಿವಾದವನ್ನೇ ಸೃಷ್ಟಿಸಿತ್ತು. ತಮ್ಮ ಸಮುದಾಯ, ಗುಂಪು, ಪಕ್ಷಗಳ ನಡುವೆ ಮುಂದೆ ನಡೆಸಲು ಉದ್ದೇಶಿಸಿರುವ ಕಾರ್ಯತಂತ್ರಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಿ ಹೊರಗಡೆ ಸೋರಿಕೆಯಾಗದಂತೆ ತಮ್ಮ ತಮ್ಮ ನಡುವೆಯಷ್ಟೇ ದಾಖಲೆಯ ರೂಪದಲ್ಲಿ ಇರಬೇಕಾಗಿದ್ದ ಈ ‘ಟೂಲ್ ಕಿಟ್’ ಇಡೀ ದೇಶದಲ್ಲಿ ಆಗ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.
ಆದರೆ ಇದೀಗ ಕಾಂಗ್ರೆಸ್ನ ರಹಸ್ಯಮಯ ಎನ್ನಲಾಗುವ ಟೂಲ್ಕಿಟ್ ಸೋರಿಕೆಯಾಗಿಬಿಟ್ಟಿದ್ದು, ಇದರಲ್ಲಿ ಕೋವಿಡ್ ಆಸ್ಪತ್ರೆಗಳ ಬೆಡ್ಬ್ಲಾಕ್ನ ಭಯಾನಕ ಮುಖ ಬಯಲಾಗಿದೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಮಸಿ ಬಳಿಯುವ ಸಲುವಾಗಿ ಕೋವಿಡ್ ಬಿಕ್ಕಟ್ಟನ್ನೇ ಬಂಡವಾಳ ಮಾಡಿಕೊಂಡಿರುವ ಬೆಚ್ಚಿ ಬೀಳಿಸುವ ಮಾಹಿತಿಗಳನ್ನು ಕಾಂಗ್ರೆಸ್ನವರು ತಯಾರು ಮಾಡಿದ್ದಾರೆ ಎನ್ನಲಾದ ಈ ಟೂಲ್ಕಿಟ್ ಒಳಗೊಂಡಿದೆ.
ಕಾಂಗ್ರೆಸ್ ನಾಯಕರು ಸ್ಥಳೀಯ ನಾಯಕರೊಂದಿಗೆ ಸಹಭಾಗಿತ್ವದಲ್ಲಿ ಕೆಲವು ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ಬ್ಲಾಕ್ ಮಾಡಿದ್ದು, ಆಸ್ಪತ್ರೆಗಳಲ್ಲಿ ಖಾಲಿ ಇರುವ ಹಾಸಿಗೆಗಳನ್ನು ತಮ್ಮ ನಿರ್ದೇಶದನ ಮೇಲಷ್ಟೇ ತಾವು ತಿಳಿಸಿರುವವರಿಗೆ ನೀಡುವಂತೆ ಸೂಚಿಸಬೇಕು ಎಂದು ಈ ಟೂಲ್ಕಿಟ್ನಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ.