ಹಿರಿಯ ಸಚಿವರನ್ನು ಕಳೆದುಕೊಂಡ ಟಿಎಂಸಿ: ಕಾಂಗ್ರೆಸ್‌ ಮೂಲದ ಸಚಿವ ಸಾಧನ್‌ ಪಾಂಡೆ ನಿಧನ

sadhan
Published on

ಕೋಲ್ಕತಾ: ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ, ಪಶ್ಚಿಮ ಬಂಗಾಳದ ಗ್ರಾಹಕ ವ್ಯವಹಾರಗಳು ಮತ್ತು ಸ್ವ-ಸಹಾಯ ಗುಂಪು ಮತ್ತು ಸ್ವ-ಉದ್ಯೋಗ ಇಲಾಖೆ ಸಚಿವ ಸಾಧನ್​ ಪಾಂಡೆ ಮೃತಪಟ್ಟಿದ್ದಾರೆ. ಇವರಿಗೆ 71 ವರ್ಷ ವಯಸ್ಸಾಗಿತ್ತು.

ಇವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. 2021ರ ಜುಲೈನಲ್ಲಿಯೇ ಅವರ ಆರೋಗ್ಯ ಹದಗೆಟ್ಟಿತ್ತು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿಂದ ಮುಂಬೈಗೆ ಉತ್ತಮ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಸಾಧನೆ ಪಾಂಡೆ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ನಮ್ಮ ಹಿರಿಯ ಸಹೋದ್ಯೋಗಿ, ಪಕ್ಷದ ನಾಯಕರು, ಸಚಿವರಾಗಿದ್ದ ಸಾಧನ್​ ಪಾಂಡೆ ಇಂದು ಮುಂಜಾನೆ ನಿಧನರಾದರು. ಅವರ ನಿಧನದಿಂದ ತುಂಬ ನಷ್ಟವಾಗಿದೆ. ಅವರ ಕುಟುಂಬ, ಸ್ನೇಹಿತರು, ಅನುಯಾಯಿಗಳಿಗೆ ನನ್ನ ಸಾಂತ್ವನಗಳು ಎಂದು ಹೇಳಿದ್ದಾರೆ.

1998ರವರೆಗೆ ಕಾಂಗ್ರೆಸ್​​ನಲ್ಲಿದ್ದ ಸಾಧನ್​ ಪಾಂಡೆ 1998ರ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಟಿಎಂಸಿ ಸೇರ್ಪಡೆಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net