ಇದು ಸಾವಿನ ಸಂದೇಶ ಹುಷಾರ್‌! ಶಿಕ್ಷಕನ ಮನೆಗೆ ಬಂದ ಪಾರ್ಸೆಲ್‌ನಲ್ಲಿ ಬುಲೆಟ್‌ಗಳ ಜತೆಗೆ ಬೆದರಿಕೆ

parcel
ಸಾಂದರ್ಭಿಕ ಚಿತ್ರ
Published on

ದಹಿಸರ್‌ (ಮುಂಬೈ): 'ಯೇ ಮೌತ್ ಕಾ ಪೈಗಾಮ್ ಹೈ (ಇದು ಸಾವಿನ ಸಂದೇಶ)' ಎಂದು ಬರೆದಿರುವ ಪಾರ್ಸೆಲ್‌ ಒಂದು ಇಲ್ಲಿಯ ಶಿಕ್ಷಕನ ಮನೆ ಬಾಗಿಲಿಗೆ ಬಂದಿದೆ. ಈ ಪಾರ್ಸೆಲ್‌ ಒಳಗೆ ಎರಡು 7.66 ಎಂಎಂ ಬುಲೆಟ್‌ಗಳನ್ನು ಇಡಲಾಗಿದ್ದು, ಸಾವಿನ ಎಚ್ಚರಿಕೆ ನೀಡಲಾಗಿದೆ.

ಮುಂಬೈ ದಹಿಸರ್‌ನ ಜಿಲ್ಲಾ ಪರಿಷತ್ ಶಾಲೆಯಲ್ಲಿ ಉದ್ಯೋಗದಲ್ಲಿರುವ ಶಿಕ್ಷಕನಿಗೆ ಈ ಕೊಲೆ ಬೆದರಿಕೆ ಬಂದಿದೆ. ಅದರಲ್ಲಿ ಕಳುಹಿಸಿರುವ ವ್ಯಕ್ತಿಗಳ ಹೆಸರು, ವಿಳಾಸ ಏನೂ ಇಲ್ಲ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಶಿಕ್ಷಕ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಂಥ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬ. ತಮ್ಮ ವಿರುದ್ಧ ವಿನಾಕಾರಣ ದೂರು ದಾಖಲು ಮಾಡಲಾಗಿದೆ ಎನ್ನುವುದು ಶಿಕ್ಷಕನ ಆರೋಪವಾಗಿತ್ತು. ಈಗ ಅದೇ ದೂರು ದಾಖಲು ಮಾಡಿರುವ ವ್ಯಕ್ತಿಯೇ ಈ ಬೆದರಿಕೆ ಪತ್ರ ಮತ್ತು ಸಂದೇಶ ಕಳುಹಿಸಿರುವುದಾಗಿ ಶಿಕ್ಷಕ ಹೇಳಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಬಯಲಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net