ಶುರುವಾಗಿದೆ 5 ಅಂತಸ್ತಿನ ವಯಸ್ಕರ ಥೀಮ್​ಪಾರ್ಕ್​- ಪೋರ್ನ್​ ಸ್ಟಾರ್​ಗಳಿಂದಲೇ ಸೇವೆ!

themepark
Published on

ಟೊಕಿಟೊ: ವಯಸ್ಕರ ಚಲನಚಿತ್ರದಂತೆ ವಯಸ್ಕರಿಗಾಗಿಯೇ ಥೀಮ್​ ಪಾರ್ಕ್​​ ಒಂದು ಇಲ್ಲಿ ಶುರುವಾಗಿದೆ. ಐದು ಅಂತಸ್ತಿನ ಈ ಥೀಮ್​ ಪಾರ್ಕ್​ನಲ್ಲಿ ಕೇವಲ ವಯಸ್ಕರಿಗಷ್ಟೇ ಪ್ರವೇಶ. ಇದರ ವಿಶೇಷತೆ ಎಂದರೆ ಇಲ್ಲಿ ಬರುವ ಗ್ರಾಹಕರಿಗೆ ಪರಿಚಾಲಕಿಯರಾಗಿ ಕೆಲಸ ಮಾಡುವವರು ನಿಜ ಜೀವನದ ಪೋರ್ನ್​ ಸ್ಟಾರ್​ಗಳು!

ಅಷ್ಟಕ್ಕೂ ಇಂಥದ್ದೊಂದು ವಿಚಿತ್ರ ಥೀಮ್​ಪಾರ್ಕ್​ ಶುರುವಾಗಿರುವುದು ಜಪಾನ್​ನ ಟೊಕಿಯೋದಲ್ಲಿ. ಜಪಾನ್‌ನ ವಯಸ್ಕ ಚಲನಚಿತ್ರ ಕಂಪೆನಿಯು ಟೋಕಿಯೊದ ರೆಡ್-ಲೈಟ್ ಏರಿಯಾದಲ್ಲಿ ಐದು ಅಂತಸ್ತಿನ ‘ವಯಸ್ಕರಿಗೆ ಮಾತ್ರ’ ಥೀಮ್ ಪಾರ್ಕ್ ಅನ್ನು ತೆರೆದಿದೆ. ಪೋರ್ನ್​ ಸ್ಟಾರ್​ಗಳು ಇಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತಾರೆ.

ಎಸ್‌ಒಡಿ ಲ್ಯಾಂಡ್ ಎಂದು ಕರೆಯಲ್ಪಡುವ ಜಪಾನಿನ ವಯಸ್ಕ ಚಲನಚಿತ್ರ ನಿರ್ಮಾಪಕ ಸಾಫ್ಟ್ ಆನ್ ಡಿಮ್ಯಾಂಡ್ (ಎಸ್‌ಒಡಿ) ಥೀಮ್ ಪಾರ್ಕ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನು "ವಯಸ್ಕರಿಗೆ ಅಮ್ಯೂಸ್‌ಮೆಂಟ್ ಪಾರ್ಕ್" ಎಂದು ಅವರು ಹೇಳಿದ್ದಾರೆ.

ಈ ಥೀಮ್​ ಪಾರ್ಕ್​ನಲ್ಲಿ ಆಲ್ಕೋಹಾಲ್, ಆಹಾರ ನೀಡಲಾಗುತ್ತದೆ. ವಯಸ್ಕರ ವೀಡಿಯೊಗಳನ್ನು ಮಾರಾಟ ಮಾಡುತ್ತದೆ ಮಾತ್ರವಲ್ಲದೇ ಬರುವವರಿಗೆ ಪೋರ್ನ್​ಸ್ಟಾರ್​ಗಳ ಜತೆ ಚಾಟ್ ಮಾಡಲು ಅವಕಾಶ ನೀಡಲಾಗುತ್ತದೆ.

ಅಂದಹಾಗೆ ಇಲ್ಲಿ ಪ್ರವೇಶ ಬೇಕೆಂದರೆ 500 ಯೆನ್​ ಎಂದರೆ ಸುಮಾರು 352 ರೂಪಾಯಿ ಪಾವತಿಸಬೇಕು. ಇಷ್ಟೆ ಎಂದು ಕೇಳಬೇಡಿ. ಇದು ಕೇವಲ ಒಬ್ಬರಿಗೆ ಪ್ರವೇಶಕ್ಕೆ ಮಾತ್ರ. ಅನಂತರ ಒಳಗೆ ಹೋದ ಮೇಲೆ ವಿವಿಧ ಸೇವೆಗಳಿಗೆ ಪ್ರತ್ಯೇಕವಾಗಿ ಶುಲ್ಕ ಕೊಡಬೇಕು!

ಥೀಮ್​ಪಾರ್ಕ್​ನಲ್ಲಿ ಇರುವ ಐದು ಮಹಡಿಯೂ ಒಂದೊಂದು ವಿಶೇಷಗಳ ಆಗರ ಎಂದಿರುವ ಆನ್ ಡಿಮ್ಯಾಂಡ್, ಇದಕ್ಕೆ ಉದಾಹರಣೆಯನ್ನೂ ಕೊಟ್ಟಿದ್ದಾರೆ. ನೆಲಮಾಳಿಗೆಯಲ್ಲಿ ಹೊಸದಾಗಿ ವಯಸ್ಕ ಚಿತ್ರಕ್ಕೆ ಬರುವ ಸ್ಟಾರ್​ಗಳು ಸೇವೆ ಒದಗಿಸುತ್ತಾರೆ. ಆದ್ದರಿಂದ ಇದಕ್ಕೆ ನ್ಯೂ ಕಮರ್​ ಅಡಲ್ಟ್​ ಫಿಲ್ಮ್​ ಆಕ್ಟ್ರೆಸ್​ ಫ್ಲೋರ್​ ಎಂದು ಹೆಸರು ಇರಿಸಲಾಗಿದೆ. ಹೀಗೆ ಒಂದೊಂದು ಮಹಡಿಯಲ್ಲಿಯೂ ಒಂದೊಂದು ವಿಶೇಷತೆ ಇದೆ ಎಂದು ಹೇಳಿದ್ದಾರೆ. ತಮಗೆ ಬೇಕಾದ ತಾರೆಯರಿಂದ ಮಸಾಜ್​ ಮಾಡಿಕೊಳ್ಳಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆಯಂತೆ.

ಅಂದಹಾಗೆ, ಕರೊನಾದ ಈ ಸಮಯದಲ್ಲಿ ತೆರೆದಿರುವ ಈ ಥೀಮ್​ಪಾರ್ಕ್​ನಲ್ಲಿ ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಕರೊನಾ ನಿಯಮ ಪಾಲಿಸಲಾಗುತ್ತದೆ ಎಂದು ಅವರು ಘೋಷಿಸಿದ್ದಾರೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net