More

    ಸಿಎಂ ಪಟ್ಟ ಹೋದ್ಮೇಲೆ ಹುಚ್ಚನಂತೆ ಅಲೀತಿದ್ದಾರೆ… ಅವ್ರ ತಾಯಿ, ಸಹೋದರಿ ಐಟಂಗಳಿರಬೇಕು..

    ಭೋಪಾಲ್ (ಮಧ್ಯಪ್ರದೇಶ): ಬಿಜೆಪಿಗೆ ಸೇರ್ಪಡೆಯಾಗಿರುವ ಮಧ್ಯಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ʼಐಟಂʼಎಂದು ಕರೆದಿರುವ ವಿವಾದವೀಗ ತಾರಕಕ್ಕೇರಿದೆ.

    ಕಾಂಗ್ರೆಸ್​ನಿಂದ ಗ್ವಾಲಿಯರ್​ನ ಡಾಬ್ರಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಇಮರ್ತಿ ದೇವಿ ಸದ್ಯ ಶಿವರಾಜ್‌ ಸಿಂಗ್‌ ಚೌಹಾಣ್‌ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿದ್ದಾರೆ. ಈಗ ಹಾಲಿ ಕ್ಷೇತ್ರದಿಂದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ ಕಮಲ್​ನಾಥ್​ ಇಮರ್ತಿ ದೇವಿಯವರನ್ನು ಐಟಂ ಎಂದು ಕರೆದಿದ್ದರು.

    ನಂತರ ಈ ಬಗ್ಗೆ ಪಕ್ಷದಲ್ಲಿಯೇ ತೀವ್ರ ಅಸಮಾಧಾನ ಉಂಟಾಗಿತ್ತು. ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರು ಈ ಹೇಳಿಕೆಯನ್ನು ಖಂಡಿಸಿದ್ದರು. ಆದರೆ ಕಮಲ್‌ನಾಥ್‌ ಮಾತ್ರ ತಾವು ಯಾವ ತಪ್ಪೂ ಮಾಡಿಲ್ಲ. ಐಟಂ ಎಂದು ಕರೆದರೆ ಅದು ತಪ್ಪಲ್ಲ ಎಂದು ಸಮರ್ಥನೆ ಮಾಡಿಕೊಂಡೇ ಬಂದಿದ್ದಾರೆ.

    ಇದೀಗ ಇಮರ್ತಿಯವರು ಕಮಲ್‌ನಾಥ್‌ ವಿರುದ್ಧ ಭಾರಿ ಕಿಡಿಕಾರಿದ್ದು, ಮಾಧ್ಯಮಗಳಿಗೆ ಅವರು ನೀಡಿರುವ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಅವರು ಏನು ಹೇಳಿದ್ದಾರೆಂದು ಈ ವಿಡಿಯೋದಲ್ಲಿ ಕೇಳಿ…

    ಇಮರ್ತಿದೇವಿಯವರು ಹೇಳಿರುವುದಿಷ್ಟು..
    ಕಮಲ್‌ನಾಥ್‌ ಬಂಗಾಳದವರು. ಮುಖ್ಯಮಂತ್ರಿಯಾಗಲು ಮಧ್ಯಪ್ರದೇಶಕ್ಕೆ ಬಂದಿದ್ದರು. ಹೇಗೆ ಮಾತನಾಡಬೇಕು ಎಂಬ ಸಭ್ಯತೆ ಇಲ್ಲದ ವ್ಯಕ್ತಿ. ಅವರ ಬಗ್ಗೆ ಇನ್ನೇನು ಹೇಳುವುದು? ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿದ ಬಳಿಕ ಹುಚ್ಚನಂತಾಗಿದ್ದಾರೆ. ಮಧ್ಯಪ್ರದೇಶದ ತುಂಬಾ ಓಡಾಡುತ್ತಿದ್ದಾರೆ. ಹುಚ್ಚನಾಗಿದ್ದರಿಂದ ಏನು ಬೇಕಾದರೂ ಹೇಳಬಹುದು. ಅವರ ತಾಯಿ ಮತ್ತು ಸಹೋದರಿ ಬಂಗಾಳದ ಐಟಂ ಆಗಿರಬಹುದೇನೋ, ನನಗೆ ಗೊತ್ತಿಲ್ಲ.

    ಇಮರ್ತಿ ದೇವಿ ಹಾಗೂ ಕಮಲ್​ ನಾಥ್​ ನಡುವೆ ಹಳೇ ರಾಜಕೀಯ ದ್ವೇಷವಿದೆಯೆಂದೇ ಹೇಳಲಾಗುತ್ತಿದೆ. ಇಮರ್ತಿದೇವಿ ಈ ಹಿಂದೆ ಕಾಂಗ್ರೆಸ್​ನಲ್ಲಿದ್ದಾಗ ಕಮಲ್​​ನಾಥ್​ ವಿರುದ್ಧ ಲಂಚದ ಆರೋಪ ಮಾಡಿದ್ದರು. ಕಮಲ್​ ನಾಥ್​ ಮುಖ್ಯಮಂತ್ರಿಯಾಗಿದ್ದಾಗ ಅವರ ಮಂತ್ರಿಮಂಡಲದಲ್ಲಿ ಸೇರ್ಪಡೆಯಾಗದ ಶಾಸಕರಿಗೆ ಪ್ರತಿ ತಿಂಗಳು ಐದು ಲಕ್ಷ ರೂಪಾಯಿ ಹಣ ಕೊಡುತ್ತಾರೆ ಎಂದು ಆರೋಪಿಸಿದ್ದರು.

    ಇದಕ್ಕೆ ತಿರುಗೇಟು ನೀಡಿದ್ದ ಕಮಲ್​ನಾಥ್​ ಆಕೆ ತನ್ನ ತಪ್ಪುಗಳನ್ನು ಮುಚ್ಚಿಡಲು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇಮರ್ತಿ ದೇವಿಯೇ ಈ ಹಿಂದೆ ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇದೀಗ, ನನ್ನ ಮೇಲೆ ಆರೋಪ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದರು. ಇದೀಗ ಐಟಂ ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

    ವಿಶೇಷವೆಂದರೆ ಕಮಲ್​ನಾಥ್ ಸರ್ಕಾರದಲ್ಲಿ ಕೂಡ ಇಮರ್ತಿ ದೇವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿರ್ವಹಿಸುತ್ತಿದ್ದರು. ಏಳು ತಿಂಗಳ ಹಿಂದೆ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಜತೆ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಕಮಲ್ ನಾಥ್ ಸರ್ಕಾರ ಪತನಗೊಂಡಿತ್ತು.

    ಚಿನ್ನ ತಂದರಷ್ಟೇ ಸೀಮಂತ: ಲಕ್ಷ ಲಕ್ಷ ಕೊಟ್ಟರೂ ಮುಗಿಯದ ಧನದಾಹ- ಟೆಕ್ಕಿ‌ ಆತ್ಮಹತ್ಯೆ!

    ಆರ್​ಆರ್​ಆರ್ ಟೀಸರ್‌ ಬಿಡುಗಡೆ- ಮುಸ್ಲಿಂ ಏಕೆ ಎಂದ ಹಲವರು; ಸರಿಯಾಗಿ ನೋಡಿ ಎಂದರು ಕೆಲವರು!

    ಶೂಟ್‌ಔಟ್‌ ಪ್ರಕರಣ: ಪೊಲೀಸರ ವಶಕ್ಕೆ ಬಿಜೆಪಿ ಮುಖಂಡ- ಕೋರ್ಟ್‌ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts