

ನವದೆಹಲಿ: ವಿದ್ಯುತ್ ವೈಯರ್ ಹಿಡಿದು 'ಸ್ಪೈಡರ್ ಮ್ಯಾನ್' ಶೈಲಿಯಲ್ಲಿ ಗೋಡೆ ಹತ್ತಿದ ಖತರ್ನಾಕ್ ಖದೀಮನೊಬ್ಬ ಮನೆಯನ್ನು ದರೋಡೆ ಮಾಡಿಕೊಂಡು ಹೋಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇದರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮೇ.31ರ ನಡುರಾತ್ರಿ ಖಜುರಿ ಖಾಸ್ ಏರಿಯಾದ ಸುರೇಂದರ್ ಸಿಂಗ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಚಿನ್ನದ ಸರ, ಉಂಗುರ, ಮೊಬೈಲ್ ಎಗರಿಸಿ ಕಳ್ಳ ಪರಾರಿಯಾಗಿದ್ದಾನೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ಎಲ್ಲೆಡೆ ವೈರಲ್ ಆಗಿದೆ.
ನಡುರಾತ್ರಿ ಎರಡೂಕಾಲು ಗಂಟೆ ಸುಮಾರಿಗೆ ಮನೆಯ ಗೇಟ್ ಮೂಲಕ ನುಸುಳಿದ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಈ ಕುರಿತು ಮಾತನಾಡಿರುವ ಸುರೇಂದರ್ ಸಿಂಗ್ ಅವರು, "ಮನೆಯಲ್ಲಿ 8 ಮಂದಿ ಇದ್ದೆವು. ಬೀರುವಿನ ಬೀಗ ಹಾಕಿರಲಿಲ್ಲ. ಕಳ್ಳ ಬಂದು ಚಿನ್ನದ ಸರ, ಉಂಗುರ, ಮೊಬೈಲ್ ಕಳ್ಳತನ ಮಾಡಿದ್ದಾನೆ. ಆ ರಾತ್ರಿ ನನ್ನ ತಾಯಿ ಕಳ್ಳನನ್ನು ನೋಡಿ ಕೂಗಿಕೊಂಡಿದ್ದಾರೆ. ಕೂಡಲೇ ಕಳ್ಳ ಪರಾರಿಯಾಗಿದ್ದಾನೆ. ನಾವು ತಕ್ಷಣ ಪೊಲೀಸರಿಗೆ ಮಾಹಿತಿ ಕೊಟ್ಟೆವು ಎಂದಿದ್ದಾರೆ.
ಸಿಸಿಟಿವಿಯನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ