

ತೆಲಂಗಾಣ: ಕರೊನಾ ವೈರಸ್ ನಿಮಿತ್ತ ದೇಶಾದ್ಯಂತ ಜಾರಿಗೆ ಮಾಡಲಾಗಿದ್ದ ಲಾಕ್ಡೌನ್ ಆರಂಭವಾದ ದಿನದಿಂದಲೂ ಕೇಳಿಬರುತ್ತಿರುವ ಕೆಲವೇ ಕೆಲವು ಹೆಸರುಗಳ ಪೈಕಿ ಬಾಲಿವುಡ್ ನಟ ಸೋನು ಸೂದ್ ಕೂಡ ಒಬ್ಬರು.
ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗುವುದರಿಂದ ಆರಂಭವಾದ ಅವರ ಪಯಣ, ಕರೊನಾ ವೈರಸ್ನಿಂದ ಕಂಗೆಟ್ಟು ಹೋದವರಿಗೆ ಹಲವಾರು ರೀತಿಯಲ್ಲಿ ನೆರವಾಗುವುದರಿಂದ ಹಿಡಿದು, ಯಾರಾದರೂ ಕಷ್ಟದಲ್ಲಿ ಇದ್ದಾಗ ಅವರಿಗೆ ಕೈಲಾದ ಸಹಾಯ ಮಾಡಲು ಧಾವಿಸುವ ಮೂಲಕ ಇದೀಗ ಮನೆಮಾತಾಗಿದ್ದಾರೆ ಈ 42 ವರ್ಷದ ನಟ.
ಈಗಾಗಲೇ ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡಿ ಮಾನವೀಯತೆ ಮೆರೆದು, ಮಾಧ್ಯಮಗಳಲ್ಲಿ ಸದಾ ಸುದ್ದಿ ಮಾಡುತ್ತಲೇ ಇರುವ ಈ ನಟನಿಗೆ ಇದೀಗ ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ಇವರ ಇಂಥ ಶ್ಲಾಘನಾರ್ಹ ಕಾರ್ಯದಿಂದ ತೆಲಂಗಾಣದ ದುಬ್ಬಾ ತಾಂಡಾ ಗ್ರಾಮಸ್ಥರು ಅದೆಷ್ಟು ರೀತಿಯಲ್ಲಿ ಖುಷಿಯಾಗಿದ್ದಾರೆಂದರೆ, ತೆಲಂಗಾಣದ ಸಿದ್ದಿಪೇಟೆ ಜಿಲ್ಲಾ ಅಧಿಕಾರಿಗಳ ಸಹಾಯದಿಂದ ಸೋನು ಸೂದ್ ಅವರನ್ನು ದೇವರೆಂದು ಪರಿಗಣಿಸುತ್ತಿರುವುದು ಮಾತ್ರವಲ್ಲದೇ ಅವರಿಗಾಗಿ ಒಂದು ಆಲಯವನ್ನೇ ತೆರೆದಿದ್ದಾರೆ. ಇದು ನಮ್ಮ ದೇವಾಲಯ, ಇಲ್ಲಿರುವ ದೇವರು ಸೋನು ಸೂದ್ ಎನ್ನುತ್ತಿರುವ ಸ್ಥಳೀಯರು, ಅವರ ಮೂರ್ತಿಯನ್ನು ಇಟ್ಟು ದಿನವೂ ಪೂಜಿಸುತ್ತಿದ್ದಾರೆ.
ಹ್ಯಾಪಿ ನ್ಯೂ ಇಯರ್ ನಕ್ಷತ್ರದ ವಿಗ್ರಹವನ್ನು ಹೊಂದಿರುವ ದೇವಾಲಯವನ್ನು ಭಾನುವಾರ ಶಿಲ್ಪಿ ಮತ್ತು ಸ್ಥಳೀಯ ಜನರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಆರತಿ ಪ್ರದರ್ಶನವೂ ನಡೆಯಿತು. ಈ ಸಂದರ್ಭದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಪನ್ನು ಧರಿಸಿ ಜಾನಪದ ಗೀತೆಗಳನ್ನು ಹಾಡಿದರು.
ದೇಶದ 28 ರಾಜ್ಯಗಳ ಜನರಿಗೆ ಇವರು ದೇವರಂತೆ ಬಂದು ಮಾಡಿರುವ ಸಹಾಯವನ್ನು ನೋಡಿ ನಾವು ಈ ದೇವಾಲಯ ಕಟ್ಟಿದ್ದೇವೆ ಎನ್ನುತ್ತಾರೆ ರಮೇಶ್ಕುಮಾರ್.
ಇವರ ಸೇವಾಕಾರ್ಯ ಭಾರತ ಮಾತ್ರವಲ್ಲದೇ ಪ್ರಪಂಚದ ಗಮನವನ್ನೂ ಸೆಳೆದಿದೆ. ವಿಶ್ವಸಂಸ್ಥೆಯಿಂದ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ. ಇಂಥ ದೇವರಿಗಾಗಿ ಈ ಆಲಯ ಎನ್ನುತ್ತಾರೆ ಗ್ರಾಮಸ್ಥರು. ಶಿಲ್ಪಿ ಮಧುಸೂದನ್ ಪಾಲ್ ಸೋನು ಅವರ ವಿಗ್ರಹ ಕೆತ್ತಿದ್ದಾರೆ.