ತಮಿಳುನಾಡಿನ ಅರವಕುರಿಚಿ ಕ್ಷೇತ್ರದಲ್ಲಿ ಕ್ಷಣಕ್ಷಣಕ್ಕೂ ಕುತೂಹಲ: ಅಣ್ಣಾಮಲೈ- ಎಲಂಗೋ ನಡುವೆ ಬಿಗ್‌ ಫೈಟ್‌

annamalai
Published on

ಅರವಕುರಿಚಿ (ತಮಿಳುನಾಡು): ಕರ್ನಾಟಕದ ಸಿಂಗಂ ಎಂದೇ ಪ್ರಖ್ಯಾತಿ ಪಡೆದಿದ್ದ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಸ್ಪರ್ಧಿಸಿರುವ ಅರವಕುರಿಚಿ ಕ್ಷೇತ್ರದಲ್ಲಿ ಕ್ಷಣಕ್ಷಣಕ್ಕೂ ಕುತೂಹಲ ಮನೆ ಮಾಡಿದೆ.

ತಮ್ಮ ಹುದ್ದೆ ರಾಜೀನಾಮೆ ನೀಡಿದ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಅಣ್ಣಾಮಲೈ ಅವರನ್ನು ಅವರದ್ದೇ ಸ್ವಕ್ಷೇತ್ರವಾಗಿರುವ ಅರವಕುರಿಚಿಯಿಂದ ಕಣಕ್ಕೆ ಇಳಿಸಿದೆ. ಇದು ಅವರ ರಾಜಕೀಯ ಪಯಣದ ಆರಂಭಿಕ ಚುನಾವಣೆ.

ಈ ಚುನಾವಣೆಯಲ್ಲಿ ಇದುವರೆಗೆ ನಡೆದಿರುವ ಫಲಿತಾಂಶದಲ್ಲಿ ಅಣ್ಣಾಮಲೈ ಅವರು ಮುನ್ನಡೆ ಸಾಧಿಸಿದ್ದಾರೆ. ಮೊದಲ ಎರಡು ಹಂತದ ಮತ ಎಣಿಕೆಯಲ್ಲಿ ಅವರಿಗೆ ಆಘಾತವಾಗಿತ್ತು. ಏಕೆಂದರೆ ಮೊದಲು ಅಣ್ಣಾಮಲೈ ಹಿನ್ನಡೆ ಅನುಭವಿಸಿದ್ದರೆ, ಡಿಎಂಕೆಯ ಮೊಂಜಾನೂರ್‌ ಎಲಂಗೋ ಅವರು ಮುನ್ನಡೆ ಸಾಧಿಸಿದ್ದರು.

ಆದರೆ ಇದೀಗ ಮೂರನೆಯ ಹಂತದ ಮತ ಎಣಿಕೆ ಕಾರ್ಯ ಮುಗಿದಿದ್ದು, ಈ ಹಂತದಲ್ಲಿ ಡಿಎಂಕೆಯ ಎಲಂಗೋ ಅವರು 2,995 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಅಣ್ಣಾಮಲೈ ಅವರು 3.034 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಇಬ್ಬರ ನಡುವೆ ಅಂತರ ಕಡಿಮೆ ಎದ್ದು ಕೊನೆಯ ಕ್ಷಣದವರೆಗೂ ಏನಾಗುವುದೋ ಎಂಬ ಕುತೂಹಲವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net