More

    ತಮಿಳುನಾಡು ಫೈಟ್‌: ಕೊಳತ್ತೂರಿನಲ್ಲಿ ಸ್ಟಾಲಿನ್‌ ಮುನ್ನಡೆ, ಕೊಯಮತ್ತೂರಿನಲ್ಲಿ ಕಮಲ್‌ ಹಾಸನ್‌ ಹಿನ್ನಡೆ

    ಚೆನ್ನೈ: ತಮಿಳುನಾಡಿನ 234 ವಿಧಾನಸಭಾಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಎರಡನೆಯ ಸುತ್ತಿನ ಮತ ಎಣಿಕೆ ಮುಗಿದಿದೆ.

    ಈ ಸಂದರ್ಭದಲ್ಲಿ ಬಹು ಕುತೂಹಲ ಕೆರಳಿಸಿರುವ ಕೊಳತ್ತೂರಿನಲ್ಲಿ ಸ್ಟಾಲಿನ್‌ ಮುನ್ನಡೆ ಸಾಧಿಸಿದ್ದಾರೆ. ಕೊಯಮತ್ತೂರಿನಲ್ಲಿ ಕಮಲ ಹಾಸನ್‌ಗೆ ತೀವ್ರ ಹಿನ್ನಡೆಯಾಗಿದ್ದು, ಕಾಂಗ್ರೆಸ್‌ನ ಮಯೂರ್‌ ಜಯಕುಮಾರ್‌ ಮುನ್ನಡೆಯಲ್ಲಿದ್ದಾರೆ.

    ತಮಿಳುನಾಡಿನ ಅನಭಿಷಿಕ್ತ ದೊರೆಗಳು ಎಂದು ಎನಿಸಿಕೊಂಡಿದ್ದ ಎರಡು ಬಲಾಢ್ಯ ಸ್ಥಳೀಯ ಪಕ್ಷಗಳನ್ನು ಕಟ್ಟಿ ಬೆಳೆಸಿದ ಎಂ ಕರುಣಾನಿಧಿ ಮತ್ತು ಜೆ ಜಯಲಲಿತಾ ಇಬ್ಬರೂ ಇಲ್ಲ. ಆದ್ದರಿಂದ ಜನತೆ ಈ ಬಾರಿ ಇಬ್ಬರು ಖ್ಯಾತ ನಾಯಕರಾದ ಎಂ. ಕೆ ಸ್ಟಾಲಿನ್ ಮತ್ತು ಎಡಪ್ಪಡಿ ಕೆ ಪಳನಿಸ್ವಾಮಿ ಅವರ ಮಧ್ಯೆ ಆಯ್ಕೆ ಮಾಡುವುದು ಅನಿವಾರ್ಯವಾಗಿದೆ. ಇವರಿಗೆ ಸ್ಪರ್ಧೆಯೊಡ್ಡಲು ನಟ ಕಮಲ್ ಹಾಸನ್, ಟಿಟಿವಿ ದಿನಕರನ್ ಮತ್ತು ಸೀಮನ್ ಚುನಾವಣಾ ಕಣಕ್ಕಿಳಿದಿದ್ದು, ಇಂದು ಎಲ್ಲರ ಭವಿಷ್ಯ ನಿರ್ಧಾರವಾಗಲಿದೆ.

    ತಮಿಳುನಾಡಿನಲ್ಲಿ ಡಿಎಂಕೆಯ ಎದುರು ಆಡಳಿತಾರೂಢ ಎಐಎಡಿಎಂಕೆ ಪರಾಭವಗೊಳ್ಳಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿವೆ.

    ಬಸವಕಲ್ಯಾಣ ಕ್ಷೇತ್ರದ ಮತ ಎಣಿಕೆ: 4ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

    ಮತಎಣಿಕೆ ಕೇಂದ್ರದಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಪಶ್ಚಿಮ ಬಂಗಾಳದ ಕಾಂಗ್ರೆಸ್​ ಏಜೆಂಟ್​!

    ಅತ್ತ ಪಂಚರಾಜ್ಯ, ಇತ್ತ ಕರ್ನಾಟಕ… ಮತ ಎಣಿಕೆಗೆ ಕೆಲವೇ ಗಂಟೆ… ಏನಾಗಲಿದೆ ಸಮೀಕ್ಷೆ? ಎದೆಯಲ್ಲಿ ಢವಢವ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts