

ಬೀದರ್: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಬೀದರ್ನ ಬಿವಿಬಿ ಕಾಲೇಜಿನಲ್ಲಿ ನಡೆಯುತ್ತಿದೆ. ಇಂದು(ಭಾನುವಾರ) ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಿದ್ದು, ಮೊದಲ ಮೂರು ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಸವಕಲ್ಯಾಣದಲ್ಲಿ ಶೇ.61.49 ಮತದಾನವಾಗಿತ್ತು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ದಿ. ಬಿ.ನಾರಾಯಣರಾವ್ರ ಪತ್ನಿ ಮಾಲಾ(ಮಲ್ಲಮ್ಮ), ಬಿಜೆಪಿಯಿಂದ ಶರಣು ಸಲಗಾರ ಅಖಾಡಕ್ಕೆ ಧುಮುಕಿದ್ದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಜೆಡಿಎಸ್ನಿಂದ ಸೈಯದ್ ಅಲಿ ಖಾದ್ರಿ ಸ್ಪರ್ಧಿಸಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಹಣಾಹಣಿ ಇದೆ.
ಮೊದಲನೇ ಸುತ್ತು
ಬಿಜೆಪಿ- 4215 ಮತ
ಕಾಂಗ್ರೆಸ್- 1576 ಮತ
ಜೆಡಿಎಸ್- 254
ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 290
ಬಿಜೆಪಿಗೆ 2639 ಮಗತಳ ಮುನ್ನಡೆ
ಎರಡನೇ ಸುತ್ತು
ಬಿಜೆಪಿ- 6440 ಮತ
ಕಾಂಗ್ರೆಸ್ 3188 ಮತ
ಜೆಡಿಎಸ್-549
ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 618
ಬಿಜೆಪಿಗೆ 3252 ಮತಗಳ ಮುನ್ನಡೆ
ಮೂರನೇ ಸುತ್ತು
ಬಿಜೆಪಿ- 9282
ಕಾಂಗ್ರೆಸ್- 4848
ಜೆಡಿಎಸ್- 808
ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 1038
ಬಿಜೆಪಿಗೆ 5034 ಮತಗಳ ಮುನ್ನಡೆ
ನಾಲ್ಕನೇ ಸುತ್ತು
ಬಿಜೆಪಿ- 12023
ಕಾಂಗ್ರೆಸ್- 6291
ಜೆಡಿಎಸ್- 1047
ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 1491
ಬಿಜೆಪಿಗೆ 5732 ಮತಗಳ ಮುನ್ನಡೆ