ಮಸ್ಕಿ ಕ್ಷೇತ್ರದ ಉಪ ಚುನಾವಣೆ: 5ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್​

WhatsApp Image 2021-05-02 at 12.13.32 AM
Published on

ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ರಾಯಚೂರಿನ ಎಸ್​ಆರ್​ಪಿಎಸ್​ ಪಿಯು ಕಾಲೇಜಿನಲ್ಲಿ ಇಂದು ಬೆಳಗ್ಗೆ 8ಕ್ಕೆ ಆರಂಭವಾಗಿದ್ದು, ಬೆಳಗ್ಗೆ 9.30ರ ವೇಳೆಗೆ 5 ಸುತ್ತಿನ ಮತ ಎಣಿಕೆ ನಡೆದಿದೆ. ಈ ಐದು ಸುತ್ತಿನಲ್ಲೂ ಕಾಂಗ್ರೆಸ್​ ಅಭ್ಯರ್ಥಿ ಬಸನಗೌಡ ಪಾಟೀಲ್ ತುರ್ವಿಹಾಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆರಂಭದಲ್ಲೇ ಬಿಜೆಪಿ ಪ್ರತಾಪಗೌಡ ಪಾಟೀಲ್ ಹಿನ್ನಡೆ ಕಂಡಿದ್ದಾರೆ.

1ನೇ ಸುತ್ತು

ಕಾಂಗ್ರೆಸ್ ಅಭ್ಯರ್ಥಿ- 3182 ಮತ

ಬಿಜೆಪಿ ಅಭ್ಯರ್ಥಿ- 2603 ಮತ

579 ಮತಗಳಿಂದ ಕಾಂಗ್ರೆಸ್ ಮುನ್ನಡೆ

2ನೇ ಸುತ್ತು

ಕಾಂಗ್ರೆಸ್ ಅಭ್ಯರ್ಥಿ- 6098

ಬಿಜೆಪಿ ಅಭ್ಯರ್ಥಿ-4846

1252 ಮತಗಳಿಂದ ಕಾಂಗ್ರೆಸ್​ ಮುನ್ನಡೆ

5ನೇ ಸುತ್ತು

ಕಾಂಗ್ರೆಸ್ ಅಭ್ಯರ್ಥಿ- 9748

ಬಿಜೆಪಿ ಅಭ್ಯರ್ಥಿ- 6890

2858 ಮತಗಳಿಂದ ಕಾಂಗ್ರೆಸ್​ ಮುನ್ನಡೆ

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯ ಬಿ.ವೈ.ವಿಜಯೇಂದ್ರ ನೇತೃತ್ವದ ತಂಡ ಮಸ್ಕಿ ಕ್ಷೇತ್ರದ ಉಸ್ತುವಾರಿ ಹೊತ್ತಿತ್ತು. ಕೆ.ಆರ್​.ಪೇಟೆ ಹಾಗೂ ಶಿರಾ ಕ್ಷೇತ್ರಗಳ ತಂತ್ರಗಾರಿಕೆಯನ್ನೇ ಈ ತಂಡ ಇಲ್ಲಿಯೂ ಪ್ರಯೋಗಿಸಿದೆ ಎಂದು ಹೇಳಲಾಗುತ್ತಿದ್ದು, ಅಭ್ಯರ್ಥಿಗಿಂತ ಹೆಚ್ಚಾಗಿ ಬಿವೈವಿಗೆ ಅಗ್ನಿ ಪರೀಕ್ಷೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net