More

    ಒಂದು ದಿನವೂ ಮಿಸ್​ ಮಾಡದೆ ಮೋದಿಗೆ ಪತ್ರ ಬರೆಯುವ ಮಹಿಳೆ! ಈವರೆಗೆ 264 ಪತ್ರ, ಕಾರಣ ಹೀಗಿದೆ…

    ಚೆನ್ನೈ: ದೇಶದಲ್ಲಿ ಜನರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿನ ಮಹಿಳೆಯೊಬ್ಬರು ಪ್ರಧಾನಿ ಮೋದಿ ಅವರಿಗೆ ಪ್ರತಿನಿತ್ಯ ಪತ್ರ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಕೊಯಮತ್ತೂರಿನ ಗಾಂಧಿ ನಗರ ನಿವಾಸಿ ಕೃತಿಕಾ ಎಂಬುವರು ಇದೀಗ ಒಂದು ತಿಂಗಳ ಗರ್ಭಿಣಿಯಾಗಿದ್ದಾರೆ. ಕಳೆದ ಮಾರ್ಚ್​ 8ರಂದು ಮಹಿಳಾ ದಿನದಂದು ಕೃತಿಕಾ ಅವರು ಮೊದಲ ಬಾರಿಗೆ ಪ್ರಧಾನಿ ಮೋದಿಗೆ ಪತ್ರವನ್ನು ಬರೆದರು. ತಮ್ಮ ಪತ್ರದಲ್ಲಿ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆ ಏರಿಕೆಯ ಬಗ್ಗೆ ಧ್ವನಿ ಎತ್ತಿ ಬೆಲೆ ಕಡಿಮೆ ಮಾಡುವಂತೆ ಒತ್ತಾಯಿಸಿದ್ದರು.

    ಇದಾದ ಬಳಿಕ ಎರಡನೇ ಬಾರಿ ಪತ್ರವನ್ನು ಬರೆದು ಮಹಿಳೆಯರಿಗೆ 33 ರಷ್ಟು ಮೀಸಲಾತಿಗೆ ಒತ್ತಾಯ ಮಾಡಿದ್ದರು. ಅದೇ ರೀತಿ ಆನ್​ಲೈನ್​ ರಮ್ಮಿ ನಿಷೇಧ, ತಮಿಳುನಾಡಿಗೆ ಹೆಚ್ಚು ನಿರ್ಭಯ ವ್ಯವಸ್ಥೆ ನೀಡುವುದು, ಬಿಎಸ್​ಎನ್​ಎಲ್​ 5ಜಿ ಸೇವೆ ಸ್ಥಾಪನೆ, ಚುನಾವಣೆಗಳಲ್ಲಿ ಬ್ಯಾಲೆಟ್​ ಪೇಪರ್​ ಮತದಾನ ಹಾಗೂ ಪ್ರಸ್ತುತ ನಡೆಯುತ್ತಿರುವ ಇಸ್ರೇಲ್​-ಗಾಜಾ ಯುದ್ಧ ಸೇರಿದಂತೆ ಇಲ್ಲಿಯವರೆಗೆ ಕೃತಿಕಾ ಪ್ರಧಾನಿ ಮೋದಿಗೆ 263 ಮೂರು ಬಾರಿ ಪತ್ರವನ್ನು ಬರೆದಿದ್ದಾರೆ. ನಿನ್ನೆಯಷ್ಟೇ ಕೃತಿಕಾ ಅವರು 264ನೇ ಪತ್ರವನ್ನು ಬರೆದು ಕಳುಹಿಸಿದ್ದಾರೆ.

    TN Woman

    ಪತ್ರದಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯಗಳನ್ನು ತಿಳಿಸಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿಯನ್ನೂ ಕಳುಹಿಸಿದ್ದಾರೆ. ಕೃತಿಕಾ ಅವರ ಪತ್ರಗಳನ್ನು ಪ್ರಧಾನಿ ಮೋದಿಯವರ ಕಚೇರಿಯೂ ಸಹ ಸ್ವೀಕರಿಸಿದ್ದು, ಪ್ರತಿದಿನ 10 ಗಂಟೆಗೆ ಪ್ರಧಾನಿ ಕಚೇರಿಯಿಂದ ಕರೆ ಬರುತ್ತಿದ್ದು, ಪತ್ರದ ಮೇಲಿನ ಚರ್ಚೆಯು ಸಹ ನಡೆಯುತ್ತಿದೆ. ಪತಿಯೂ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರುಗಳು ಈ ವಿಚಾರದಲ್ಲಿ ನನಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ಕೃತಿಕಾ ತಿಳಿಸಿದ್ದಾರೆ.

    ರಾಜಕೀಯ ಪಕ್ಷಗಳ ಬೇಡಿಕೆಯನ್ನೇ ನಾನೂ ಸಹ ಮುಂದಿಟ್ಟಿದ್ದು, ಆ ಬೇಡಿಕೆ ಈಡೇರಿದಾಗ ಅದರಲ್ಲಿ ನನ್ನ ಪಾಲೂ ಇದೆ ಎಂಬ ತೃಪ್ತಿ ನನಗಿದೆ. ಪೆರಿಯಾರ್, ಅಂಬೇಡ್ಕರ್, ಮಾರ್ಕಸ್ ಅವರಂತಹ ನಾಯಕರ ವಿಚಾರಧಾರೆಗಳನ್ನು ಓದಿ ಅರ್ಥ ಮಾಡಿಕೊಂಡಿರುವ ನಾನು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಪತ್ರ ವ್ಯವಹಾರವನ್ನು ದಿನದಿಂದ ದಿನಕ್ಕೆ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದು ಕೃತಿಕಾ ತಿಳಿಸಿದ್ದಾರೆ. (ಏಜೆನ್ಸೀಸ್​)

    ಮುಂಬೈ ಇಂಡಿಯನ್ಸ್​ ತಂಡಕ್ಕೆ ವಾಪಸ್: ಹಾರ್ದಿಕ್​ ಪಾಂಡ್ಯರ ಮೊದಲ ಪ್ರತಿಕ್ರಿಯೆ ಹೀಗಿದೆ…​

    ವಿದ್ಯಾರ್ಥಿಗೆ ಥಳಿಸಿ, ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ನಾಲ್ವರು ಅರೆಸ್ಟ್​

    ಯಾವುದೇ ಅಡೆತಡೆಯಿಲ್ಲದಿದ್ದರೆ 100 ಗಂಟೆಗಳಲ್ಲಿ ಸುರಂಗದಿಂದ ಹೊರಬರುತ್ತಾರೆ ಕಾರ್ಮಿಕರು; ಜವಾಬ್ದಾರಿ ವಹಿಸಿಕೊಂಡ ಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts