More

    ಯಾವುದೇ ಅಡೆತಡೆಯಿಲ್ಲದಿದ್ದರೆ 100 ಗಂಟೆಗಳಲ್ಲಿ ಸುರಂಗದಿಂದ ಹೊರಬರುತ್ತಾರೆ ಕಾರ್ಮಿಕರು; ಜವಾಬ್ದಾರಿ ವಹಿಸಿಕೊಂಡ ಸೇನೆ

    ಉತ್ತರಕಾಶಿ: ಇದೀಗ ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಹದಿನೈದು ದಿನಗಳಿಂದ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಸೇನೆಯು ಜವಾಬ್ದಾರಿ ವಹಿಸಿಕೊಂಡಿದೆ. ಸುರಂಗವನ್ನು ತಲುಪಲು ಲಂಬ ಕೊರೆಯುವಿಕೆ ಕೈಗೊಳ್ಳಲಾಗಿದ್ದು, ಈ ಮ್ಯಾನ್ಯುವಲ್ ಡ್ರಿಲ್ಲಿಂಗ್ ಕೆಲಸಕ್ಕೆ ಭಾರತೀಯ ಸೇನೆಯ ಇಂಜಿನಿಯರಿಂಗ್ ಕಾರ್ಪ್ಸ್ ಸಹಾಯ ಮಾಡುತ್ತದೆ. ಸೇನೆಯು ಸಿಲ್ಕ್ಯಾರಾವನ್ನು ತಲುಪಿದ್ದು, ಇದು ಇಲ್ಲಿ ಕೈಯಿಂದ ಕೊರೆಯುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ.  

    ನವೆಂಬರ್ 12 ರಿಂದ ಸಿಕ್ಕಿಬಿದ್ದ 41 ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸಿಲ್ಕ್ಯಾರಾ ಸುರಂಗದ ಹೊರಗಿನ ಸೋಮವಾರ ಬೆಳಗಿನ ದೃಶ್ಯದ ವಿಡಿಯೋ ಸಹ ಔಟ್ ಆಗಿದೆ. 

    ಅವಶೇಷಗಳಿಂದ ಕೂಡಿದ ಮಾರ್ಗದಲ್ಲಿ ಸಿಲುಕಿರುವ ಆಗರ್ ಯಂತ್ರದ ಮುರಿದ ಭಾಗಗಳನ್ನು ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿದ್ದು, ಕಾರ್ಮಿಕರು ಅವರನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. 

    ಲಂಬ ಕೊರೆಯುವಿಕೆಯ ಮೇಲೆ ಕೇಂದ್ರ
    ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಭಾನುವಾರ ಲಂಬ ಕೊರೆಯುವತ್ತ ಗಮನಹರಿಸಲಾಗಿದೆ. ಮೊದಲ ದಿನವಾದ ಭಾನುವಾರ 19.20 ಮೀಟರ್ ಭಾಗದಲ್ಲಿ ಕೊರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ಯಾವುದೇ ಅಡೆತಡೆಯಿಲ್ಲದಿದ್ದರೆ, ಈ ಮಾರ್ಗದ ಮೂಲಕ ಕಾರ್ಮಿಕರನ್ನು ತಲುಪಲು ಸುಮಾರು 100 ಗಂಟೆಗಳು ಬೇಕಾಗುತ್ತದೆ. 

    ಪ್ಲಾಸ್ಮಾ ಕಟರ್​​​​​​​ನಿಂದ ಕಟ್
    ಪ್ಲಾಸ್ಮಾ ಮತ್ತು ಲೇಸರ್ ಕಟರ್‌ಗಳಿಂದ ಕಟ್ ಮಾಡುವ ಮೂಲಕ ಅವಶೇಷಗಳಲ್ಲಿ ಸಿಲುಕಿರುವ ಆಗರ್ ಯಂತ್ರದ ಭಾಗಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಮುರಿದ ಭಾಗಗಳನ್ನು ತೆಗೆದ ನಂತರ, 15 ಮೀಟರ್​​​​​ಗಳಷ್ಟು ಉತ್ಖನನವನ್ನು ಕೈಯಾರೆ ಮಾಡಲಾಗುತ್ತದೆ. ಆದರೆ, ಇದು ಸಮಯ ತೆಗೆದುಕೊಳ್ಳಬಹುದು. ಮ್ಯಾನ್ಯುವಲ್ ಡ್ರಿಲ್ಲಿಂಗ್ ಕೊರೆತಕ್ಕಾಗಿ ಸೇನೆಯ ವಿಶೇಷ ತಂಡ ಉತ್ತರಕಾಶಿ ತಲುಪಿದೆ. ಸುರಂಗ ಮಾರ್ಗಕ್ಕೆ ನ್ಯಾನೊ ಜೆಸಿಬಿಯನ್ನೂ ರವಾನಿಸಲಾಗಿದೆ.   

    ಕುಟುಂಬಗಳಲ್ಲಿ ಹೆಚ್ಚಿದ ಅಶಾಂತಿ
    ಸಿಲ್ಕ್ಯಾರ ಸುರಂಗ ತೋಡುವ ಪ್ರಮುಖ ಸಾಧನವಾದ ಆಗರ್ ಯಂತ್ರ ಕೆಟ್ಟು ಹೋಗಿದ್ದು, ಈಗ ಕಾರ್ಮಿಕರನ್ನು ಹೊರತರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎಂಬ ಮಾಹಿತಿ ಸಿಕ್ಕಾಗ ಕಾರ್ಮಿಕರ ಕುಟುಂಬಸ್ಥರ ಆತಂಕ ಮತ್ತಷ್ಟು ಹೆಚ್ಚಿದೆ. ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರ ಪೈಕಿ ಆರು ಮಂದಿ ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಮೋತಿಪುರ್ ಕಲಾ ಗ್ರಾಮದ ನಿವಾಸಿಗಳಾಗಿದ್ದು, ಅವರೆಲ್ಲರೂ ಥಾರು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ.  

    ಉತ್ತರಕಾಶಿ ಸುರಂಗ ಕುಸಿತ: ಅಡೆತಡೆಗಳ ನಡುವೆ ಸಾಂಪ್ರದಾಯಿಕ ರೀತಿ ಕೊರೆಯಲು ನಿರ್ಧಾರ, ಸುತ್ತಿಗೆಯಂತಹ ಉಪಕರಣಗಳ ಬಳಕೆ

    ‘ಲೋಕ’ ಟಿಕೆಟ್​​​ಗೆ ಬಿಜೆಪಿ ಮಾಜಿ ಸಚಿವರಿಂದ ಲಾಬಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts