ಮುಂದುವರೆದಿದೆ ಚಿತ್ರತಾರೆಯರ ಆತ್ಮಹತ್ಯೆಯ ಸರಣಿ: ತಮಿಳು ನಟ ನೇಣಿಗೆ ಶರಣು!

indrakumar
Published on

ಚೆನ್ನೈ: ಸಿನಿತಾರೆಯರ ಆತ್ಮಹತ್ಯೆಯ ಪ್ರಕರಣ ಇನ್ನೂ ಮುಂದುವರೆದಿದೆ. ಇದೀಗ ತಮಿಳು ನಟ ಇಂದ್ರಕುಮಾರ್ ನಿನ್ನೆ ಮಧ್ಯರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಿನ್ನೆ ಸ್ನೇಹಿತನ ಮನೆಯಲ್ಲಿಯೇ ಉಳಿದುಕೊಂಡಿದ್ದ ಇಂದ್ರಕುಮಾರ್‌ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇದುವರೆಗೆ ತಿಳಿದುಬಂದಿಲ್ಲ.

ಅಚ್ಚರಿಯ ವಿಷಯ ಎಂದರೆ ಇಂದ್ರಕುಮಾರ್ ಸ್ನೇಹಿತರ ಜತೆ ಚಿತ್ರವೊಂದನ್ನು ವೀಕ್ಷಿಸಿ ಬಂದಿದ್ದಾರೆ. ಅಲ್ಲಿಯವರೆಗೆ ಆರಾಮಾಗಿಯೇ ಇದ್ದರು. ಅವರು ಸಾಯುತ್ತಾರೆ ಎಂಬ ಯಾವ ಸೂಚನೆಯೂ ಇರಲಿಲ್ಲ ಎನ್ನಲಾಗಿದೆ. ಚಿತ್ರನೋಡಿ ಸ್ನೇಹಿತನ ಮನೆಯಲ್ಲಿಯೇ ಉಳಿದುಕೊಂಡಿದ್ದರು.

ಆದರೆ ಬೆಳಗ್ಗೆ ನೋಡಿದಾಗ ಅವರು ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸ್ನೇಹಿತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಶವವನ್ನು ಫ್ಯಾನಿಂದ ಇಳಿಸಿ, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇಂದ್ರಕುಮಾರ್ ಶ್ರೀಲಂಕಾ ಮೂಲಕದವರು. ಸದ್ಯ ತಮಿಳಿನ ಕೆಲವೊಂದು ಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದರು, ಆದರೆ ಅವರಿಗೆ ಅದು ಸಿಕ್ಕಿರಲಿಲ್ಲ, ಆದ್ದರಿಂದ ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ.

ಇವರಿಗೆ ಪತ್ನಿ ಮತ್ತು ಮಗ ಇದ್ದಾರೆ. ಇವರ ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳು ಇದ್ದವು. ಅದ್ದರಿಂದ ಅವರು ತೀವ್ರ ಬೇಸರಕ್ಕೆ ಒಳಗಾಗಿದ್ದರು ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಸದ್ಯ ಯಾವುದೇ ಕಾರಣ ಸ್ಪಷ್ಟವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಶೇರ್‌ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಇನ್ನಷ್ಟೇ ನಿಜಾಂಶ ಬೆಳಕಿಗೆ ಬರಬೇಕಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net