

ಜಗತ್ತಿನಲ್ಲಿ ಎಲ್ಲಕ್ಕಿಂತ ಅಮೂಲ್ಯವಾದದ್ದು ಸ್ವಾತಂತ್ರ್ಯ, ಸಹಜವಾಗಿಯೇ ಭಾರತ ಈ ಮಹಾನ್ ತತ್ತ್ವಕ್ಕೆ, ಅದರ ಸಾಧನೆಗೆ ಕೊಟ್ಟಷ್ಟು ಮಹತ್ವ ಮತ್ತಾವುದಕ್ಕೂ ಕೊಡಲಿಲ್ಲ. ‘ಸ್ವಾತಂತ್ರ್ಯ’ ಪದದ ಅರ್ಥವೇ ಹಾಗಿದೆ. ಅದು ದೈವತ್ವವೇ! ಪ್ರಕೃತಿಯ ಒಡೆತನವೇ! ಯಾವುದರ ಅಂಕೆಯಲ್ಲೂ ಇರದ ಎಲ್ಲದರ ಪ್ರಭುವಾಗಿ ಮೆರೆಯುವ ಅದ್ಭುತ ಸ್ಥಿತಿ! ಅನಂತನಾಗದೆ ಸ್ವಾತಂತ್ರ್ಯ ಸಾಧ್ಯವಿಲ್ಲ. ತನ್ನ ನಾಗರಿಕತೆಯ ಉದ್ದಕ್ಕೂ ಭಾರತ ತನ್ನ ಶಕ್ತಿಯನ್ನು ವ್ಯಯಿಸಿದ್ದೇ ಸ್ವತಂತ್ರನಾಗುವುದು ಹೇಗೆ? ಮುಕ್ತರಾಗುವುದು ಹೇಗೆ? ಎಂಬ ವಿಷಯಕ್ಕೆ! ಪ್ರಪಂಚದ ಮತ್ತಾವ ದೇಶವೂ ‘ಸ್ವಾತಂತ್ರ್ಯ’ ಎನ್ನುವ ಶಬ್ದಕ್ಕೆ ಇಷ್ಟು ವಿಶಾಲ ಅರ್ಥ ಕೊಟ್ಟಿಲ್ಲ. ಏಕೆಂದರೆ ಅದಕ್ಕೆ ಇಷ್ಟು (ವಿಸ್ತಾರವಾದ) ಅರ್ಥವ್ಯಾಪ್ತಿ ಇದೆ ಎಂದು ಅವರಿಗೆ ಗೊತ್ತೇ ಇಲ್ಲ. ಅದು ಅವರ ಅರಿವಿಗೆ ಬಂದದ್ದೇ ಭಾರತದ ಸಂಪರ್ಕ ಸಿಕ್ಕಮೇಲೆ!
ಆಧ್ಯಾತ್ಮಿಕ ಆಯಾಮ ಪಕ್ಕಕ್ಕಿಟ್ಟು ಚಾರಿತ್ರಿಕ ನೆಲೆಗೆ ಬರೋಣ. ಹಾಗೆಂದ ಮಾತ್ರಕ್ಕೆ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯದ ಮಹತ್ವ ತಿಳಿದಿರಲಿಲ್ಲವೆಂದೇನಲ್ಲ. ಎವರೆಸ್ಟ್ ಹತ್ತಿದವರಿಗೆ ನಂದಿಬೆಟ್ಟ ಸವಾಲಾಗುವುದಿಲ್ಲ! ಮಹಾಭಾರತದಲ್ಲಿ ಬರುವ ರಾಜಕೀಯ ಚರ್ಚೆಗಳನ್ನು ನೋಡಿದರೆ, ಅದರ ಮುಂದುವರಿದ ಭಾಗವೇ ಆದ ಚಾಣಕ್ಯನ ಅರ್ಥಶಾಸ್ತ್ರವನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಈ ಪ್ರೌಢ ಚಿಂತನೆಗಳ ಅನುಷ್ಠಾನಗಳು ಕಾಲಕಾಲಕ್ಕೆ ಉಚಿತ ರೀತಿಯಲ್ಲಿ ನಡೆದುಕೊಂಡು ಬಂದಿದ್ದರೆ ಯಾವ ಪರಕೀಯನೂ ಭಾರತವನ್ನು ಆಕ್ರಮಿಸುತ್ತಿರಲಿಲ್ಲ. ರೋಗ ಮತ್ತು ಶತ್ರು ನಿಃಶೇಷವಾಗದೇ ನಾವು ವಿರಮಿಸಬಾರದು ಎಂಬ ಚಾಣಕ್ಯ ಪ್ರಣೀತ ಜಾಣ್ಣುಡಿ ಸ್ಮೃತಿಯಿಂದ ಜಾರಿದ್ದೇ ಎರಡನೇ ಸಹಸ್ರಮಾನದ ಉದ್ದಕ್ಕೂ ಭಾರತ ಕಂಡ ನರಕದರ್ಶನಕ್ಕೆ ನಾಂದಿಯಾಯಿತು. ಇಂತಹ ರಕ್ತಸಿಕ್ತ ಅಧ್ಯಾಯ, ಅವಮಾನ, ಕೊಲೆ, ಅತ್ಯಾಚಾರ, ಸಾಮೂಹಿಕ ಮಾರಣಹೋಮಗಳು, ಸಾಂಸ್ಕೃತಿಕ, ಧಾರ್ವಿುಕ ಕೇಂದ್ರಗಳ ಭಾವನೆಗಳ ಎಗ್ಗಿಲ್ಲದ ಕಗ್ಗೂಲೆಗಳಿಂದೊಡಗೂಡಿದ ರಾಷ್ಟ್ರವ್ಯಾಪಿ ದಮನೀಯ ಸ್ಥಿತಿ ಇತಿಹಾಸದಲ್ಲಿ ಅಪರೂಪ. ಭಾರತ ಮಾಡಿದ ಒಂದೇ ತಪು್ಪ ಅನರ್ಹರಿಗೆ ದಯೆ ತೋರಿದ್ದು, ಅರ್ಹರನ್ನು ವಂಚಿತರನ್ನಾಗಿಸುವುದಕ್ಕಿಂತ ನೂರುಪಟ್ಟು ಪ್ರಮಾದಕಾರಿ ಅನರ್ಹರಿಗೆ ಪಟ್ಟ ಕಟ್ಟುವುದು ಮತ್ತು ನಂಬುವುದು. ಪ್ರೀತಿ, ಕರುಣೆಗೆ ಯಾರೂ ಅರ್ಹರಾಗಬಲ್ಲರು. ಆದರೆ ನಂಬಿಕೆಗಲ್ಲ ಎನ್ನುವುದು ಆರ್ಯೂೕಕ್ತಿ!
ಇಂಗ್ಲಿಷರು ಭಾರತವನ್ನು ಪ್ರವೇಶಿಸಿದ ಮೇಲೆ ದಮನೀಯ ಸ್ಥಿತಿ ಇನ್ನೊಂದು ರೂಪ ಕಂಡುಕೊಂಡಿತೇ ಹೊರತು ಕಣ್ಮರೆಯಾಗಲಿಲ್ಲ. ಅಲ್ಲಿ ಸಿಕ್ಕ ಒಂದೇ ಸಮಾಧಾನ ಸ್ತ್ರೀಯರು ಸ್ವಲ್ಪಮಟ್ಟಿಗೆ ನಿರಾಳರಾಗಿದ್ದು, ಆದರೆ ಈ ದಮನೀಯಸ್ಥಿತಿಯಿಂದ ಪಾರಾಗಬೇಕೆಂದು ಪ್ರಯತ್ನಗಳು ನಡೆದಿದ್ದೇನು ಅಷ್ಟಿಷ್ಟಲ್ಲ. ಇಲ್ಲಿಯವರೆಗೆ ಹೊಗೆಬಿಟ್ಟುಕೊಂಡಿದ್ದ ಈ ಕಿಚ್ಚು ಒಮ್ಮೆಲೆ ಭುಗಿಲೆದ್ದದ್ದು 1857ರ ಸಿಪಾಯಿ ದಂಗೆಯಲ್ಲಿ, ಅದು ವ್ಯವಸ್ಥಿತ ಮತ್ತು ಪೂರ್ಣ ರೂಪ ಪಡೆದುಕೊಂಡಿದ್ದು ಭಾರತೀಯ ಯುವಕರು ಪಾಶ್ಚಾತ್ಯ ರಾಷ್ಟ್ರಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ ಮೇಲೆ, ಇಲ್ಲಿ ನಾಂದಿ ಹಾಡಿದ್ದೇ ಸ್ವಾಮಿ ವಿವೇಕಾನಂದರು. ಮುಂದಿನ ಪ್ರಮುಖ ಕ್ರಾಂತಿಕಾರಿಗಳಿಗೆಲ್ಲ ‘ತವರುನೆಲ’ದಂತಿದ್ದ ಲಂಡನ್ನಿನ ‘ಇಂಡಿಯಾ ಹೌಸ್’ ಹುಟ್ಟಿಕೊಂಡಿದ್ದೇ ಸ್ವಾಮೀಜಿಯವರ ಪರಮ ಶಿಷ್ಯ ಶ್ಯಾಮಜಿ ಕೃಷ್ಣವರ್ಮರಿಂದ. ತಿಲಕ್, ಗಾಂಧಿ, ನೆಹರು, ಪಟೇಲ್, ಸಾವರ್ಕರ್, ಧಿಂಗ್ರಾ, ಸುಭಾಷ್ ಚಂದ್ರ ಬೋಸ್, ಭಗತ್, ಆಜಾದ್ರ ಪಡೆ ಇರಲಿ ದೇಶದ ಮೂಲೆಯಲ್ಲಿಯೂ ಈ ಕಿಡಿ ಪ್ರಜ್ವಲಿಸಿತು. ಹಳ್ಳಿಯ ದೇಸಾಯಿ ಮನೆತನದ ನಾರಿ ಜಿಲ್ಲಾಧಿಕಾರಿಗಳಿಗೆ ತನ್ನ ಕಾರು ಕೊಡಲು ನಿರಾಕರಿಸಿದಳು. ಮನೆಗಳಲ್ಲಿ ಸಿಹಿ ತಿನ್ನುವುದನ್ನು ನಿಲ್ಲಿಸಿದರು; ಹಸೆಮಣೆಯೇರುವ ಹೆಣ್ಣುಮಗಳು ರೇಷ್ಮೆ ಸೀರೆ ನಿರಾಕರಿಸಿ ಖಾದಿಗೆ ಆದ್ಯತೆ ಕೊಟ್ಟಳು. ವಂದೇ ಮಾತರಂ ಎಂಬ ಕೂಗು ದಾಸ್ಯವೆಂಬ ಮೃಗವನ್ನು ಹರಿದು ತಿನ್ನಲು ಹೊರಟ ಸಿಂಹಗಳ ಗರ್ಜನೆಯೇನೋ ಎನ್ನುವಷ್ಟರ ಮಟ್ಟಿಗೆ ಯುವಜನತೆಯ ತುಟಿಗಳ ಮೇಲೆ ನಲಿದಾಡಿತು. ಪರಿಣಾಮ, ಸ್ವಾತಂತ್ರ್ಯಲಕ್ಷ್ಮಿಯ ಭಾರತೀಯರ ತಲೆದಡವಿ ಆಶೀರ್ವದಿಸಿದಳು.
ಆದರೆ ಪ್ರಸ್ತುತ ವಿದ್ಯಮಾನಗಳನ್ನು ನೋಡಿದಾಗ ಹಲವು ಚಿಂತನೆಗಳು ಹೊರಹೊಮ್ಮುತ್ತವೆ. ಇನ್ನೂ ಜನ ಪ್ರಜ್ಞಾವಂತರಾಗುವ ಮೊದಲೇ ಪ್ರಜಾಪ್ರಭುತ್ವ ಅಳವಡಿಸಿಕೊಂಡಿದ್ದು ದೊಡ್ಡ ದುರಂತವೇ ಸರಿ. ‘ಪ್ರಜಾಪ್ರಭುತ್ವ’ ಎಂಬ ಪದವನ್ನು ಗಮನಿಸಿ, ಇಲ್ಲಿ ‘ಪ್ರಜಾ’ ಎಂದರೆ ಸಾರ್ಥಕ ಬದುಕು, ಪ್ರಜ್ಞಾವಂತಿಕೆ, ಉದಾತ್ತತೆಗಳಿಗೆ ಬದ್ಧನಾದವನು ಎಂದು ಅರ್ಥ. ಇಂಗ್ಲಿಷಿನ Citizen ಇದ್ದಂತೆ. Citize ಬೇರೆ Denize ಬೇರೆ. ಹಾಗೆ ‘ಪ್ರಜೆ’ ಬೇರೆ, ಹತ್ತರಲ್ಲಿ ಹನ್ನೊಂದನೆಯವನು ಬೇರೆ. ಹದಿನೆಂಟು ವರ್ಷ ವಯಸ್ಸಾದ ಮಾತ್ರಕ್ಕೆ ರಾಜಕೀಯ ಪ್ರಜ್ಞೆ ಸಾಕಷ್ಟು ಮೂಡಿಬರುವುದಕ್ಕೆ ನಾವು Greeco Roma
ಹಿನ್ನೆಲೆಯವರಲ್ಲ, ಅವರನ್ನು ಮೀರಿಸಿದ ಪ್ರಜ್ಞೆ ನಮ್ಮದಾಗುತ್ತಿತ್ತು, ಒಂದೊಮ್ಮೆ ನಮ್ಮ ಶಿಕ್ಷಣ ವ್ಯವಸ್ಥೆ ತನ್ನ ಉದ್ದೇಶ, ಗಾಂಭೀರ್ಯ ಅರ್ಥಗಳನ್ನು ಉಳಿಸಿಕೊಂಡಿದ್ದಿದ್ದರೆ! ಅಲ್ಲಿ ವಿದ್ಯಾರ್ಥಿಗಳಿಗೆ ಸಿಗುವುದು ಮಾಹಿತಿ ಮಾತ್ರ. ಅವನ ಮನಸ್ಸು, ಬುದ್ಧಿ, ಭಾವನೆ, ಹೃದಯಗಳಿಗೆ ಯಾವ ತರಬೇತಿಯೂ ಸಿಗುವುದಿಲ್ಲ. ‘ಭಾರತದ ಉದ್ಧಾರ ಎಂದು ಮತ್ತು ಹೇಗೆ?’ ಎಂದು ಒಬ್ಬರು, ರಾಷ್ಟ್ರಪ್ರೇಮಿ ಸಂತ ವಿವೇಕಾನಂದರನ್ನು ಕೇಳಿದಾಗ "if someone can love India' ಎನ್ನುವುದು ಅವರು ಕೊಟ್ಟ ಉತ್ತರ. ಬಂಗಾಳದ ವಿಭಜನೆ ನಂತರ ಭಾರತದಲ್ಲಿ ಭುಗಿಲೆದ್ದ ಈ ‘ಟಡಛಿ ಐಛಜಿಚ’ ಸೂತ್ರವೇ ನಮ್ಮನ್ನು ದಾಸ್ಯದ ನೊಗದಿಂದ ಬಿಡಿಸಿದ್ದು.
ಸ್ವಾತಂತ್ರ್ಯೋತ್ತರ ದಿನಗಳಲ್ಲಿ ನಾವು ಮೊದಲು ಮಾಡಬೇಕಾಗಿದ್ದುದು ಈ ಕೆಲವು. ಭಾರತದ ಬಗ್ಗೆ ನಿಖರ ಜ್ಞಾನ, ಭಾರತದ ಪ್ರಾಬಲ್ಯಗಳು, ದೌರ್ಬಲ್ಯಗಳು ಇವು ಕರಾರುವಾಕ್ಕಾಗಿ, ವೈಜ್ಞಾನಿಕ ವಿವರಗಳೊಂದಿಗೆ ಭಾರತೀಯ ಪ್ರಜಾ ಸಮುದಾಯಕ್ಕೆ ತಿಳಿಸಬೇಕಿತ್ತು. ಪಾರತಂತ್ರದಿಂದ ಬಿಡುಗಡೆ ಹೊಂದಿದ ಗ್ರೀಕ್ ರಾಜ್ಯಗಳು ಹೇಗೆ ಧುಮ್ಮಿಕ್ಕುವ ಉತ್ಸಾಹದಿಂದ ಕೆಲಸ ಮಾಡಿದವು ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಗೂ ಪರಿಣಾಮಕಾರಿ ಉಪನ್ಯಾಸಗಳು, ಬೋಧನಾ ಕ್ರಮಗಳಿಂದ ತಿಳಿಸಬೇಕಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಯುವಜನ ಇಲಾಖೆ ಇತ್ಯಾದಿಗಳನ್ನು ಈ ನಿಟ್ಟಿನಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬಹುದಿತ್ತು.
ರಾಷ್ಟ್ರೀಯ ಪ್ರಜ್ಞೆ, ರಾಷ್ಟ್ರೀಯ ಅಸ್ಮಿತೆಗಳ ಕೊರತೆ ಎಷ್ಟರಮಟ್ಟಿಗೆ ತನ್ನ ವಿಕೃತಿಯನ್ನು ಮೆರೆಯುತ್ತಿದೆ ಎಂಬುದನ್ನು ಪಾರ್ಲಿಮೆಂಟಿನಲ್ಲಿ ನಡೆಯುವ ಗೋಷ್ಠಿಗಳು ಸಾರುವಷ್ಟು ಸ್ಪಷ್ಟವಾಗಿ ಮತ್ತಾವುದು ಸಾರುತ್ತದೆ?! ಸದನದ ಸದಸ್ಯರ ವರ್ತನೆ ಗೌರವಯುತವಾದದ್ದೇ? ಯಾವ ಬಾಯಿಂದ ವಿದ್ಯಾರ್ಥಿಗಳಿಗೆ ಶಿಕ್ಷಕರು ಶಿಸ್ತಿನ ಪಾಠ ಮಾಡಬೇಕು?
ಜಾತಿಯ ಆಧಾರದ ಮೇಲೆಯೇ ಸರ್ಕಾರದ ಪ್ರತಿಯೊಂದು ಸವಲತ್ತು ನಿಂತಿರುವಾಗ ತಮ್ಮ ಜಾತಿಯನ್ನು ಮರೆಯಲು, ಕಳೆದುಕೊಳ್ಳಲು ಯಾರು ಇಷ್ಟಪಡುತ್ತಾರೆ? ಎಷ್ಟೇ ಶ್ರೀಮಂತರಿದ್ದರೂ, ಅಧಿಕಾರದಲ್ಲಿದ್ದರೂ ಒಂದು ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಸವಲತ್ತು ಸಿಗುವುದಾದರೆ ‘ಜಾತಿವ್ಯವಸ್ಥೆ’ಯನ್ನು ದೂರುವುದರಲ್ಲಿ ಅರ್ಥವೇನು? ಜಾತಿಯನ್ನು ಬೆಳೆಸುತ್ತಿರುವವರಾರು? ಅಮೆರಿಕದ ಉದ್ದಗಲಕ್ಕೂ ಯಾವುದೇ ಶಾಲೆಯನ್ನು ನೋಡಿ, ಹತ್ತು ಟಾಪರ್ಸ್ಗಳಲ್ಲಿ ಏಳೆಂಟು ಜನ ಭಾರತೀಯ ವಿದ್ಯಾರ್ಥಿಗಳು. ಒಂದು ಅಮೆರಿಕನ್ ಕುಟುಂಬದ ಸರಾಸರಿ ವಾರ್ಷಿಕ ವರಮಾನ ಐವತ್ತಾರು ಸಾವಿರ ಡಾಲರ್, ಭಾರತೀಯ ಕುಟುಂಬದ್ದು ನೂರಾಹನ್ನೆರೆಡು ಸಾವಿರ ಡಾಲರ್. ಅಮೆರಿಕನ್ನರ ಎರಡರಷ್ಟು! ಭಾರತೀಯ ವಿದ್ಯಾರ್ಥಿಗಳು ದಡ್ಡರೇ? ಭಾರತೀಯ ಉದ್ಯೋಗಿ ಶ್ರಮಜೀವಿಯಲ್ಲವೇ? ಆದರೆ ಭಾರತದಲ್ಲೇ ಇರುವ ಭಾರತೀಯರಿಂದ ಇದನ್ನು ನಿರೀಕ್ಷಿಸಬಹುದೇ, ಇದಕ್ಕೆ ಕಾರಣಗಳಿಲ್ಲದೇ ಇಲ್ಲ. ಪ್ರತಿಭೆ, ಶ್ರಮಸಂಸ್ಕೃತಿ, ಕಾರ್ಯದಕ್ಷತೆ ಇವುಗಳೇ ವ್ಯಷ್ಟಿ ಮತ್ತು ಸಮಷ್ಟಿಯ ನೆಲೆಯಲ್ಲಿ ಪ್ರಧಾನ ಉದ್ಧಾರಕ ಅಂಶಗಳು, ಅವುಗಳನ್ನು ನಿರಂತರ ಪ್ರೋತ್ಸಾಹಿಸಬೇಕು. ಅದನ್ನು ವ್ಯಕ್ತಗೊಳಿಸುವವರನ್ನು ಹುರಿದುಂಬಿಸಿಬೇಕು.
ಒಂದು ಶಾಲೆಯನ್ನು ಪ್ರಾರಂಭಿಸುವುದು ಸ್ಥಳೀಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು. ಹಾಗೆಯೇ ರೋಗಿಗಳಿಗಾಗಿ ಆಸ್ಪತ್ರೆ, ಖಟ್ಲೆಗಳಿಗಾಗಿ ಕೋರ್ಟ್, ಸಾರ್ವಜನಿಕ ಹಿತಕ್ಕಾಗಿ ಕಚೇರಿಗಳು. ವಿದ್ಯೆಯನ್ನು ನೀಡದ ಶಾಲೆ ಮತ್ತು ಶಿಕ್ಷಕರ ಪ್ರಸ್ತುತತೆಯಾದರೂ ಏನು? ಡಿ.ಯೆಡ್ ಪದವೀಧರರಿಗೆ ಉದ್ಯೋಗ ನೀಡುವುದು ಆದ್ಯತೆಯೋ ; ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದೋ? ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳೇ ಇಲ್ಲದಂತೆ ಮಾಡಬಲ್ಲೆ ಎಂದು ಹೇಳಲಾರದ ಶಿಕ್ಷಕರಿಗೆ "If you are not a part of the solution then you are the problem' ಎನ್ನುವ ಸೂತ್ರ ಅನ್ವಯವಾಗದೇ? ಇದೇ ಸೂಕ್ತಿಯನ್ನು ಆಸ್ಪತ್ರೆ ಮುಂತಾದ ಸಂಸ್ಥೆಗಳಿಗೂ ಅನ್ವಯಿಸಲಾಗದೇ?
ಮೇಲಿನ ಸಮಸ್ಯೆಗಳೆಲ್ಲ ಸ್ವಾತಂತ್ರ್ಯೋತ್ತರ ಭಾರತದ್ದೇ! ಭ್ರಮನಿರಸನವಾಗಿದ್ದೆಲ್ಲಿ? ಭಾರತವನ್ನು ಅರಿಯದೆ, ಭಾರತೀಯ ನಾಡಿಬಡಿತವನ್ನು ತಿಳಿಯದೆ, ಪ್ರತಿಯೊಂದಕ್ಕೂ ಪಾಶ್ಚಿಮಾತ್ಯರನ್ನು ಅನುಕರಿಸಿದ್ದೇ ಕಾರಣ. ‘ "If you want to know India, study Vivekananda! everything is positive in him and nothing negative ಎಂಬ ಟ್ಯಾಗೋರರ ಮಾತನ್ನು ಪಾಲಿಸದೆ ಇದ್ದುದು ಕಾರಣ.
ಪಾಶ್ಚಾತ್ಯ ರಾಷ್ಟ್ರಗಳ ದಿಗ್ವಿಜಯದ ನಂತರ 1897ರಲ್ಲಿ ಮದ್ರಾಸಿಗೆ ಹಿಂದಿರುಗಿದ ವಿವೇಕಾನಂದರ ಹತ್ತಿರ ಅಲ್ಲಿನ ಪ್ರಮುಖರಾದ ಜಸ್ಟಿಸ್ ಸುಬ್ರಹ್ಮಣ್ಯ ಅಯ್ಯರ್, ಪಾರ್ಥಸಾರಥಿ ಅಯ್ಯಂಗಾರ್, ಡಾ.ನಂಜುಂಡರಾವ್, ಪ್ರೊ.ಸಿಂಗಾರವೇಲು, ತಿರುವಾಂಕೂರಿನ ಪ್ರೊ.ಸುಂದರರಾಮ್ ಅಯ್ಯರ್, ಬಿಳಿಗಿರಿ ಅಯ್ಯಂಗಾರ್ ಸೇರಿ ಕೆಲವರು ಒಂದು ಗಂಭೀರ ಪ್ರಸ್ತಾವನೆ ಮುಂದಿಟ್ಟರು. ‘ಸ್ವಾಮೀಜಿ ಇಂದು ರಾಷ್ಟ್ರಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವುದು ಪರಕೀಯರ ಆಡಳಿತದಿಂದ ವಿಮೋಚನೆ, ಈ ಹೋರಾಟದಲ್ಲಿ ನಾಯಕತ್ವ ವಹಿಸುವುದಕ್ಕೆ ತಮಗಿಂತ ಯೋಗ್ಯರನ್ನು ನಾವು ಕಾಣೆವು, ದಯವಿಟ್ಟು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು’. ವಿವೇಕಾನಂದರ ಉತ್ತರ ಕಣ್ಣು ತೆರೆಯುವಂತಿದೆ ಮತ್ತು ಇಂದಿಗೂ ಪ್ರಸ್ತುತವಾಗಿದೆ. ‘ನಿಮಗೆ ಸ್ವಾತಂತ್ರ್ಯ ಬೇಕೇ? ನಾನು ನಾಳೆಯೇ ಅದನ್ನು ತಂದುಕೊಡುತ್ತೇನೆ. ಆದರೆ ಅದನ್ನು ಉಳಿಸಿಕೊಳ್ಳುವ, ಉಪಯೋಗಿಸಿಕೊಳ್ಳುವ ಜನ ಎಲ್ಲಿದ್ದಾರೆ ನಿಮ್ಮಲ್ಲಿ? ನೆನಪಿಡಿ! ಸ್ವಾತಂತ್ರ್ಯ ಎಂದರೆ ಜವಾಬ್ದಾರಿತನ! ಮೊದಲು ಮನುಷ್ಯರನ್ನು ನಿರ್ಮಾಣ ಮಾಡಿ, ಸ್ವಾತಂತ್ರ್ಯ ಮತ್ತಿತರ ಎಲ್ಲ ಸೌಭಾಗ್ಯಗಳೂ ತಾವಾಗಿಯೇ ದೊರಕುತ್ತವೆ’. ಈ ಮನುಷ್ಯ ನಿರ್ವಣಕ್ಕೆ ; ಪೌರುಷವಂತ, ನಿಸ್ವಾರ್ಥ ಪರಿಶುದ್ಧ ವ್ಯಕ್ತಿತ್ವವುಳ್ಳ ಮನುಷ್ಯ ನಿರ್ವಣಕ್ಕೆ ಇನ್ನಿಲ್ಲದ ಒತ್ತು ಕೊಟ್ಟವರು ಅವರು!
ರಾಷ್ಟ್ರನಿರ್ವಣ ಎಂದರೆ ಮನಸ್ಸುಗಳ ನಿರ್ವಣ; ಅದ್ಭುತ ಸಾಮರ್ಥ್ಯವುಳ್ಳ ರಾಷ್ಟ್ರೀಯ ಮನಸ್ಸುಗಳ, ನಿಸ್ವಾರ್ಥ ಸೇವಾ ಮನೋಭಾವದ, ಪ್ರಾಮಾಣಿಕ, ದಕ್ಷ, ಕರ್ತವ್ಯನಿಷ್ಠ ಮನಸ್ಸುಗಳ ನಿರ್ವಣ! ಇಂಥ ಮನಸ್ಸುಗಳ ನಿರ್ವಣವಾದರೆ ಅಣೆಕಟ್ಟುಗಳು, ವಿಶ್ವವಿದ್ಯಾಲಯಗಳು, ರಸ್ತೆಗಳು ತಾವಾಗಿಯೇ ನಿರ್ವಣಗೊಳ್ಳುತ್ತವೆ. ಗುಣಾತ್ಮಕವಾಗಿರುತ್ತವೆ, ಖ್ಯಾತಿಯನ್ನೂ ಪಡೆಯುತ್ತವೆ, ಇಲ್ಲದಿದ್ದಲ್ಲಿ ಕಟ್ಟಡಗಳು ಮಾತ್ರವೇ ಕಾಣುತ್ತವೆ ಈಗ ಆಗಿರುವುದಾದರೂ ಅಷ್ಟೇ!
ಈ ಸಂದರ್ಭದಲ್ಲಿ ಪಾಶ್ಚಾತ್ಯ ಚಿಂತಕನೊಬ್ಬನ ಜಾಣ್ಣುಡಿಯನ್ನು ಮರೆಯದಿರೋಣ. ‘"More wars have ensued when ill tempered people discussed peace schemes than right tempered war schemes' ಎನ್ನುವುದೇ ಅದು.