

ಹರಿಯಾಣ: ಬಾಲಿವುಡ್ ನಟರಾಗಿದ್ದ ಸುಶಾಂತ್ ಸಿಂಗ್ ಮೃತಪಟ್ಟು ಆರು ತಿಂಗಳೇ ಕಳೆದುಹೋಗಿವೆ. ಕಳೆದ ಜೂನ್ 14ರಂದು ಇವರ ಮೃತದೇಹ ಪತ್ತೆಯಾದಂದಿನಿಂದಲೂ ಇವರ ಸಾವಿನ ಬಗ್ಗೆ ಇದುವರೆಗೂ ಸ್ಪಷ್ಟ ಚಿತ್ರಣವೇ ಸಿಕ್ಕಿಲ್ಲ.
ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಇದುವರೆಗೆ ತಾತ್ವಿಕ ಅಂತ್ಯ ಕಂಡಿಲ್ಲ. ಮಗನ ಸಾವಿನ ಬೆನ್ನಲ್ಲೇ ತೀವ್ರ ಶೋಕತಪ್ತರಾಗಿರುವ ಅವರ ತಂದೆ ಕೆ.ಕೆ.ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆಕೆ ಸಿಂಗ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದ್ದು, ಹರಿಯಾಣದ ಫರಿದಾಬಾದ್ ನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರನ್ನು ಅವರ ಇಬ್ಬರು ಹೆಣ್ಣು ಮಕ್ಕಳಾದ ಮಕ್ಕಳಾದ ಪ್ರಿಯಾಂಕಾ ಮತ್ತು ಮೀತು ಸಿಂಗ್ ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಕೆ.ಕೆ ಸಿಂಗ್ ಅವರು ಆಸ್ಪತ್ರೆಯಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಆದಷ್ಟು ಬೇಗ ಹುಷಾರಾಗಿ ಎಂದು ಹಾರೈಸುತ್ತಿದ್ದಾರೆ. ಸದ್ಯ ಕೆ.ಕೆ ಸಿಂಗ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸುಶಾಂತ್ ಸಿಂಗ್ ಮುಂಬೈನ ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿನ ನಂತರ ಇಡೀ ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣ ಸಹ ಬಯಲಿಗೆ ಬಂದಿದ್ದು, ಡ್ರಗ್ಸ್ ಮಾಫಿಯಾದ ಕರಾಳ ಜಗತ್ತು ತೆರೆದುಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಸುಶಾಂತ್ ಅವರು ಸ್ನೇಹಿತೆ ರಿಯಾ ಚಕ್ರವರ್ತಿ ಅವರನ್ನೂ ಬಂಧಿಸಲಾಗಿತ್ತು. ಸಸದ್ಯ ಇವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.