‘ಅಂತೂ 100 ರೂ. ದಾಟಿತು- ನಿಮ್ಮ ಕೇರ್‌ ತಗೊಳಿ’ ಎಂದು ಸೈಕಲ್‌ ಏರಿದ ಮಾದಕ ನಟಿ

sunny1
Published on

ಮುಂಬೈ: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದು, ಅದರಲ್ಲಿ ಸೈಕಲ್‌ ಏರಿ ಕುಳಿತಿದ್ದಾರೆ. ಈ ಮೂಲಕ ಗುಪ್ತ ಸಂದೇಶವೊಂದನ್ನು ಅವರು ಹಾಕಿದ್ದಾರೆ.

ಅದೇನೆಂದರೆ ಅಂತೂ 100 ರೂಪಾಯಿ ದಾಟಿತು, ಈಗಲಾದ್ರೂ ನಿಮ್ಮ ಕೇರ್‌ ತೆಗೆದುಕೊಳ್ಳಿ ಎಂದು ಸನ್ನಿ ಹೇಳಿದ್ದಾರೆ. ಈ ಮೂಲಕ ಪೆಟ್ರೋಲ್ ಬೆಲೆ ಏರಿಕೆಯನ್ನು ಪರೋಕ್ಷವಾಗಿ ಖಂಡಿಸಿರುವ ನಟಿ, ಸೈಕಲ್‌ ಬಳಸಿ ಎಂಬ ಸಂದೇಶ ನೀಡಿದ್ದಾರೆ.

ಸದ್ಯ ಪೆಟ್ರೋಲ್ ಬೆಲೆಯನ್ನು ವಿರೋಧಿಸಿ ಹಲವರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ನಟಿ ಈಗ ಈ ರೀತಿಯಾಗಿ ಅದನ್ನು ಖಂಡಿಸಿದ್ದಾರೆ. ಇದಾಗಲೇ ಕಾಂಗ್ರೆಸ್‌ ಮುಖಂಡರು ಸೇರಿದಂತೆ ಕೆಲವರು ಸೈಕಲ್‌ ಜಾಥಾ ನಡೆಸುವ ಮೂಲಕ ಪ್ರತಿಭಟನೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅದೇ ರೀತಿ ನಟಿ ಸನ್ನಿ ಕೂಡ ಸೈಕಲ್‌ ಮೇಲೆ ಕುಳಿತು ಪ್ರತಿಭಟನೆ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸಾಕಷ್ಟು ವೈರಲ್‌ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net