VIDEO: ಅಪ್ಪುವಿನ ಆತ್ಮದ ಜತೆಗೆ ಮಾತನಾಡಿದ ಅಮೆರಿಕದ ತಜ್ಞ? ವಿಡಿಯೋ ಇಲ್ಲಿದೆ ನೋಡಿ...

appu soul
Published on

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಇಂದಿಗೆ 11 ದಿನಗಳಾಗಿವೆ. ಅವರ 11ನೇ ದಿನದ ವಿಧಿವಿಧಾನ ನಡೆಯುತ್ತಿರುವ ನಡುವೆಯೇ ಅಪ್ಪುವಿನ ಆತ್ಮದ ಜತೆ ಅಮೆರಿಕದ ಚಾರ್ಲಿ ಚಿಟ್ವೆಂಡೆನ್​ ಪ್ಯಾರಾನಾರ್ಮಲ್ ಎಂಬ ತಜ್ಞ ಮಾತನಾಡಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಇದಾಗಲೇ ಸುಶಾಂತ್‌ ಸಿಂಗ್‌ ಸೇರಿದಂತೆ ಹಲವಾರು ಮಂದಿಯ ಆತ್ಮಗಳ ಜತೆ ಮಾತನಾಡಿರುವುದಾಗಿ  ಸ್ವೀವ್‌ ಹಫ್‌ ಎನ್ನುವವರು ಹೇಳಿಕೊಂಡಿದ್ದರು. ಇದೀಗ ಪುನೀತ್‌ ರಾಜ್‌ಕುಮಾರ್‌ ಅವರ ಆತ್ಮದ ಜತೆಗೂ ಮಾತನಾಡಿರುವುದಾಗಿ ಅಮೆರಿಕದ ಚಾರ್ಲಿ ಚಿಟ್ವೆಂಡೆನ್​ ಪ್ಯಾರಾನಾರ್ಮಲ್ ಹೇಳಿದ್ದು ಅದರ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದನ್ನು ಯೂಟ್ಯೂಬ್‌ ಚಾನೆಲ್‌ನಲ್ಲಿ ಹಾಕಿದ್ದಾರೆ.

ಇದರಲ್ಲಿ ಪುನೀತ್‌ ಅವರ ಆತ್ಮದ ಜತೆ ಕೆಲವೊಂದು ಪ್ರಶ್ನೆಗಳನ್ನು ಚಾರ್ಲಿ ಅವರು ಕೇಳಿದ್ದಾರೆ. ನೀವು ನಿಮ್ಮ ಅಭಿಮಾನಿಗಳಿಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ಅವರು ಎಲ್ಲರನ್ನೂ ಪ್ರೀತಿಸುತ್ತೇನೆ (ಐ ಲವ್‌ ದೆಮ್‌) ಎಂದು ಹೇಳಿರುವ ಮಾತು ಕೇಳಿಸುತ್ತಿದೆ. ಅದೇ ರೀತಿ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಅದಕ್ಕೆ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ನಡುವೆ ಹಾರ್ಟ್‌ ಫೇಲ್‌, ಡಾಕ್ಟರ್‌ ಡಾಕ್ಟರ್‌ ಎನ್ನುವ ಮಾತುಗಳು ಕೇಳಿಸುತ್ತಿದ್ದು, ಇವೆಲ್ಲವನ್ನೂ ಪುನೀತ್‌ ಅವರೇ ಮಾತನಾಡಿರುವುದಾಗಿ ಚಾರ್ಲಿ ಹೇಳಿದ್ದಾರೆ.

ಇದರ ಯೂಟ್ಯೂಬ್‌ ಲಿಂಕ್‌ ಇಲ್ಲಿದೆ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net