

ಮುಂಬೈ: ಮುಂಬೈ ಮಹಾನಗರದ ಜುಹು ಪ್ರದೇಶದಲ್ಲಿರುವ ವಸತಿ ಕಟ್ಟಡವನ್ನು ಅನುಮತಿ ಇಲ್ಲದೆ ವಾಣಿಜ್ಯ ಕಟ್ಟಡವಾಗಿ ಪರಿವರ್ತಿಸಿದ್ದಕ್ಕೆ ಬೃಹತ್ ಮುಂಬೈ ಮಹಾನಗರಪಾಲಿಕೆ (ಬಿಎಂಸಿ) ನೀಡಿದ್ದ ನೋಟಿಸ್ ವಿರುದ್ಧ ನಟ ಸೋನು ಸೂದ್ ಸಲ್ಲಿಸಿರುವ ಅರ್ಜಿ ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ಸೋನು ಸೂದ್ ಅವರು ಆರು ಅಂತಸ್ತಿನ ವಸತಿ ಕಟ್ಟಡ ಶಕ್ತಿ ಸಾಗರ್ನಲ್ಲಿ ಅಗತ್ಯ ಅನುಮತಿ ತೆಗೆದುಕೊಳ್ಳದೆ ಅದನ್ನು ಹೋಟೆಲ್ ಆಗಿ ಪರಿವರ್ತಿಸಿದ್ದರು ಎಂದು ಬಿಎಂಸಿ ಆರೋಪಿಸಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಬಿಎಂಸಿ ನೀಡಿದ್ದ ನೋಟಿಸ್ಗೆ ಉತ್ತರಿಸಲು 10 ವಾರಗಳ ಕಾಲಾವಕಾಶವನ್ನು ನೀಡಬೇಕು ಎಂದು ಸೂದ್ ಕೋರಿದ್ದರು.
ಜತೆಗೆ, ಅಕ್ರಮ ಕಟ್ಟಡ ಧ್ವಂಸ ಕಾರ್ಯ ಆರಂಭಿಸದಂತೆ ಬಿಎಂಸಿಗೆ ನಿರ್ದೇಶನ ನೀಡುವಂತೆ ಸೂದ್ ಕೋರಿದ್ದರು. ಆದರೆ ಈ ಮನವಿಯನ್ನು ಮಾನ್ಯ ಮಾಡಲು ಕೋರ್ಟ್ ಒಪ್ಪಲಿಲ್ಲ.
ನಟನಿಗೆ ಈ ಹಿಂದೆ ಸಾಕಷ್ಟು ಅವಕಾಶಗಳಿದ್ದವು. ಅಗತ್ಯವಿದ್ದರೆ ಅವರು ಬಿಎಂಸಿಯನ್ನು ಸಂಪರ್ಕಿಸಬಹುದು. ಚೆಂಡು ಈಗ ಬಿಎಂಸಿ ಕಚೇರಿಯಲ್ಲಿದೆ. ನೀವು (ಸೋನು ಸೂದ್)ಕ ಚೇರಿಯನ್ನು ಸಂಪರ್ಕಿಸಬಹುದು. ನೀವು ತಡವಾಗಿ ಇಲ್ಲಿದೆ ಬಂದಿರುವಿರಿ ಎಂದು ಕೋರ್ಟ್ ಹೇಳಿದೆ.