‘ನನ್ನ ಬಳಿ ಬಗೆಬಗೆ ತಿಂಡಿ ಇವೆ... ಬೇಗ ಬೇಗ ಆರ್ಡರ್‌ ಮಾಡಿ...’ ಸೈಕಲ್‌ ಏರಿ ಹೊರಟ ಸೋನು ಸೂದ್‌

sonu sood- delivery
Published on

ಮುಂಬೈ: ಕಳೆದ ವರ್ಷದ ಲಾಕ್‌ಡೌನ್‌ ಸಮಯದಿಂದ ಹಿಡಿದು ಈ ಒಂದೂವರೆ ವರ್ಷದಲ್ಲಿ ಸಹಾಯ ಹಸ್ತ ಚಾಚಿರುವವರ ಪೈಕಿ ಸಾಕಷ್ಟು ಹೆಸರು ಮಾಡಿರುವವರಲ್ಲಿ ಬಾಲಿವುಡ್‌ ನಟ ಸೋನು ಸೂದ್‌ ಕೂಡ ಒಬ್ಬರು. ಇದಾಗಲೇ ಹಲವಾರು ಮಂದಿಗೆ ತಮ್ಮ ಕೈಲಾದ ಸೇವೆ ಮಾಡುತ್ತಾ ದಿನವೂ ಸುದ್ದಿಯಾಗುತ್ತಿರುವ ಸೋನು ಇದೀಗ ತಮಾಷೆಗೆ ವಿಡಿಯೋ ಒಂದನ್ನು ಶೇರ್‌ ಮಾಡಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ.

ಇದೀಗ ಅವರು ಡೆಲಿವರಿ ಬಾಯ್‌ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು, ಮಾಲ್‌ ಬಂದ್‌ ಆಗಿದೆ ಎಂದು ಹೇಳಿದವರು ಯಾರು? ನನ್ನ ಬಳಿ ನೋಡಿ ಎಲ್ಲವೂ ರೆಡಿ ಇದೆ. ಏನು ಬೇಕಾದರೂ ಖರೀದಿ ಮಾಡಬಹುದು. ದುಬಾರಿ ಬೆಲೆಯ ಮಾಲ್‌ಗಳೂ ಇವೆ, ಮೊಟ್ಟೆ, ಚಿಪ್ಸ್‌, ದೊಡ್ಡ- ಚಿಕ್ಕ ಸೈಜ್‌ ಬ್ರೆಡ್‌ ಸೇರಿದಂತೆ ಸೂಪರ್‌ ಮಾರ್ಕೆಟ್‌ನಲ್ಲಿ ಸಿಗುವ ಎಲ್ಲಾ ರೀತಿ ತಿಂಡಿಗಳೂ ಇವೆ ಎಂದಿದ್ದಾರೆ.

ನಿಮಗೆ ಏನು ಬೇಕೋ ಅವುಗಳನ್ನು ಬೇಗ ಬೇಗ ಆರ್ಡರ್‌ ಮಾಡಿ, ನನಗೆ ಡೆಲಿವರಿ ಟೈಂ ಆಗಿದೆ. ಆರ್ಡರ್‌ ಮಾಡಿದರೆ ತಲುಪಿಸುವೆ ಎಂದು ಸೈಕಲ್‌ ಏರಿ ಹೊರಟಿದ್ದಾರೆ ಸೋನು. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net