

ಬುಂದೇಲ್ಖಂಡ (ಮಧ್ಯಪ್ರದೇಶ): ಕೆಲವೊಂದು ಘಟನೆಗಳು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಎಲ್ಲ ಊಹೆಗೂ ನಿಲುಕಿ ನಡೆಯುತ್ತದೆ. ಪವಾಡ ಎನ್ನಬಹುದಾದ ಘಟನೆಗಳು ನಡೆಯುತ್ತಲೇ ಇರುವುದು ಆಗಾಗ ವರದಿಯಾಗುತ್ತಿರುತ್ತದೆ.
ಅಂಥದ್ದೇ ಒಂದು ಘಟನೆ ಮಧ್ಯಪ್ರದೇಶದ ಜಟಾಶಂಕರ ಧಾಮದಲ್ಲಿ ನಡೆದಿದೆ. ಇಲ್ಲಿಯ ಬುಂದೇಲ್ಖಂಡದ ಕೇದಾರನಾಥದಲ್ಲಿರುವ ಶಿವಧಾಮದಲ್ಲಿ ಈ ಪವಾಡ ನಡೆದಿದೆ.
ಸದಾ ಪವಾಡಗಳಿಗೆ ಹೆಸರುವಾಸಿಯಾಗಿರುವ ಶಿವಧಾಮದಲ್ಲಿ ನಿನ್ನೆ ರಾತ್ರಿ ದೇವಸ್ಥಾನಕ್ಕೆ ಆಗಮಿಸಿರುವ ಹಾವೊಂದು ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕಿದೆ. ಅದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಶಿವಲಿಂಗದ ಸುತ್ತಲೂ ಹಾವು ಅನೇಕ ಸಲ ಪ್ರದಕ್ಷಿಣೆ ಹಾಕಿದೆ. ಇದರ ದೃಶ್ಯವನ್ನು ಕಂಡು ಭಕ್ತರು ಪುನೀತರಾಗಿದ್ದಾರೆ. ರಾತ್ರಿ ಬೆಳಗಾಗುವುದರೊಳಗೆ ಈ ಸುದ್ದಿ ಮಿಂಚಿನಂತೆ ಹರಡಿ ದೇವಾಲಯಕ್ಕೆ ಜನರು ಆಗಮಿಸುತ್ತಿದ್ದಾರೆ.
ಈ ಕುರಿತು ಟ್ರಸ್ಟ್ನ ಅಧೀಕ್ಷಕ ಜೆ.ಪಿ ಖರೆ ಮಾತನಾಡಿದ್ದು, ಇದು ಹೊಸ ವಿಷಯವಲ್ಲ. ದೇವಸ್ಥಾನದಲ್ಲಿ ರುದ್ರಾಭಿಷೇಕ ನಡೆಯುವ ದಿನ ಈ ಸರ್ಪ ಇಲ್ಲಿಗೆ ಬರುತ್ತದೆ. ಇಲ್ಲಿಯವರೆಗೂ ಯಾರಿಗೂ ಕೂಡ ಅಪಾಯ ಮಾಡಿಲ್ಲ. ನಿನ್ನೆ ರಾತ್ರಿ ಕೂಡ ಬಂದಿದೆಯಷ್ಟೇ ಎಂದಿದ್ದಾರೆ.