

ನವದೆಹಲಿ : ಇಲ್ಲಿಯ ಬಿಜ್ವಾಸನ್ ನಗರದಲ್ಲಿರುವ ಕೊಳಗೇರಿಯಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ್ದು ಆರು ಮಂದಿ ಸಜೀವವಾಗಿ ದಹಿಸಿಹೋಗಿರುವ ಘಟನೆ ನಡೆದಿದೆ. ಈ ಆರೂ ಮಂದಿ ಒಂದೇ ಕುಟುಂಬದವರು ಎನ್ನಲಾಗಿದೆ.
ಈ ಅಗ್ನಿ ದುರಂತಕ್ಕೆ ಸಿಲಿಂಡರ್ ಬ್ಲಾಸ್ಟ್ ಆಗಿರುವುದು ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟ್ರಾನ್ಸ್‌ಫಾರ್ಮರ್ ಬಳಿಯ ಎರಡು ಕೊಳಗೇರಿ ಪ್ರದೇಶಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಈ ಪ್ರದೇಶದಲ್ಲಿನ ಮನೆಗಳು ಸಂಪೂರ್ಣ ಭಸ್ಮವಾಗಿ ಹೋಗಿವೆ. ಆದರೆ ಒಂದು ಮನೆಯಲ್ಲಿದ್ದ ಆರು ಮಂದಿ ಸಜೀವವಾಗಿ ದಹಿಸಿಹೋಗಿದ್ದಾರೆ.
ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ.