ಧೈರ್ಯಂ ಸರ್ವತ್ರ ಸಾಧನಂ... ಕರೊನಾದ ಸಾವಿನ ಬಾಯಿಗೆ ಹೋಗಿ ಜಯಿಸಿ ಬಂದ ಶತಾಯುಷಿ ದಂಪತಿ!

corona
Published on

ಲಾತೂರ್‌ (ಮಹಾರಾಷ್ಟ್ರ): ಕರೊನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರೂ ಧೈರ್ಯದಿಂದ ಇರಿ, ಧೃತಿಗೆಡಬೇಡಿ. ಹೆದರಿದರೆ ಅರ್ಧ ಸತ್ತಂತೆಯೇ, ಅದರಲ್ಲಿಯೂ ಕರೊನಾ ಪಾಸಿಟಿವ್‌ ಎಂದು ಗೊತ್ತಾದ ತಕ್ಷಣ ಭಯಪಡುವುದರಿಂದಲೇ ಮೃತಪಡುವವರ ಸಂಖ್ಯೆ ಏರುತ್ತಿದೆ ಎಂದು ತಜ್ಞರು ಇದಾಗಲೇ ಎಷ್ಟೋ ಬಾರಿ ಹೇಳಿದ್ದಾರೆ, ಹೇಳುತ್ತಲೂ ಇದ್ದಾರೆ. ಧೈರ್ಯದಿಂದ ಇದ್ದರೆ ಕರೊನಾ ಅಷ್ಟೇ ಎಲ್ಲಾ, ಸಾವನ್ನೇ ಜಯಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಇಲ್ಲೊಬ್ಬ ಶತಾಯುಷ ದಂಪತಿ.

ಲಾತೂರ್‌ನ ಧೇನು ಚೌಹಾಣ್‌ ಮತ್ತು ಅವರ ಪತ್ನಿ ಮೋಟಾಬಾಯಿ 100 ವಯಸ್ಸಿನ ಆಸುಪಾಸಿನವರು. ಅಂದರೆ ಧೇನು ಅವರಿಗೆ 105 ವರ್ಷವಾಗಿದ್ದರೆ, ಮೋಟಾಬಾಯಿ ಅವರಿಗೆ 96 ವರ್ಷ. ಇವರಿಬ್ಬರಿಗೂ ಕರೊನಾ ಪಾಸಿಟಿವ್‌ ಕಾಣಿಸಿಕೊಂಡಿತ್ತು. ಮಾತ್ರವಲ್ಲದೇ ವಿಪರೀತವಾಗಿ ದಂಪತಿ ಬೆಳಲಿ ಬೆಂಡಾಗಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಈ ಹಿರಿಯ ಜೀವಗಳು ಧೈರ್ಯದಿಂದ ಇದ್ದರು. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಈ ದಂಪತಿ ಜೀವಂತವಾಗಿ ಬರುತ್ತಾರೆ ಎಂದು ನೆರೆಹೊರೆಯರಾರೂ ನಂಬಿರಲಿಲ್ಲವಂತೆ.

ಇಬ್ಬರಿಗೂ ಕರೊನಾ ಸೋಂಕು ಹೆಚ್ಚಾಗಿ ಇನ್ನೇನು ಸಾವಿನ ಸಮೀಪವೇ ಇದ್ದರು. ಐಸಿಯುನಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಬ್ಬರೂ ಸಾವನ್ನೂ, ಕರೊನಾವನ್ನೂ ಜಯಿಸಿ ಬಂದಿದ್ದಾರೆ. ಇವರು ವಾಪಸ್‌ ಬಂದಿದ್ದು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ನಮ್ಮದು ಅವಿಭಕ್ತ ಕುಟುಂಬ, ತಂದೆ - ತಾಯಿ ಅಲ್ಲದೆ ಮನೆಯಲ್ಲಿದ್ದ ಮೂವರ ಮಕ್ಕಳಿಗೂ ಸೋಂಕು ಕಾಣಿಸಿಕೊಂಡಿತ್ತು, ಅಲ್ಲದೆ ತನ್ನ ಹೆತ್ತವರಲ್ಲಿ ತಾಪಮಾನ ಹೆಚ್ಚುತ್ತಿದ್ದು ಗಮನಕ್ಕೆ ಬಂತು. ಅವರು ಮೊದಲು ಭಯದಿಂದ ಇದ್ದರೂ ಕೊನೆಗೆ ಧೈರ್ಯದಿಂದ ಎಲ್ಲವನ್ನೂ ನಿಭಾಯಿಸಿದ್ದಾರೆ. ಅವರ ಧೈರ್ಯವೇ ಇಂದು ಅವರಿಗೆ ಮರುಜೀವ ನೀಡಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇಬ್ಬರೂ ಸಹ ವೃದ್ಧರಾದ ಕಾರಣ ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಾರೆಂಬ ಕಳವಳವಿತ್ತು, ಆಕ್ಸಿಜನ್ ಬೆಂಬಲದಲ್ಲಿಯೇ ಇದ್ದರು ಮತ್ತು 5 ಆಂಟಿವೈರಸ್ ರೆಮಿಡಿಸಿವರ್ ಚುಚ್ಚುಮದ್ದು ನೀಡಲಾಯಿತು ಎಂದು ದಂಪತಿಗೆ ಚಿಕಿತ್ಸೆ ನೀಡಿದ ವೈದ್ಯ ಗಜಾನನ ಹೇಳಿದ್ದಾರೆ. ಧೈರ್ಯದಿಂದ ಇದ್ದರೆ ಕರೊನಾವನ್ನೂ ಜಯಸಿಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net