ಡಾ.ರಾಜ್‌ ಕುಟುಂಬಕ್ಕೆ ಇನ್ನೊಂದು ಆಘಾತ: ಪಾರ್ವತಮ್ಮ ಸಹೋದರಿ ನಾಗಮ್ಮ ಇನ್ನಿಲ್ಲ

Nagama
Published on

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ನಿಧನದ ಘಟನೆ ಇನ್ನೂ ಹಚ್ಚಹಸಿರಾಗಿರುವ ಬೆನ್ನಲ್ಲೇ ಡಾ. ರಾಜರಾಜ್‌ಕುಮಾರ್‌ ಅವರ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರಿಯಾದ ಎಸ್‌.ಎ.ನಾಗಮ್ಮ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು

ನಾಗಮ್ಮನವರು ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಎಸ್‌.ಎ.ಚಿನ್ನೇಗೌಡ ಅವರ ಸಹೋದರಿ. ಚಿನ್ನೇಗೌಡ ಅವರು ಕನ್ನಡ ಚಿತ್ರದ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಕಳೆದ ಎರಡು ವಾರಗಳಿಂದ ಎಸ್.ಎ.ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸಹೋದರಿ ಪಾರ್ವತಮ್ಮ ಅವರನ್ನು ಕಳೆದುಕೊಂಡ ನಂತರ ತುಂಬಾ ಬಳಲಿದ್ದರು. ಬೆಂಗಳೂರಿನ ಬಸವೇಶ್ವರನಗರದಲ್ಲಿನ ತಮ್ಮ ಮಗನ ಮನೆಯಲ್ಲಿ ಎಸ್‌.ಎ.ನಾಗಮ್ಮ ಕೊನೆಯುಸಿರೆಳೆದಿದ್ದಾರೆ.

ಸಹೋದರಾದ ಎಸ್.ಎ.ಚಿನ್ನೇಗೌಡ, ಎಸ್‌.ಎ.ಗೋವಿಂದರಾಜು, ಎಸ್.ಎ.ಶ್ರೀನಿವಾಸ್, ಸಹೋದರಿ ಜಯಮ್ಮ, ಮಗ ಮಹೇಶ್ ಮತ್ತು ಮೊಮ್ಮಕ್ಕಳನ್ನು ಎಸ್‌.ಎ.ನಾಗಮ್ಮ ಅಗಲಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಂದೆ ಹೃದಯಾಘಾತದಿಂದ ನಿಧನರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net