

ನವದೆಹಲಿ: ಒಂದೇ ತಿಂಗಳಿನಲ್ಲಿ ನಾಲ್ವರು ಖ್ಯಾತ ಗಾಯಕರು ಜೀವ ಕಳೆದುಕೊಂಡಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ಯುವ ಗಾಯಕ ಮೃತಪಟ್ಟಿದ್ದಾರೆ. 22 ವರ್ಷದ ಶೀಲ್ ಸಾಗರ್ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಇವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆಯಾದರೂ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕೇರಳದಲ್ಲಿ ಖ್ಯಾತ ಗಾಯಕ ಎಡವ ಬಶೀರ್ ಹಾಡುತ್ತಿರುವಾಗಲೇ ವೇದಿಕೆ ಮೇಲೆ ಕುಸಿದು ಮೃತಪಟ್ಟಿದ್ದರು. ಬಾಲಿವುಡ್ ಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ ಅಲಿಯಾಸ್ ಕೆಕೆ ಹೃದಯಾಘಾತಕ್ಕೆ ಬಲಿಯಾಗಿದ್ದರು. ಕಳೆದ ವಾರವಷ್ಟೇ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ದುಷ್ಕರ್ಮಿಗಳು ಗುಂಡು ಹೊಡೆದು ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಯುವ ಗಾಯಕನ ಸಾವು ಸಂಗೀತ ಲೋಕವನ್ನು ದಿಗ್ಭ್ರಮೆಗೆ ಒಳಪಡಿಸಿದೆ.
ಪಿಯಾನೋ, ಗಿಟಾರ್ ಮತ್ತು ಸ್ಯಾಕ್ಸೋ ಫೋನ್ ಸೇರಿದಂತೆ ಹಲವು ಸಂಗೀತ ವಾದ್ಯಗಳಲ್ಲಿ ಈ ಎಳವೆಯಲ್ಲಿ ಪಳಗಿದವರು ಶೀಲ್ ಸಾಗರ್. ಜತೆಗೆ ಗಾಯಕರಾಗಿಯೂ ಪ್ರಸಿದ್ಧಿಯಾದವರು. 22ನೇ ವಯಸ್ಸಿನಲ್ಲಿಯೇ ಇವರು ಸಹಸ್ರಾರು ಕಾರ್ಯಕ್ರಮಗಳು ನೀಡಿ ಜನಪ್ರಿಯರಾಗಿದ್ದರು. ಹಲವಾರು ಸಂಗೀತ ಆಲ್ಬಂಗಳನ್ನೂ ಹೊರ ತಂದಿದ್ದಾರೆ.