ಶಿಲ್ಪಾ ಶಿರೋಡ್‌ಕರ್‌ಗೆ ಕರೊನಾ ಪಾಸಿಟಿವ್‌: ಜಾಲತಾಣದಲ್ಲಿ ಮಾಹಿತಿ ನೀಡಿದ ನಟಿ

shilpa
Published on

ಹೈದರಾಬಾದ್​: ತೆಲುಗು ನಟಿ ಶಿಲ್ಪಾ ಶಿರೋಡ್​ಕರ್​ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಸದ್ಯ ಇವರು ದುಬೈನಲ್ಲಿ ವಾಸಿಸುತ್ತಿದ್ದಾರೆ. ತಮಗೆ ಕರೊನಾ ಸೋಂಕು ತಗುಲಿರುವ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ತಿಳಿಸಿದ್ದಾರೆ.

ಇವರು ಸೂಪರ್​ಸ್ಟಾರ್​ ಮಹೇಶ್​ ಬಾಬು ಅವರ ಅತ್ತಿಗೆ ಕೂಡ. ಮಾತ್ರವಲ್ಲದೇ ನಟಿ ನಮ್ರತಾ ಶಿರೋಡ್​ಕರ್​ ಅವರ ಸಹೋದರಿ.

ಕರೊನಾದಿಂದ ಎಚ್ಚರವಾಗಿರಿ, ಎಲ್ಲರೂ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಿ. ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲನೆ ಮಾಡಿ ಎಂದು ಇನ್‌ಸ್ಟಾಗ್ರಾಂನಲ್ಲಿ ಅವರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net