VIDEO: ‘ಆಟೋರಾಜ’ನಾದ ಸಲ್ಮಾನ್‌ ಖಾನ್‌- ರಸ್ತೆಯಲ್ಲಿ ನೂಕುನುಗ್ಗಲು: ವಿಡಿಯೋ ವೈರಲ್‌

salman
Published on

ಪನ್ವೇಲ್​ (ಮಹಾರಾಷ್ಟ್ರ): ಕೆಲವು ದಿನಗಳ ಹಿಂದಷ್ಟೇ ಹಾವು ಕಚ್ಚಿಸಿಕೊಂಡು ಸುದ್ದಿಯಾಗಿದ್ದ ನಟ ಸಲ್ಮಾನ್‌ ಖಾನ್‌, ಈ ನೋವಿನಲ್ಲಿಯೇ ಹುಟ್ಟುಹಬ್ಬವನ್ನೂ ಆಚರಿಸಿಕೊಂಡು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದವರು. ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಒಂದೊಂದು ವಿಷಯಗಳನ್ನು ಶೇರ್‌ ಮಾಡುತ್ತಾ ಸದಾ ಸುದ್ದಿಯಲ್ಲಿರುವ ಈ ನಟ ಈಗ ಆಟೋ ಓಡಿಸಿ ಭಾರಿ ವೈರಲ್‌ ಆಗಿದ್ದಾರೆ.

ಸಾಮಾನ್ಯ ಎಲ್ಲಾ ನಟ-ನಟಿಯರಿಗೂ ಇರುವಂತೆ ಸಲ್ಮಾನ್‌ ಖಾನ್‌ಗೂ ಐಷಾರಾಮಿ ಕಾರಿನ ಕ್ರೇಜ್‌. ಇವರ ಬಳಿ ಇರುವ ಕಾರುಗಳಿಗೆ ಲೆಕ್ಕವೇ ಇಲ್ಲ. ಆದರೆ ಇದೀಗ ಅವರು ಕಾರು ಬಿಟ್ಟು ಆಟೋ ಓಡಿಸಿ ಸುದ್ದಿ ಮಾಡಿದ್ದಾರೆ. ಇವರು ರಸ್ತೆಗೆ ಇಳಿಯುತ್ತಿದ್ದಂತೆಯೇ ಅವರನ್ನು ನೋಡಲು ರಸ್ತೆಯಲ್ಲಿ ನೂಕುನುಗ್ಗಲು ಉಂಟಾಗಿ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು.

ಮಹಾರಾಷ್ಟ್ರದ ರಾಯಘಡ್​ ಜಿಲ್ಲೆಯಲ್ಲಿರುವ ಪನ್ವೇಲ್​ನಲ್ಲಿ ಸಲ್ಮಾನ್​ ಖಾನ್​ ಅವರು ಫಾರ್ಮ್​ಹೌಸ್​ ಇದೆ. ತಮ್ಮ ವಿರಾಮದ ವೇಳೆಯನ್ನು ಹೆಚ್ಚಾಗಿ ಖಾನ್‌ ಇಲ್ಲಿಯೇ ಕಳೆಯುತ್ತಾರೆ. ಅವರ ಹುಟ್ಟುಹಬ್ಬ ಕೂಡ ಇಲ್ಲಿಯೇ ನಡೆದಿತ್ತು. ಇದೀಗ ಇಲ್ಲಿ ಆಟೋ ಓಡಿಸಿ, ಸುದ್ದಿ ಮಾಡಿದ್ದಾರೆ.

ಬಹಳ ಖುಷಿಯಲ್ಲಿ ಆಟೋ ಓಡಿಸಿರುವುದು ಹಾಗೂ ಜನರು ಜಮಾಯಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net