‘ಶಾಂತಿ ಮಂತ್ರ ಪಠಿಸುತ್ತಾ ಕುಳಿತುಕೊಂಡ್ರೆ ಆಗಲ್ಲ, ಗೋ ರಕ್ಷಣೆ ಮಾಡೋದಿದ್ರೆ ಕೈಯಲ್ಲಿ ತಲ್ವಾರ್‌ ಹಿಡಿಯಿರಿ...’

sadhwi
Published on

ಉಡುಪಿ: ಗೋವುಗಳ ಹಾವಳಿ ಹೆಚ್ಚುತ್ತಿದ್ದು, ರಾತ್ರೋರಾತ್ರಿ ದನ-ಕರುಗಳನ್ನು ಕದ್ದೊಯ್ಯುತ್ತಿರುವವರ ವಿರುದ್ಧ ಕಿಡಿ ಕಾರಿರುವ ಸಾಧ್ವಿ ಸರಸ್ವತಿ, ಶಾಂತಿ ಮಂತ್ರ ಪಠಿಸುತ್ತಾ ಕುಳಿತುಕೊಂಡ್ರೆ ಆಗಲ್ಲ, ತಲ್ವಾರ್‌ ಖರೀದಿಸಿ, ಗೋವು ರಕ್ಷಿಸಿ ಎಂದು ಹೇಳಿದ್ದಾರೆ.

ದೇಶದಲ್ಲಿ ಗೋವು ಕಳ್ಳರ ಹಾವಳಿ ವಿಪರೀತವಾಗಿದೆ. ಕೊಟ್ಟಿಗೆಗಳಿಗೆ ನುಗ್ಗಿ ಗೋವುಗಳನ್ನು ಕಳ್ಳತನ ಮಾಡಲಾಗುತ್ತಿದೆ. ಇಂಥ ಜನರಿಗೆ ಅವರ ಭಾಷೆಯಿಂದಲೇ ಉತ್ತರ ಕೊಡಬೇಕಿದೆ. ಕಲ್ಲಿಗೆ ಕಲ್ಲೇ ಉತ್ತರ, ಬಾಣಕ್ಕೆ ಬಾಣವೇ ಉತ್ತರ. ಆದ್ದರಿಂದ ಪ್ರತಿಯೊಬ್ಬರೂ ತಲ್ವಾರ್‌ ಖರೀದಿ ಮಾಡಿ ನಿಮ್ಮನಿಮ್ಮ ಮನೆಯ ಗೋವುಗಳನ್ನು ರಕ್ಷಿಸಿಕೊಳ್ಳಿ ಎಂದಿದ್ದಾರೆ.

ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಸಾಧ್ವಿ, ‘ಸ್ಮಾರ್ಟ್‌ಪೋನ್‌, ಕಂಪ್ಯೂಟರ್ ಎಂದೆಲ್ಲಾ ಹಲವಾರು ಸಾವಿರ, ಲಕ್ಷ ಲಕ್ಷ ಕೊಟ್ಟು ಖರೀದಿ ಮಾಡುತ್ತೀರಾ. ಆದರೆ ತಲ್ವಾರ್‌ಗೆ ಒಂದೇ ಸಾವಿರ ರೂಪಾಯಿ ಸಾಕು. ಅದನ್ನು ಮೊದಲು ಖರೀದಿ ಮಾಡಿ. ಗೋವಿನ ಪಾಲನೆ-ಪೋಷಣೆ ಎಷ್ಟು ಕಷ್ಟ ಎಂದು ಅದನ್ನು ಸಾಕಿದವರಿಗೆ ತಿಳಿದಿದೆ. ಆದರೆ ಈ ಕಳ್ಳರು ಅದನ್ನು ಕದ್ದು ಕಡಿಯುತ್ತಿದ್ದಾರೆ. ಇನ್ನು ಸುಮ್ಮನೇ ಕುಳಿತುಕೊಂಡರೆ ಪ್ರಯೋಜನವಿಲ್ಲ. ಆದ್ದರಿಂದ ಅವರ ಭಾಷೆಯಲ್ಲಿಯೇ ಉತ್ತರ ಕೊಡಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net